ಹಲೋ ಸ್ನೇಹಿತರೆ, ಹೊಸದಾಗಿ ಈಗಾಗಲೇ ಅನೇಕ ಜನರು BPL ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬಿಪಿಎಲ್ ಕಾರ್ಡ್ ವಿತರಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಸದ್ಯಕ್ಕೆ ಬಿಪಿಎಲ್ ಕಾರ್ಡ್ ವಿತರಣೆ ಇಲ್ಲ ಹೇಳಿದ್ದ ಸರ್ಕಾರ ಈಗ, ಇದರ ಜೊತೆ ಹಳೆಯ ಅರ್ಜಿಗಳ ವಿಲೇವಾರಿ ನಂತರವೇ ಹೊಸ ಅರ್ಜಿಗಳಿಗೆ ಆಹ್ವಾನಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಲಾಗಿದೆ.
ಸರ್ಕಾರವು ಬಡ ಕುಟುಂಬಗಳಿಗೆ ಉಚಿತ ಆಹಾರ ಧಾನ್ಯ ವಿತರಣೆಯ ಆದ್ಯತೆ ಮೇರೆಗೆ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಬೇಕಿದೆ. ಸುಮಾರು ಎರಡು ವರ್ಷಗಳಿಂದ ಹೊಸ ಕಾರ್ಡ್ ಗೆ ಅರ್ಜಿ ಆಹ್ವಾನಿಸಲಾಗಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ, ಹೆಚ್ಚುವರಿ ಅಕ್ಕಿ ಬದಲು ಹಣ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದೆ.
ಸುಮಾರು ಎರಡೂವರೆ ಲಕ್ಷ ಅರ್ಜಿಗಳು ವಿಲೇವಾರಿ ಮಾಡಲು ಬಾಕಿ ಇದ್ದು, ಇನ್ನೂ ನಾಲ್ಕೈದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಹೊಸದಾಗಿ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ.
ರೈತ ಮಹಿಳೆಯರಿಗೆ ಬಂಪರ್ ಸುದ್ದಿ.!! ಈ ಯೋಜನೆಡಿ ನಿಮ್ಮದಾಗಲಿದೆ 60 ರಿದ 80 ಸಾವಿರ ರೂ.
ಹೊಸದಾಗಿ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಿದರೆ ಪಡಿತರ ಕಾರ್ಡ್ ಪಡೆದುಕೊಂಡವರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೀಡಬೇಕಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎನ್ನುವ ಕಾರಣದಿಂದ ಅರ್ಜಿಗಳನ್ನು ಆಹ್ವಾನಿಸದೇ ಸರ್ಕಾರ ನೆಪ ನೀಡುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಉಚಿತ ಆಹಾರ ಧಾನ್ಯ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, ಈಗಾಗಲೇ ಹೊಂದಿರುವ ಗುರಿಯನ್ನು ಮೀರಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಮತ್ತೆ ಲಕ್ಷಾಂತರ ಕಾರ್ಡ್ ಗಳನ್ನು ವಿತರಿಸಿದರೆ ಸರ್ಕಾರಕ್ಕೆ ಹೊರೆಯಾಗಲಿದೆ. ರಾಜ್ಯದಲ್ಲಿ 2013ರ ಜನಸಂಖ್ಯೆ ಆಧಾರದ ಮೇಲೆ 1.15 ಕೋಟಿ ಪಡಿತರ ಚೀಟಿ ವಿತರಿಸುವ ಗುರಿ ನಿಗದಿಪಡಿಸಿದ್ದು, ಆದರೆ ಇಷ್ಟರೊಳಗೆ 1.48 ಕೋಟಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಹಳೆಯ ಅರ್ಜಿಗಳೇ ಸುಮಾರು 2 ಲಕ್ಷಕ್ಕೂ ಅಧಿಕ ಬಾಕಿ ಇರುವುದರಿಂದ ಇವುಗಳನ್ನು ವಿಲೇವಾರಿ ಮಾಡಿದ ನಂತರದಲ್ಲಿ ಹೊಸ ಅರ್ಜಿಗಳ ಸ್ವೀಕರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಇತರೆ ವಿಷಯಗಳು:
ಇಂದಿರಾ ಕ್ಯಾಂಟಿನ್ ಮೆನು ಆರಂಭ: ಯಾವ ಟೈಮ್‌ಗೆ ಯಾವ ಊಟ ಗೊತ್ತಾ??
AVNL ಉದ್ಯೋಗ ಅವಕಾಶ.! 271 ಖಾಲಿ ಹುದ್ದೆಗಳು; ಇಂದೇ ಅಪ್ಲೇ ಮಾಡಿ