ಹಲೋ ಸ್ನೇಹಿತರೇ, ರಾಜ್ಯದಲ್ಕಿ ಈ ಬಾರಿ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ರೈತರು ತುಂಬಾನೆ ಕಷ್ಟ ಪಟ್ಟಿದ್ದಾರೆ. ಅದೆಷ್ಟೋ ಆಸೆ ಕನಸ್ಸು ಹೊತ್ತು ಲಾಭ ಬರುತ್ತೆ ಎಂದು ಬೆಳೆದ ರೈತರು ತಮ್ಮ ಬೆಳೆ ಬಿಸಿಲ ತಾಪ ಮಾನಕ್ಕೆ ಪ್ರಾಕೃತಿಕ ಸಮತೋಲನಕ್ಕೆ ನಶಿಸಿ ಹೋಗಿದೆ ಎಂದು ಕಂಗಾಲಾಗಿದ್ದಾರೆ. ಅದೆ ರೀತಿ ರಾಜ್ಯದಲ್ಲಿ ರೈತರಿಗೆ ದಿನ ನಿತ್ಯ ಆಹಾರ ಧವಸ ಧಾನ್ಯಕ್ಕೂ ಕೂಡ ಕಷ್ಟವಾಗುತ್ತಿದೆ. ಹೀಗಾಗಿ ಕಷ್ಟ ಪಡುವ ರೈತರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವ ನೆಲೆಯಲ್ಲಿ ಬರಗಾಲದ ಪರಿಹಾರವನ್ನು ನೀಡಲಾಗುತ್ತಿದ್ದು 2023-24ನೇ ಸಾಲಿನ ಬರಗಾಲ ಪರಿಹಾರದ ಪಟ್ಟಿ ಸಿದ್ಧವಾಗಿದೆ ಎನ್ನಬಹುದು.
ಪಟ್ಟಿ ಬಿಡುಗಡೆ:
ಬರಗಾಲ ಪರಿಹಾರ ಮೊತ್ತ ಬಿಡುಗಡೆ ಮಾಡುವ ಮುನ್ನ ಯಾರೆಲ್ಲ ರೈತರಿಗೆ ಹಣ ಜಮೆ ಆಗಲಿದೆ ಎಂದು ಬರಗಾಲದ ಪರಿಹಾರ ಮೊತ್ತದ ಪಟ್ಟಿ ರಿಲೀಸ್ ಆಗಲಿದ್ದು ಈಬಾರಿ ಈ ಪಟ್ಟಿಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಪಟ್ಟಿ ಈಗ ರಿಲೀಸ್ ಆಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Yojana) ಯ ಅಡಿಯಲ್ಲಿ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎಂಬುದನ್ನು ಪರಿಶೀಲನೆ ಮಾಡಿದರೆ ಉತ್ತಮ. ಒಂದು ವೇಳೆ ನಿಮ್ಮ ಎಲ್ಲ ದಾಖಲಾತಿ ಸರಿ ಇದ್ದರೂ ಹಣ ಇನ್ನು ಬಂದಿಲ್ಲ ಎಂದರೆ ಅದಕ್ಕೆ ಕೂಡ ಕೆಲ ಕಾರಣ ಸಹ ಇರಲಿದೆ.
ಹೇಗೆ ಪರಿಶೀಲನೆ ಮಾಡುವುದು:
ನೀವು ಬರಗಾಲ ಪರಿಹಾರ ಮೊತ್ತದ ಪಟ್ಟಿ (Drought Relief List 2024) ಪರಿಶೀಲನೆ ಮಾಡಲು ಸರಕಾರದ ಅಧಿಕೃತ ವೆಬ್ಸೈಟ್ ಆದ http://landrecords.karnataka.gov.in/ ಗೆ ಭೇಟಿ ನೀಡಿ. ಬಳಿಕ ನಿಮ್ಮ ತಾಲೂಕು, ಹೋಬಳಿ , ಗ್ರಾಮವನ್ನು ಆಯ್ಕೆ ಮಾಡಿ. ಬಳಿಕ ಅದರಲ್ಲಿ ಈ ಬಾರಿ ಹಣ ರಿಲೀಸ್ ಆದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡಬಹುದು. ಒಂದು ವೇಳೆ ಹೀಗೆ ಸಾಧ್ಯ ಆಗದೇ ಹೋದರೆ ಆಧಾರ್ ಸಂಖ್ಯೆ ನಮೋದಿಸಿ, ನಿಮ್ಮ ಬರ ಪರಿಹಾರ ಹಣದ ಬಗ್ಗೆ ಮಾಹಿತಿ ಪಡೆಯಿರಿ. ರೈತರ Fruit s ID ನೀಡಲಾಗಿದ್ದು ಅದರ ಸಹಾಯದಿಂದ ನೀವು ಪರಿಶೀಲನೆ ಮಾಡಬಹುದು.
ಪೋಷಕರಿಗೆ ಶಾಕ್ ಮೇಲೆ ಶಾಕ್.!! ಮತ್ತೆ ಏರಿಕೆ ಕಂಡ ಶಾಲಾ ಶುಲ್ಕ
ಸಿಎಂ ಅವರಿಂದ ಘೋಷಣೆ:
ಬರ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲು ಅವಕಾಶ ನೀಡಬೇಕು ಎಂದು ಸೂಚಿಸಲಾಗುತ್ತಿದೆ. ಅದಕ್ಕಾಗಿ ಆಧಾರ್ ಕಾರ್ಡ್ (Aadhaar Card) ಅನ್ನು ಭೂ ದಾಖಲೆಯ ಜೊತೆಗೆ ಲಿಂಕ್ ಮಾಡಲೇ ಬೇಕು ಇಲ್ಲವಾದರೆ ಬರಗಾಲ ಪರಿಹಾರ ಮೊತ್ತ (Drought Relief Money) ಬರಲಾರದು ಎಂದು ಹೇಳಬಹುದು. ಹಾಗಾಗಿ ಅರ್ಹರು ಕೂಡಲೇ ಭೂ ದಾಖಲೆಯ ಜೊತೆಗೆ ಆಧಾರ್ ಲಿಂಕ್ ಅನ್ನು ಶೀಘ್ರವೇ ಮಾಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಈ ಬಗ್ಗೆ ವಿಶೇಷ ಸೂಚನೆ ಒಂದನ್ನು ನೀಡಿದ್ದಾರೆ ಎನ್ನಬಹುದು.
ಅಕ್ರಮಕ್ಕೆ ತಡೆ:
ಅನೇಕ ಕಡೆ ಫೇಕ್ ಐಡಿ ನೀಡಿ ಬರಗಾಲ ಪರಿಹಾರ ಪಡೆಯುತ್ತಿರುವುದು ತಿಳಿದು ಬಂದಿದೆ ಹಾಗಾಗಿ ಅಂತಹ ಅಕ್ರಮತೆಯನ್ನು ತಡೆಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ಅಕ್ರಮದ ಸಾಲಿನಲ್ಲಿ ಸರಕಾರದ ಸೌಲಭ್ಯ ಬೇಕಂತಲೆ ಬೆಳೆ ನಷ್ಟ ಆಗದಿದ್ದವರೂ ಕೂಡ ಪಡೆಯುತ್ತಿದ್ದು ಇದು ಹೌದು ಎಂದು ಸಾಬೀತಾದರೆ ಅಂತಹ ರೈತರಿಗೆ ಸರಕಾರದ ಇತರ ಸಹಾಯಧನ ಹಾಗೂ ಸೌಲಭ್ಯ ಇರಲಾರದು ಮತ್ತು ಅಕ್ರಮ ಮಾಡಿ ಪಡೆದ ಹಣ ಹಿಂದಿರುಗಿಸಬೇಕಾಗಲಿದೆ ಎಂದು ಸಿಎಂ ವಕ್ತಾರರು ಈ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿ ಕೂಡ ನೀಡಿದ್ದಾರೆ.
ಇತರೆ ವಿಷಯಗಳು:
ರಾಜ್ಯದಲ್ಲಿ ಮತ್ತೆ 1 ವಾರಗಳ ಕಾಲ ಭಾರಿ ಮಳೆ, ಕರ್ನಾಟಕದ ಈ 5 ಜಿಲ್ಲೆಗಳಿಗೆ ಬಾರಿ ಮಳೆಯಾಗಲಿದೆ.