ಹಲೋ ಸ್ನೇಹಿತರೆ, ದೇಶದ ಎಲ್ಲಾ ರೈತರು ಬೆಳೆ ವಿಮೆ ಪಡೆಯಲು ಅವಕಾಶ ಒದಗಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಹ ಬಿಡುಗಡೆ ಮಾಡಲಾಗಿದ್ದೂ, ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆರ್ದ್ರತೆ ಇತ್ಯಾದಿ ಹವಾಮಾನ ಅಂಶಗಳಾದ ಮಾಹಿತಿಗಳನ್ನು ಪರಿಶೀಲಿಸಿ ಕೇಂದ್ರ ಮತ್ತು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಅಂಶಗಳ ಆಧಾರದ ಮೇಲೆ ಬೆಳೆ ವಿಮೆ ನಷ್ಟವನ್ನು ತೀರ್ಮಾನಿಸಲಾಗುತ್ತದೆ.
ಬೆಳೆಗಳ ವಿಮಾ ತಂತಿನ ಮೊತ್ತ ಹಾಗೂ ವಿಮೆ ಮೊತ್ತ:
ಮಾವು ಬೆಳೆಯಲ್ಲಿ ಪ್ರತಿ ಹೆಕ್ಟೇರ್ ದೊರೆಯುವ ವಿಮಾ ಮೊತ್ತ-80,000ರೂ, ರೈತರು ಪಾವತಿಸಬೇಕಾದ ದರ (ಶೇ.5%)-4,000 ರೂ. ದ್ರಾಕ್ಷಿ ಬೆಳೆಯಲ್ಲಿ ಪ್ರತಿ ಹೆಕ್ಟೇರ್ ಗೆ ದೊರೆಯುವ ವಿಮಾ ಮೊತ್ತ-2,80,000ರೂ, ರೈತರು ಪಾವತಿಸಬೇಕಾದ ದರ (ಶೇ.5%ಗಳಲ್ಲಿ)-14,000 ಮಾವು ಮತ್ತು ದ್ರಾಕ್ಷಿ ಬೆಳೆಯುವ ರೈತ ಬಾಂಧವರು ಈ ಯೋಜನೆಯಡಿ ತಮ್ಮ ಹೆಸರನ್ನು ನೊಂದಾಯಿಸಿ ತಂತಿನ ಹಣ ಪಾವತಿಸಿ ಉಪಯೋಗ ಪಡೆದುಕೊಳ್ಳುವುದು.
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗಧಿತ ಅರ್ಜಿಯೊಂದಿಗೆ
- ಪ್ರಸಕ್ತ ಸಾಲಿನ ಪಹಣಿ
- ಕಂದಾಯ ರಶೀದಿ
- ಖಾತೆ ಪುಸ್ತಕ
- ಬ್ಯಾಂಕ್ ಖಾತೆ ಪುಸ್ತಕ,
- ಆಧಾರ್ ನಕಲು ಪ್ರತಿ
- ಮತ್ತು
- ಸ್ವಯಂಘೋಷಿತ ಬೆಳೆ ವಿವರ
ಈ ಎಲ್ಲಾ ದಾಖಲೆಗಳೊಂದಿಗೆ ಹತ್ತಿರದ ರಾಷ್ಟ್ರೀಯ ಅಧಿಕೃತ ಬ್ಯಾಂಕು / ಸಾಮಾನ್ಯ ಸೇವಾ ಕೇಂದ್ರ/ ಗ್ರಾಮ ಒನ್ ಕೇಂದ್ರಗಳಲ್ಲಿ ನೊಂದಾಯಿಸಲು ಅವಕಾಶ ನೀಡಲಾಗಿದೆ. ವಿಮೆ ಮಾಡಿಸುವ ರೈತರು ಫ್ರೂಟ್ಸ್ ತಂತ್ರಾಂಶದ ನೋಂದಣಿ ಸಂಖ್ಯೆಯನ್ನು ಹೊಂದಿರಬೇಕು, ನೋಂದಣಿ ಸಂಖ್ಯೆಗೆ ಪಹಣಿಯ ವಿವರಗಳನ್ನು ಲಿಂಕ್ ಮಾಡಿರಬೇಗಾಗಿರುತ್ತದೆ. ನೋಂದಣಿ ಸಂಖ್ಯೆ ಹೊಂದಿಲ್ಲದ ರೈತರು ನೋಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬೇಕಿರುತ್ತದೆ.
ಇದನ್ನು ಸಹ ಓದಿ: ಆಭರಣ ಪ್ರಿಯರಿಗೆ ಬಂಪರ್ ಬ್ರೇಕಿಂಗ್ ನ್ಯೂಸ್.!! ಇನ್ನಷ್ಟು ಇಳಿಕೆ ಕಂಡ ಬಂಗಾರ
ಬೆಳೆ ಸಾಲ ಪಡೆದ ರೈತರನ್ನು ಸಂಬಂಧಿಸಿದ ಬ್ಯಾಂಕಿನವರು ವಿಮೆ ವ್ಯಾಪ್ತಿಗೆ ಅವರ ಹೆಸರನ್ನು ನೊಂದಾಯಿಸಲಿದ್ದು, ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ಆಸಕ್ತಿ ಇಲ್ಲದಿದ್ದಲ್ಲಿ ರೈತರು ಸಂಬಂಧಿಸಿದ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲು ಅವಕಾಶವಿರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರು ವಿನ್ಯಾಸಗೊಳಿಸಿದ ಹವಾಮಾನವನ್ನು ಆಧಾರಿಸಿದ ಬೆಳೆ ವಿಮೆ ಯೋಜನೆಗೆ KSHEMA(ಕ್ಷೇಮ) ಸಂಸ್ಥೆಯು ಅಧಿಸೂಚಿತ ವಿಮಾ ಸಂಸ್ಥೆಯಾಗಿದೆ. ವಿಮೆಗೆ ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನಾಂಕ ಆಗಿರುತ್ತದೆ.
ಇತರೆ ವಿಷಯಗಳು:
ಮೊಬೈಲ್ ಖರೀದಿ ಈಗ ಇನ್ನಷ್ಟು ಅಗ್ಗ! 15% ರಷ್ಟು ಬಂಪರ್ ಇಳಿಕೆ
ಬಜೆಟ್ ಮೂಲಕ ನೌಕರರಿಗೆ ಮೋದಿ ಗಿಫ್ಟ್! ಇನ್ಮುಂದೆ ಸಿಗತ್ತೆ ವೇತನದ 50% ಪಿಂಚಣಿ