ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಕೃಷಿ ಬೆಳೆಗಳಿಗೆ ವಿಮೆ ನೋಂದಣಿಯನ್ನು ಪ್ರಾರಂಭಿಸಿದ್ದು, ರೈತರು ವಿವಿಧ ಕೃಷಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
ಆ.16 ರಂದು ವಿವಿಧ ಬೆಳೆ ವಿಮೆ ನೋಂದಣಿಗೆ ಕೊನೆಯ ದಿನವಾಗಿದ್ದು, ರಾಗಿ (ಮ), ನವಣೆ (ಮ), ಹುರುಳಿ (ಮ), ನೆಲಗಡಲೆ (ನೀ/ಮ), ಸಜ್ಜೆ (ನೀ,ಮ), ತೊಗರಿ (ಮ), ಭತ್ತ (ನೀ,ಮ) ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು.
ರೈತರಿಗೆ ನೈಸರ್ಗಿಕ ಪ್ರಕೃತಿಯ ವಿಕೋಪದಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ಕೃಷಿಕರಿಗೆ ತುಂಬ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದಿಂದ ಅಕ್ಕಿ ಭಾಗ್ಯ.!! 5 ಕೆಜಿ ಅಂತೂ ಎಸ್ ಅಂದ ಮೋದಿ ಸರ್ಕಾರ
ಬೆಳೆ ಹನಿ ವಿಮೆಯ ನೋಂದಣಿಗಾಗಿ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಹಾಗೂ ರೈತರು ತಮ್ಮ ವ್ಯವಹಾರದ ಬ್ಯಾಂಕ್ಗಳಿಗೆ ಭೇಟಿಯನ್ನು ನೀಡಿ ಮಾಹಿತಿಯನ್ನು ಪಡೆಉಕೊಳ್ಳಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕಕೇಂದ್ರ ಅಥವಾ ವಿಮಾ ಸಂಸ್ಥೆಯ ತಾಲೂಕು ಪ್ರತಿನಿಧಿಯ ಮೊ.8277472721 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಇತರೆ ವಿಷಯಗಳು:
ಮದ್ಯಪ್ರಿಯರಿಗೆ ಭರ್ಜರಿ ಸುದ್ದಿ.!! ಇನ್ಮುಂದೆ ದುಬಾರಿ ಎಣ್ಣೆಯ ಬೆಲೆ ಇಳಿಕೆ?
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ: ಸ್ಕಾಲರ್ಶಿಪ್- ಶುಲ್ಕ ಮರುಪಾವತಿಗೆ ಇಲ್ಲಿಂದಲೇ ಅಪ್ಲೇ ಮಾಡಿ