ಹಲೋ ಸ್ನೇಹಿತರೇ, ನಿಖರ ವಿದ್ಯುತ್ ಮಾಪನಕ್ಕಾಗಿ ಬೆಸ್ಕಾಂ ಕ್ರಮವಹಿಸುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಹಕರ ಮನೆಗೆ ಬಂದು ಉಚಿತವಾಗಿ ಬೆಸ್ಕಾಂ ಸಿಬ್ಬಂದಿಯೇ ಉಚಿತ ಡಿಜಿಟಲ್ ಮೀಟರ್ ಬದಲಾವಣೆ ಮಾಡಲಿದ್ದಾರೆ.
ಈ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದ್ದು, ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರ ಮನೆಯಲ್ಲಿರುವ ಹಳೆಯ ವಿದ್ಯುತ್ ಮೀಟರ್ಗಳನ್ನು ತೆರವು ಮಾಡಿ, ಡಿಜಿಟಲ್ ಮೀಟರ್ಗಳನ್ನು ಬೆಸ್ಕಾಂ ಉಚಿತವಾಗಿ ಅಳವಡಿಸಲಿದೆ ಎಂದು ತಿಳಿಸಿದೆ.
ಮನೆ ಮನೆಗೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಈವರೆಗೆ 17,17,935 ಹಳೆಯ ಮೀಟರ್ (ಮೆಕಾನಿಕಲ್ ಮೀಟರ್) ಗಳನ್ನು ಬದಲಾಯಿಸುವ ಮೂಲಕ ಶೇ.95ರಷ್ಟು ಪೂರ್ಣಗೊಳಿಸಿದೆ. ಈ ಮೀಟರ್ ಗಳ ಬದಲಾವಣೆಗೆ ಗ್ರಾಹಕರೂ ಕೂಡ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ.!! ಈ ಯೋಜನಡಿ ಪ್ರತಿ ತಿಂಗಳು ನಿಮ್ಮದಾಗಲಿದೆ 4000 ಸ್ಕಾಲರ್ಶಿಪ್
ಈ ಡಿಜಿಟಲ್ ಮೀಟರ್ ಬದಲಾವಣೆ ಕಾರ್ಯವು ಉಪವಿಭಾಗವಾರು ನಡೆಯುತ್ತಿದ್ದು, ಗ್ರಾಹಕರು ಬೆಸ್ಕಾಂ ಅನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಇತರೆ ವಿಷಯಗಳು:
ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ.. ಕೂಡಲೇ ಇದನ್ನು ಮಾಡಿ
KSRTC ಉದ್ಯೋಗಿಗಳಿಗೆ ಗುಡ್ ನ್ಯೂಸ್! ಸರ್ಕಾರಿ ನೌಕರರಂತೆ ವೇತನ ಪಾವತಿಗೆ ಆದೇಶ