ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಖುಷಿ ಸುದ್ದಿ ಸಿಗಲಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್‌ನಲ್ಲಿ ತುಟ್ಟಿ ಭತ್ಯೆಯಲ್ಲಿ ಶೇ.3 ರಷ್ಟು ‘DA’ ಹೆಚ್ಚಳ ಖಚಿತ ಘೋಷಿಸುವ ಸಾಧ್ಯತೆಯಿದೆ. ಇದು 2024ರ ಜುಲೈ 1 ರಿಂದಲೇ ಅನ್ವಯವಾಗಲಿದೆ.
ಡಿಎಯನ್ನು ಶೇ.3ರಷ್ಟು ಹೆಚ್ಚಳ ಮಾಡಿದಲ್ಲಿ ಒಟ್ಟು ತುಟ್ಟಿ ಭತ್ಯೆ ಶೇ.53 ಕ್ಕೆ ತಲುಪುತ್ತದೆ. ಆದರೆ ಕೋವಿಡ್ ಸಮಯದಲ್ಲಿ ಸ್ಥಗಿತಗೊಂಡಿರುವ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಗಾಗಿ ಸರ್ಕಾರ 18 ತಿಂಗಳ ಬಾಕಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಡಿಎ ಬಾಕಿ ಕುರಿತು ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲಾಯ್ತು. ‘COVID ಸಮಯದಲ್ಲಿ ತಡೆಹಿಡಿಯಲಾದ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ 18 ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರ ಬಿಡುಗಡೆ ಮಾಡಲಿದೆಯೇ ಎಂಬ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, “ಇಲ್ಲ” ಎಂದು ಉತ್ತರಿಸಿದ್ದಾರೆ.
2020 ರ ಜನವರಿ 1ರಿಂದ 2021ರ ಜನವರಿ ತಿಂಗಳವರೆಗಿನ ಮೂರು ಕಂತುಗಳ ತುಟ್ಟಿಭತ್ಯೆ ಮತ್ತು ಡಿಆರ್ ಸ್ಥಗಿತಗೊಳಿಸುವ ನಿರ್ಧಾರವನ್ನು ಕೋವಿಡ್ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾಗಿತ್ತು. ಆ ಸಮಯದಲ್ಲಿ ಸರ್ಕಾರಕ್ಕೂ ಆರ್ಥಿಕ ಅಡೆತಡೆಗಳಿದ್ದವು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ ಕೇಂದ್ರ ಸರ್ಕಾರವು ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇ.3ರಷ್ಟು ಹೆಚ್ಚಳ ಮಾಡುವ ಸಾಧ್ಯತೆಗಳು ನಿಚ್ಛಳವಾಗಿವೆ. ಡಿಎ ಶೇ.50ಕ್ಕಿಂತ ಹೆಚ್ಚಿದ್ದರೂ ಮೂಲ ವೇತನದೊಂದಿಗೆ ವಿಲೀನಗೊಳ್ಳುವುದಿಲ್ಲ. 8ನೇ ವೇತನ ಆಯೋಗ ರಚನೆಯಾಗುವವರೆಗೂ ಅದು ಹಾಗೆಯೇ ಮುಂದುವರಿಯಲಿದೆ. ವಿಲೀನದ ಬದಲಿಗೆ ಡಿಎ 50 ಪ್ರತಿಶತ ದಾಟಿದರೆ, ಎಚ್‌ಆರ್‌ಎ ಸೇರಿದಂತೆ ಭತ್ಯೆಗಳನ್ನು ಹೆಚ್ಚಿಸುವ ನಿಬಂಧನೆಗಳಿವೆ.
ಕಾರ್ಮಿಕರಿಗಾಗಿ ಕೇಂದ್ರದಿಂದ ಹೊಸ ಯೋಜನೆ.!! ಪ್ರತಿ ತಿಂಗಳಿಗೆ 1 ಸಾವಿರ ಪಡೆಯುವುದು ಹೇಗೆ? ಇಲ್ಲಿದೆ ವಿವರ
ಸರ್ಕಾರಿ ನೌಕರರಿಗೆ ‘DA’ ಹೆಚ್ಚಳ ಖಚಿತ ನೀಡಿದರೆ, ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ. ಜನವರಿ ಮತ್ತು ಜುಲೈನಿಂದ ಜಾರಿಗೆ ಬರುವಂತೆ ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಹೆಚ್ಚಿಸಲಾಗುತ್ತದೆ.
2024ರ ಮಾರ್ಚ್‌ನಲ್ಲಿ ಕೇಂದ್ರ ತುಟ್ಟಿಭತ್ಯೆಯನ್ನು ಶೇ. 4 ರಿಂದ 50 ರಷ್ಟು ಹೆಚ್ಚಿಸಿತ್ತು. ಅದೇ ರೀತಿ ಡಿಆರ್ ಅನ್ನು ಶೇ.4 ರಷ್ಟು ಹೆಚ್ಚಳ ಮಾಡಿತ್ತು. ಮೂಲಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನವು 34,560 ರೂ.ಗೆ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ಕನಿಷ್ಠ ವೇತನ 18,000 ರೂಪಾಯಿ ಇದೆ. ಅದೇ ರೀತಿ ಕನಿಷ್ಠ ಪಿಂಚಣಿಯನ್ನು 17,280 ರೂಪಾಯಿಗೆ ನಿಗದಿಪಡಿಸುವ ನಿರೀಕ್ಷೆಯಿದೆ.
2016 ರಲ್ಲಿ 7ನೇ ವೇತನ ಆಯೋಗದಲ್ಲಿ ಶೇ.14.27 ರಷ್ಟು ವೇತನವನ್ನು ಹೆಚ್ಚಿಸಲಾಗಿತ್ತು. 2006ರಲ್ಲಿ 6ನೇ ವೇತನ ಆಯೋಗದಲ್ಲಿ ಕೇಂದ್ರ ಸರಕಾರಿ ನೌಕರರಿಗೆ ಸಂಬಳ ಶೇ.54 ರಷ್ಟು ಭಾರಿ ಏರಿಕೆ ಕಂಡಿತ್ತು. 7 ನೇ ವೇತನ ಆಯೋಗವನ್ನು 2014ರ ಫೆಬ್ರವರಿಯಲ್ಲಿ ರಚಿಸಲಾಗಿದೆ. ಅದರ ಶಿಫಾರಸುಗಳನ್ನು 2016ರ ಜನವರಿ 1ರಿಂದ ಜಾರಿಗೆ ತರಲಾಯಿತು. ಸರ್ಕಾರಿ ನೌಕರರ ಸಂಭಾವನೆಯನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸುತ್ತದೆ. ಆದರೆ ಇದುವರೆಗೆ 8ನೇ ವೇತನ ಆಯೋಗದ ಸಂವಿಧಾನಕ್ಕೆ ಸರ್ಕಾರದೊಳಗೆ ಯಾವುದೇ ಪ್ರಸ್ತಾವನೆ ಇಲ್ಲ.
ಇತರೆ ವಿಷಯಗಳು:
ಕೃಷಿ ಜಮೀನಿಗೆ ಫ್ರೀ ಬೋರ್‌ವೆಲ್.!! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಕೇಂದ್ರದ ಹೊಸ ಯೋಜನೆ! 5 ವರ್ಷಗಳವರೆಗೆ ಪ್ರತಿ ತಿಂಗಳು ಪಡೆಯಬಹುದು ₹20,500