ಇಂದಿನಿಂದ ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಸೇವೆ ಪ್ರಾರಂಭ!!

ಬೆಂಗಳೂರು: ಇಂದಿನಿಂದ ಗ್ರಾಮ ಪಂಚಾಯಿತಿಗಳಲ್ಲಿ ಜನನ ಹಾಗೂ ಮರಣ ಪತ್ರಗಳ ನೋಂದಣಿಯನ್ನು ಮಾಡಿಸಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನನ, ಮರಣ ನೋಂದಣಿ ಮಾಡಿಸುವ ವ್ಯವಸ್ಥೆಗೆ ಒತ್ತು ನೀಡಲು, 30 ದಿನದ ಒಳಗೆ ನೋಂದಾಯಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ಸರ್ಕಾರವು ನೇಮಕವನ್ನು ಮಾಡಿದೆ.

Birth And Death Certificates

ಜುಲೈ 1ರಿಂದ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳು ಜನನ ಹಾಗೂ ಮರಣ ಉಪ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. 21 ದಿನದೊಳಗೆ ನೋಂದಾಯಿಸಿದರೆ ಪ್ರಮಾಣ ಪತ್ರವನ್ನು ಉಚಿತವಾಗಿ ವಿತರಿಸಲಾಗುವುದು. 21 ದಿನಗಳ ನಂತರ 30 ದಿನಗಳೊಳಗೆ ನೋಂದಾಯಿಸಿದರೆ 2 ರೂಪಾಯಿ ಶುಲ್ಕವನ್ನು ವಿಧಿಸಲಾಗುವುದು.

30 ದಿನದ ನಂತರ 1 ವರ್ಷದೊಳಗೆ ತಹಶೀಲ್ದಾರರ ಪತ್ರದ ಲಗತ್ತಿನ ಜೊತೆಗೆ 5ರೂಪಾಯಿ ಶುಲ್ಕವನ್ನು ಪಾವತಿಸಬೇಕು. 1 ವರ್ಷದ ನಂತರವಾದಲ್ಲಿ ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ ಆದೇಶದ ಪತ್ರ ಲಗತ್ತಿಸಿ 10 ರೂಪಾಯಿ ಶುಲ್ಕವನ್ನು ಪಾವತಿಸಬೇಕಿದೆ.

ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ [email protected][email protected], ಸಹಾಯವಾಣಿ ಸಂಖ್ಯೆ 1800 425 6578 ಸಂಪರ್ಕಿಸಬಹುದು.

ಇತರೆ ವಿಷಯಗಳು:

ಬಡವರ ಬದುಕು ಇನ್ಮುಂದೆ ಹಸನು.!! ಸರ್ಕಾರದ ಈ ಸ್ಕೀಮ್‌ ಬಗ್ಗೆ ನಿಮಗೆಷ್ಟು ಗೊತ್ತು??

ಸರ್ಕಾರದಿಂದ ಬಂತು ನ್ಯೂ ಅಪ್ಡೇಟ್.!!‌ ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಸಿಗುತ್ತೆ ಕೈ ತುಂಬಾ ದುಡ್ಡು

Leave a Reply

Your email address will not be published. Required fields are marked *