ಹಲೋ ಸ್ನೇಹಿತರೇ, ಪ್ರಸ್ತುತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿ ತಂದೆ ಇಲ್ಲದ ಮಕ್ಕಳಿಗೆ ರೂ. 24,000/- ಆರ್ಥಿಕವಾದ ಸಹಾಯಧನ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿಯು ಹರಿದಾಡುತ್ತಿದ್ದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟಂತಹ ಇಲಾಖೆಯಿಂದ ಸ್ಪಷ್ಟಿಕರಣವಾದ ನೀಡಲಾಗಿದ್ದು, ಅದ್ರ ವಿವರವನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಪ್ರಾಯೋಜಕತ್ವ ಕಾರ್ಯಕ್ರಮ ಯೋಜನೆಯು ರಾಜ್ಯದಾದ್ಯಂತ 18 ವರ್ಷದೊಳಗಿನ ಮಕ್ಕಳು ದುಡಿಮೆಗೆ ಹೋಗುವುದನ್ನು ತಪ್ಪಿಸಿ ಶಿಕ್ಷಣ ಮುಂದುವರೆಸುವುದನ್ನು ಉತ್ತೇಜಿಸಲು ಅನುಷ್ಠಾನಗೊಂಡ ಕಾರ್ಯಕ್ರಮವಾಗಿರುತ್ತದೆ. ಈ ಯೋಜನೆಯಡಿ ಪ್ರತಿ ತಿಂಗಳು 4000 ಸ್ಕಾಲರ್ಶಿಪ್ ಅಂತೆ 1 ವರ್ಷಗಳ ಇಲ್ಲವೇ 18 ವರ್ಷ ತುಂಬುವವರೆಗೆ ಶಿಕ್ಷಣ ಹಾಗೂ ಪೌಷ್ಠಿಕವಾದ ಆಹಾರಕ್ಕಾಗಿ ಆರ್ಥಿಕವಾದ ಸಹಾಯಧನವನ್ನು ನೀಡಲಾಗುತ್ತಿದೆ.
ಪ್ರಸ್ತುತ ಈ ಯೋಜನೆ ಅಡಿ ಪ್ರಯೋಜನವನ್ನು ಪಡೆಯಲು ಯಾರು ಅರ್ಜಿಯನ್ನು ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯವಾದ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
1) ತಂದೆ ಇಲ್ಲದ ಮಕ್ಕಳು ಅಥವಾ ಅನಾಥ ಮಕ್ಕಳು, ತಾಯಿ ವಿಚ್ಛೇಧಿತರಾದ ಹಾಗೂ ಕುಟುಂಬದಿಂದ ಪರಿತ್ಯಕ್ತಳಾಗಿದ್ದರೆ.
2) ಪೋಷಕರು ಮಾರಣಾಂತಿಕವಾದ ಕಾಯಿಲೆಯಿಂದ ಬಳಲುತ್ತಿದ್ದರೆ
3) ಪೋಷಕರು ಮಕ್ಕಳನ್ನು ನೋಡಿಕೊಳ್ಳಲು ದೈಹಿಕವಾಗಿ ಅಸಮರ್ಥವಾಗಿದ್ದರೆ
4) ಬಾಲನ್ಯಾಯಲಯ ಕಾಯ್ದೆ ಮಕ್ಕಳ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ಹಾಜರುಪಡಿಸಿ ಗುರುತಿಸಿಕೊಂಡ ಮಕ್ಕಳು ಅಂದ್ರೆ ಮನೆಯೇ ಇಲ್ಲದೆ ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲಕಾರ್ಮಿಕರು ಹಾಗೂ ಬಾಲ್ಯವಿವಾಹದಿಂದ ಸಂತ್ರಸ್ಥರಾಗಿರುವ ಮಕ್ಕಳು, ಕಳ್ಳಸಾಗಣಿಕೆಗೆ ಒಳಗಾದ ಮಕ್ಕಳುಗಳು, ಕಾಣೆಯಾದ ಅಥವಾ ಓಡಿಹೋದ ಮಕ್ಕಳು ಬಾಲ ಬಿಕ್ಷುಕರು ಮತ್ತು ಬೀದಿ ಬದಿ ಮಕ್ಕಳು ದೈಹಿಕ ಅಂಗವಿಕಲತೆವುಳ್ಳ ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು ಈ ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸಿ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸ ಬೇಕಾಗುವ ದಾಖಲಾತಿಗಳು:
1) ಮರಣ ಪ್ರಮಾಣ ಪತ್ರ.
2) ವಿಚ್ಛೇದಿತರಾಗಿದ್ದರೆ ನ್ಯಾಯಾಲಯದ ಆದೇಶ.
3) ಕುಟುಂಬದಿಂದ ಪರಿತೃಗಳಾಗಿದ್ದರೆ ಪರಿತ್ಯಕ್ತ ಪ್ರಮಾಣ ಪತ್ರ.
4) ಮಾರಣಾಂತಿಕವಾದ ಕಾಯಿಲೆಯಿಂದ ಬಳಲುತ್ತಿದ್ದರೆ ಹಾಗೂ ದೈಹಿಕ ಅಸಮರ್ಥರಾಗಿದ್ದರೆ ವೈದ್ಯಕೀಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
5) ನೈಸರ್ಗಿಕ ವಿಕೋಪಕ್ಕೆ ಒಳಾಗಾಗಿದ್ದರೆ ಸಕ್ಷಮ ಪ್ರಾಧಿಕಾರದಿಂದ ದೃಢೀಕರಣ ಪ್ರಮಾಣ ಪತ್ರ.
KSRTC ಉದ್ಯೋಗಿಗಳಿಗೆ ಗುಡ್ ನ್ಯೂಸ್! ಸರ್ಕಾರಿ ನೌಕರರಂತೆ ವೇತನ ಪಾವತಿಗೆ ಆದೇಶ
6) ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಸದರಿ ಫಲಾನುಭವಿಯ ಆದಾಯವು ಗ್ರಾಮೀಣ ಪ್ರದೇಶದಲ್ಲಿದ್ದರೆ 72,000 ಹಾಗೂ ನಗರ ಪ್ರದೇಶದವರಾಗಿದ್ದರೆ ರೂ. 96,000/-ಕ್ಕೆ ನಿಗದಿಪಡಿಸಲಾಗಿದೆ.
7) ಶಾಲಾ ವ್ಯಾಸಂಗ ಪ್ರಮಾಣ ಪತ್ರ
8) ಜನನ ಪ್ರಮಾಣ ಪತ್ರ
9) ಮಗುವಿನ ಭಾವಚಿತ್ರ
10) ಮಗು ಹಾಗೂ ಪೋಷಕರ ಆಧಾರ್ ಕಾರ್ಡ್ ಪ್ರತಿ
11) ಮಗುವಿನ ಬ್ಯಾಂಕ್ ಖಾತೆ ಪ್ರತಿ(NPCI ಮ್ಯಾಪಿಂಗ್ ಮಾಡಿಸಿಕೊಳ್ಳುವುದು)
ಫಲಾನುಭವಿಗಳ ಆಯ್ಕೆ ವಿಧಾನ:
ಅರ್ಜಿ ಸ್ವೀಕೃತವಾದ ನಂತರದಲ್ಲಿ ಘಟಕದಿಂದ ಗೃಹ ತನಿಖೆಯನ್ನು ನಡೆಸಿ ಸದರಿ ವರದಿಯ ಮೇರೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿಯಲ್ಲಿ ತ್ರೈಮಾಸಿಕಗೊಮ್ಮೆ ಅನುಮೋದನೆಯನ್ನು ಪಡೆದು ಆರ್ಥಿಕವಾದ ಸಹಾಯಧನವನ್ನು DBT ಮುಖಾಂತರ ಕಲ್ಪಿಸಲಾಗುವುದು
> ಈಗಾಗಲೇ ಸದರಿ ಯೋಜನೆ ಅಡಿ ಸೌಲಭ್ಯ ಮೊದಲೇ ಒಮ್ಮೆ ಪ್ರಯೋಜನವನ್ನು ಪಡೆದವರನ್ನು ಮತ್ತೆ ಪರಿಗಣಿಸಲು ಸಾಧ್ಯವಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕೃತ ವೆಬ್ ಸೈಟ್ ಲಿಂಕ್: Click herechild helpline/ಸಹಾಯವಾಣಿ: 1098
ಇತರೆ ವಿಷಯಗಳು:
ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ.. ಕೂಡಲೇ ಇದನ್ನು ಮಾಡಿ
ನಿರುದ್ಯೋಗಿ ಯುವಕರಿಗೆ ಭರ್ಜರಿ ಗುಡ್ ನ್ಯೂಸ್! ಸ್ವಯಂ ಉದ್ಯೋಗಕ್ಕೆ 30,000 ಸಹಾಯಧನ