ಅನ್ನದಾತರಿಗೆ ಸಿಗಲಿದೆ ಬೆಳೆ ಹಾನಿ ಪರಿಹಾರ.!! 39 ಲಕ್ಷ ರೈತರ ಖಾತೆಗೆ ಬಂದೇ ಬಿಡ್ತು ಹಣ

ಬೆಳೆ ಹಾನಿ ಪರಿಹಾರಹಲೋ ಸ್ನೇಹಿತರೇ, ರೈತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿವೊಂದನ್ನ ನೀಡಿದ್ದು, ಕಳೆದ ವರ್ಷವು ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ಹಾನಿಯಾದ 39 ಲಕ್ಷದಷ್ಟು ರೈತರಿಗೆ ಸುಮಾರು 3535.30 ಕೋಟಿ ರು.ಗಳ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಪಾವತಿಸಲಾಗುತ್ತಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರವರು ಇಂದು ತಿಳಿಸಿದ್ದಾರೆ.

Crop damage compensation

ವಿಧಾನ ಪರಿಷತ್ ನಲ್ಲಿ ನಿನ್ನೆ ಕೇಶವ್ ಪ್ರಸಾದ್ ರವರ ಪ್ರಶ್ನೆಗೆ ಉತ್ತರಿಸಿದ ಇವರು, ಅಲ್ಲದೆ ಹಿಂಗಾರು ಹಂಗಾಮಿನಲ್ಲಿ ಸಹ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಅತಿ ಮಳೆಯಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿ ಉಂಟಾಗಿತ್ತು. ಈ ಎರಡು ಜಿಲ್ಲೆಗಳ ಸುಮಾರು 4859 ರೈತರಿಗೆ 5.66 ಕೋಟಿ ರು.ಗಳ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.

ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಪರಿಹಾರವನ್ನು ಸರ್ಕಾರ ನೀಡಲಾಗಿದೆ. ಸುಪ್ರೀಂ ಕೋರ್ಟ್‌ಗೆ ಹೋದ ಅನಂತರ ಕೇಂದ್ರ ಸರ್ಕಾರವು 3454.22 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ನೌಕರರಿಗೆ ಹಣಕಾಸು ಸಚಿವರಿಂದ ‘ಖಾತರಿ’ ಯೋಜನೆ!

ಈ ಪೈಕಿ 32.66.42 ಕೊಟಿ ರು.ಗಳನ್ನು ಬೆಳೆ ಹಾನಿ ಪರಿಹಾರವನ್ನು ಹಾಗೂ 232.42 ಕೋಟಿ ರು.ಗಳನ್ನು ಜೀವನೋಪಾಯದ ಪರಿಹಾರಕ್ಕೆ ಬಿಡುಗಡೆಯನ್ನು ಮಾಡಿದೆ.

ಇದರ ಜೊತೆಗೆ ರಾಜ್ಯ ಸರ್ಕಾರದಿಂದ 1296 ಕೋಟಿ ರು.ಗಳನ್ನು ಬಿಡುಗಡೆಯನ್ನು ಮಾಡಿದೆ ಎಂದರು. ವಿಶೇಷವಾಗಿ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಕಾಲುವೆಯಿಂದ ನೀರು ಬಿಟ್ಟರೂ ನೀರು ತಲುಪದ ಕಾಲುವೆಯ ಕೊನೆಯಲ್ಲಿರುವ ರೈತರು ಮತ್ತು ನೀರು ಬಿಡುಗಡೆ ಮಾಡಲು ಆಗದೇ ಬೆಳೆ ಹಾನಿಗೆ ಒಳಗಾದ ರೈತರಿಗೂ ಸಹ ಪರಿಹಾರವನ್ನು ನೀಡಲಾಗಿದೆ ಎಂದು ವಿವರಿಸಿದರು.

ಇತರೆ ವಿಷಯಗಳು:

ಚಾಲಕರಿಗೆ ದುಬಾರಿ ಮತ್ತೊಂದು ಹೊರೆ! ‘ಮಾಲಿನ್ಯ ನಿಯಂತ್ರಣ’ ಪ್ರಮಾಣಪತ್ರಗಳ ಶುಲ್ಕ ಹೆಚ್ಚಳ

ಬ್ಯಾಂಕ್‌ ಗ್ರಾಹಕರಿಗೆ ಭರ್ಜರಿ ಸುದ್ದಿ.!! ಈ ಸ್ಕೀಮ್‌ ನಿಂದ ನಿಮ್ಮದಾಗಲಿದೆ ಸ್ಮಾರ್ಟ್‌ ಪಿಂಚಣಿ

Leave a Reply

Your email address will not be published. Required fields are marked *