ಹಲೋ ಸ್ನೇಹಿತರೆ, ಫಲಾನುಭವಿಗಳಿಗೆ ದೇವರಾಜ ಅರಸು ವಸತಿ ಯೋಜನೆ ಅಡಿ ವಸತಿ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಆಸಕ್ತ ಅರ್ಹ ತೃತೀಯ ಲಿಂಗಿ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 08 ಕೊನೆಯ ದಿನವಾಗಿರುತ್ತದೆ. ಅಗತ್ಯ ದಾಖಲೆಗಳು, ಅರ್ಹತೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಅಗತ್ಯ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ನಿವೇಶನ ಖಾತೆಯ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಫೋಟೋ ವನ್ನು ಒದಗಿಸಬೇಕು.
ತೃತೀಯ ಲಿಂಗಿ ಅರ್ಜಿದಾರರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅವರ ಕುಟುಂಬವು ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಹಾಗೂ ಆದಾಯವು ಬಡತನ ರೇಖೆಗಿಂತ ಕಡಿಮೆ ಇರಬೇಕು. ವಸತಿ ಇಲ್ಲದಿರುವವರು, ಶೂನ್ಯ ಕೋಣೆ, ಒಂದು ಕೋಣೆ, ಎರಡು ಕೋಣೆಯೊಂದಿಗೆ ಕಚ್ಚಾ ಗೋಡೆ ಹಾಗೂ ಕಚ್ಚಾ ಛಾವಣಿ ಹೊಂದಿದವರು ಅರ್ಜಿದಾರರು ಸಹ ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ: ಕೇಂದ್ರ ಸರ್ಕಾರದ ಈ ಯೋಜನೆಯಡಿ ಫಲಾನುಭವಿಗಳಾಗಲು, ಹೆಸರನ್ನು ಚೆಕ್ ಮಾಡಿ!
ಅರ್ಜಿದಾರರು ಸ್ವಂತ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಯಾವುದೇ ಭಾಗದಲ್ಲಿ ಮನೆ ಹೊಂದಿರಬಾರದು. ಬದಲಾಗಿ ಶಿಥಿಲಗೊಂಡ ಮನೆ, ಗುಡಿಸಲು, ಖಾಲಿ ನಿವೇಶನದಲ್ಲಿ ವಾಸಿಸುತ್ತಿರುವವರು ಮಾತ್ರ ಅರ್ಹರಾಗಿರುತ್ತಾರೆ. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದಲ್ಲಿ, ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹಾಗೂ ಪತ್ರಗಳನ್ನು ಹೊಂದಿರಬೇಕು. ಹಾಗೆಯೇ ಬೇರೆ ಯಾವುದೇ ಯೋಜನೆಗಳಡಿ ಹಾಗೂ ಇಲಾಖೆ ವತಿಯಿಂದ ಸೌಲಭ್ಯ ಪಡೆದಿರಬಾರದು.
ಇತರೆ ವಿಷಯಗಳು:
ʻಜನ್ ಧನ್ ಖಾತೆʼದಾರರಿಗೆ 2.30 ಲಕ್ಷ ರೂ.ನ ಹೊಸ ವಿಮೆ ಸೌಲಭ್ಯ ಆರಂಭ!
ಕೇಂದ್ರದಿಂದ ಬಜೆಟ್ ಧಮಾಕ ಆಫರ್.!! ನಿರ್ಮಲ ಸೀತಾರಾಮನ್‌ರವರ ಪ್ರಮುಖ ಘೋಷಣೆ ಇದು