ಹಲೋ ಸ್ನೇಹಿತರೇ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ಬಿಪಿಎಲ್ ಕಾರ್ಡ್ ನೀಡುತ್ತಿವೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಸಿಗುವ ಪಡಿತರ ಮಾತ್ರವಲ್ಲದೇ ಆರೋಗ್ಯ ಯೋಜನೆ, ಸರ್ಕಾರದ ಗ್ಯಾರಂಟಿ ಯೋಜನೆ, ಶಿಕ್ಷಣ ಸೇರಿದಂತೆ ಹಲವು ರೀತಿಯಲ್ಲಿಯೂ ಉಚಿತ ಪ್ರಯೋಜನಗಳು ದೊರೆಯುತ್ತಿವೆ. ಆದ್ರೆ ಕರ್ನಾಟಕ ಸರಕಾರ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ.
ಕರ್ನಾಟಕದ ಒಟ್ಟು ಜನಸಂಖ್ಯೆಯ ಪೈಕಿ ಶೇ.80 ರಷ್ಟು ಜನರು ಬಿಪಿಎಲ್ ಕಾರ್ಡ್ ಹೊಂದಿದ್ದು, 4 ಕೋಟಿಗೂ ಅಧಿಕ ಕುಟುಂಬಗಳು ಬಿಪಿಎಲ್ ಯೋಜನೆಯ ಪ್ರಯೋಜನ ಪಡೆಯುತ್ತಿವೆ. ಆದರೆ ಕರ್ನಾಟದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ವಾಸ ಮಾಡುತ್ತಿಲ್ಲ. ಅರ್ಹತೆ ಇಲ್ಲದವರೂ ಕೂಡ ಬಿಪಿಎಲ್ ಪ್ರಯೋಜನ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ.
ವಿಧಾನ ಮಂಡಲ ಅಧಿವೇಶನದಲ್ಲಿಯೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಅನರ್ಹ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡಲು ಸೂಚನೆಯನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಹೊಸ ರೂಲ್ಸ್ ಜಾರಿ ಮಾಡಿದ್ದು, ಕಳೆದ 6 ತಿಂಗಳಿನಿಂದ ಯಾವ ಕುಟುಂಬಗಳು ರೇಷನ್ ಪಡೆದಿಲ್ಲವೋ ಅಂತಹ ಬಿಪಿಎಲ್ ಕುಟುಂಬಗಳ ರೇಷನ್ ಕಾರ್ಡ್ ರದ್ದಾಗಲಿದೆ.
ಶಾಲೆಯ ನಿಯಮದಲ್ಲಿ ಬದಲಾವಣೆ! ಪೋಷಕರೇ ಹೊಸ ಮಾರ್ಗಸೂಚಿ ಬಗ್ಗೆ ಎಚ್ಚರವಿರಲಿ
ಕರ್ನಾಟಕದಲ್ಲಿ ಸಮಾರು 1.29ಕೋಟಿಯಷ್ಟು ಅರ್ಹ ಬಿಪಿಎಲ್ ಫಲಾನುಭವಿಗಳು ಇದ್ದಾರೆ. ಉಳಿದಂತೆ ಅನರ್ಹರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಅಲ್ಲದೇ ಹೊಸದಾಗಿ 2.95 ಲಕ್ಷ ಜನರು ಬಿಪಿಎಲ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೊಸ ಅರ್ಜಿಗಳಿಗಾಗಿ ಪರಿಶೀಲನೆಯ ಕಾರ್ಯ ನಡೆಯುತ್ತಿದೆ.
ಈ ನಡುವಲ್ಲೇ ಅನರ್ಹರಾಗಿರುವ ಸುಮಾರು 20 ಲಕ್ಷ ಬಿಪಿಎಲ್ ಕಾರ್ಡ್‌ಗಳು ರದ್ದಾಗುವುದು ಖಚಿತ ಎನ್ನಲಾಗುತ್ತಿದೆ. ಒಂದೊಮ್ಮೆ ಬಿಪಿಎಲ್ ಕಾರ್ಡ್ ರದ್ದಾದ್ರೆ ನಿಮಗೆ ಪಡಿತರ ಸಾಮಗ್ರಿಗಳು ಮಾತ್ರವಲ್ಲದೇ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯ ಸೌಲಭ್ಯಗಳು ಕೂಡ ದೊರೆಯುವುದಿಲ್ಲ.
ಬಿಪಿಎಲ್ ಅನರ್ಹರ ಲಿಸ್ಟ್ : ನಿಮ್ಮ ಹೆಸರಿದ್ಯಾ ಚೆಕ್ ಮಾಡಿ
- ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ಗೆ ಭೇಟಿ ನೀಡಿ
- ವೆಬ್‌ಸೈಟ್‌ನ ಮುಖಪುಟದಲ್ಲಿ ಕಾಣಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ
- ನಂತರ ರದ್ದು ಅಥವಾ ವಜಾ ಆಗಿರುವ ಆಯ್ಕೆಯನ್ನು ಕ್ಲಿಕ್ ಮಾಡಿ
- ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ
- ಬಿಪಿಎಲ್ ಅನರ್ಹರ ಲಿಸ್ಟ್ ಲಭ್ಯವಾಗಲಿದೆ. ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಚೆಕ್ ಮಾಡಿ
ಇತರೆ ವಿಷಯಗಳು:
ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!! ಈ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ
ರೈಲ್ವೇ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿ: 44+ ಹುದ್ದೆಗಳಿಗೆ ಅರ್ಜಿ ಆಹ್ವಾನ