ಹಲೋ ಸ್ನೇಹಿತರೇ, BPL ಕಾರ್ಡ್ ಈಗ ನಮ್ಮ ಬಳಿ ಇರಬೇಕಾದ ಬಹಳ ಮುಖ್ಯವಾದ ಒಂದು ದಾಖಲೆ ಆಗಿದೆ ಎಂದ್ರೆ ತಪ್ಪಲ್ಲ. ಅದರಲ್ಲೂ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಅನಂತರ ಕೊಡುತ್ತಿರುವ ಗ್ಯಾರೆಂಟಿ ಸೌಲಭ್ಯಗಳನ್ನು ಪಡೆಯಲು BPL ರೇಷನ್ ಕಾರ್ಡ್ ಕಡ್ಡಾಯವಾಗಿ ಇರಲೇಬೇಕು.
ಹಾಗಾಗಿಯೇ ಜನರು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಕಾಯುತ್ತಿದ್ದಾರೆ. ಆದ್ರೆ ಇನ್ಮುಂದೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಸರ್ಕಾರದ ಕೆಲವು ರೂಲ್ಸ್ ಗಳನ್ನು ಫಾಲೋ ಮಾಡಲೇಬೇಕು
ರೇಷನ್ ಕಾರ್ಡ್ ಪ್ರಯೋಜನಗಳು
ಬಿಪಿಎಲ್ ರೇಷನ್ ಕಾರ್ಡ್ ಹೊಂದುವುದರಿಂದ ಏನೆಲ್ಲಾ ಪ್ರಯೋಜನವಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಉಚಿತವಾಗಿ ಪಡಿತರವನ್ನು ಪಡೆಯಬಹುದು, ಸರ್ಕಾರಿ ಅಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಔಷಧಿಯನ್ನು ಉಚಿತವಾಗಿ ಪಡೆಯಬಹುದು ಹಾಗೂ ಇನ್ನು ಹಲವು ಪ್ರಯೋಜನಗಳು ಬಿಪಿಎಲ್ ಕಾರ್ಡ್ ಇಂದ ಸಿಗಲಿದೆ.
ಇನ್ನು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳದೇ ಇರುವಂಥವರು ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ಸಹ ಸರ್ಕಾರವು ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು ಮಾಡಿಲ್ಲ. ಪ್ರಸ್ತುತ ನಮ್ಮ ರಾಜ್ಯದಲ್ಲಿ 1 ಕೋಟಿಗಿಂತ ಹೆಚ್ಚಿನ ಕುಟುಂಬಗಳ ಬಳಿ BPL ಕಾರ್ಡ್ ಇದೆ. ಅವುಗಳಲ್ಲಿ ನಕಲಿ BPL ಕಾರ್ಡ್ ಹೊಂದಿರುವವರನ್ನು ಗುರುತಿಸಿ ಅಂಥವರ ರೇಶನ್ ಕಾರ್ಡ್ ಗಳನ್ನು ರದ್ದು ಗೊಳಿಸಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ.
ಈ ನಿಟ್ಟಿನಲ್ಲಿ ಸುಮಾರು 35 ಲಕ್ಷ ದಷ್ಟು BPL ಕಾರ್ಡ್ ಗಳು ರದ್ದಾಗಬಹುದು ಎಂದು ಸಹ ಹೇಳಲಾಗುತ್ತಿದೆ. BPL ಕಾರ್ಡ್ ಮೋಸ ಜಾಸ್ತಿ ಆಗುತ್ತಿರುವ ಕಾರಣ ಸರ್ಕಾರವು ಈಗ ಸ್ಟ್ರಿಕ್ಟ್ ಆಗಿದೆ.
ಈಗಾಗಲೇ ರೇಷನ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಿರುವವರಿಗೆ ಸಹ ಇನ್ನು ಹೊಸ ರೇಷನ್ ಕಾರ್ಡ್ ಅನ್ನು ವಿತರಣೆ ಆಗಿಲ್ಲ. ಅದ್ರ ಬೆನ್ನಲ್ಲೇ ಈಗ ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದೆ ಸರ್ಕಾರ.
ಅದೇನು ಎಂದ್ರೆ ಮುಂದಿನ ಸಾರಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಶುರುವಾದಾಗ ಸರ್ಕಾರದ 6 ನಿಯಮಗಳನ್ನು ಎಲ್ಲರೂ ಸಹ ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದೇ ಹೋದ್ರೆ ಅಂಥವರಿಗೆ BPL ರೇಷನ್ ಕಾರ್ಡ್ ಸಿಗುವುದಿಲ್ಲ. ಹಾಗಿದ್ದಲ್ಲಿ ಸರ್ಕಾರದ ನಿಯಮಗಳು ಯಾವುವು ಎಂದು ತಿಳಿಯೋಣ..
ಗೃಹಲಕ್ಷ್ಮಿ ಯೋಜನೆಯಲ್ಲಿ ಸಿಕ್ತು ಬಿಗ್ ಟ್ವಿಸ್ಟ್.! ಇನ್ಮುಂದೆ ಈ ರೂಲ್ಸ್ ಕಡ್ಡಾಯ
ಸರ್ಕಾರದ ಹೊಸ ನಿಯಮಗಳು
*ಯಾವ ವ್ಯಕ್ತಿಯ ಬಳಿಯಲ್ಲಿ 3 ಹೆಕ್ಟರ್ ಗಿಂತ ಹೆಚ್ಚು ಸ್ವಂತ ಭೂಮಿ ಇರುತ್ತದೆಯೋ ಅಂಥವರಿಗೆ ಹಾಗೂ ಸಿಟಿ ಗಳಲ್ಲಿ 1000 ಅಡಿಗಿಂತ ಹೆಚ್ಚು ದೊಡ್ಡ ಮನೆಯನ್ನು ಹೊಂದಿರುವವರಿಗೆ BPL ರೇಷನ್ ಕಾರ್ಡ್ ಸಿಗೋದಿಲ್ಲ.
*ಸರ್ಕಾರದ ಕೆಲಸ ಇರುವ ಕುಟುಂಬಗಳಿಗೆ ಬಿಪಿಎಲ್ ರೇಶನ್ ಕಾರ್ಡ್ ಸಿಗೋದಿಲ್ಲ.
*ಯಾರೆಲ್ಲಾ ತೆರಿಗೆ ಪಾವತಿಗೆ ಮಾಡುತ್ತಿದ್ದಾರೋ ಅಂಥವರಿಗೆ ಸಹ ರೇಷನ್ ಕಾರ್ಡ್ ಸಿಗೋದಿಲ್ಲ.
*ವೈಟ್ ಬೋರ್ಡ್ ಖಾಸಗಿ ವಾಹನವನ್ನು ಹೊಂದಿರುವವರಿಗೆ ಸಹ ರೇಷನ್ ಕಾರ್ಡ್ ಸಿಗೋದಿಲ್ಲ..
*1.2 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇದ್ದರೆ ಅಂಥವರಿಗೆ ಹೊಸ BPL ರೇಷನ್ ಕಾರ್ಡ್ ಸಿಗೋದಿಲ್ಲ.
ಮಾಹಿತಿಯಲ್ಲಿ ಸತ್ಯವಿರಲಿ
ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ಎನ್ನುವ ಆಸೆಯಲ್ಲಿ ಸುಳ್ಳು ಮಾಹಿತಿಗಳನ್ನು, ಸುಳ್ಳು ದಾಖಲೆಗಳನ್ನು ಸರ್ಕಾರಕ್ಕೆ ನೀಡಿ ರೇಷನ್ ಕಾರ್ಡ್ ಪಡೆಯುವ ಪ್ರಯತ್ನ ಮಾಡಬೇಡಿ. ಆ ದಾಖಲೆಗಳು, ಮಾಹಿತಿಗಳು ಸುಳ್ಳು ಎಂದು ಸರ್ಕಾರಕ್ಕೆ ಗೊತ್ತಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಹಾಗಾಗಿ ಸರ್ಕಾರಕ್ಕೆ ಮೋಸ ಮಾಡದೇ ಹುಷಾರಾಗಿರಿ.
ಇತರೆ ವಿಷಯಗಳು:
ಮಹಿಳೆಯರಿಗೆ ಬಂಪರ್ ಕೊಡುಗೆ! ಈ ಕಾರ್ಡ್ ಇದ್ರೆ ಸಾಕು ಸಿಗಲಿದೆ ₹11,000
ರೇಷನ್ ಕಾರ್ಡ್ ಉಳ್ಳವರಿಗೆ ಬಿಗ್ ಶಾಕ್.!!! ಇನ್ಮುಂದೆ ಈ 5 ನಿಯಮ ಪಾಲನೆ ಕಡ್ಡಾಯ