ಹಲೋ ಸ್ನೇಹಿತರೇ, ಬಿಪಿಎಲ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಿಗುತ್ತದೆ. ಬಿಪಿಎಲ್ ಕಾರ್ಡ್ ಗಳನ್ನು ವಿತರಣೆ ಮಾಡುವುದು ಬಡತನದ ರೇಖೆಗಿಂತ ಕೆಳಗಿರುವ ಜನರ ಬಳಿ ಸ್ವಂತ ಮನೆ ಇರುವುದಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಇದೀಗ ಬಿಪಿಎಲ್ ಕಾರ್ಡ್ ಇರುವವರಿಗೆ ಹೊಸ ಮನೆಗಳನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದ್ದು, ರೈತರು ಈ ಸೌಲಭ್ಯ ಪಡೆದು, ಮನೆಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಈಗಾಗಲೇ ಅರ್ಜಿ ಸಲ್ಲಿಕೆ ಶುರುವಾಗಿದೆ.
ನರೇಂದ್ರ ಮೋದಿ ಅವರು ಮೊದಲು ಪಿಎಂ ಆದ ಒಂದೇ ವರ್ಷಕ್ಕೆ ಈ ರೀತಿ ಸ್ವಂತ ಮನೆ ಇಲ್ಲದವರಿಗೆ ಮನೆ ಮಾಡಿಕೊಡುವುದಕ್ಕಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 2015ರ ಜೂನ್ 25ರಂದು ಶುರು ಮಾಡಿದರು. ಈ ಯೋಜನೆ ಈಗಲೂ ಸಹ ಜಾರಿಯಲ್ಲಿದ್ದು, ಈಗಾಗಲೇ ಹಲವು ಜನರು ಈ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಇನ್ನು ಕೂಡ ಸ್ವಂತ ಮನೆ ಇಲ್ಲದವರು ಈ ಯೋಜನೆಯ ಮೂಲಕ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
- ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವವರು 18 ವರ್ಷಕ್ಕಿಂತ ದೊಡ್ಡವರಾಗಿರಬೇಕು,
- ಇವರ ಬಳಿ ಈಗಾಗಲೇ ಸ್ವಂತ ಮನೆ ಇರಬಾರದು.
- ಮನೆಯಲ್ಲಿ ಯಾರೂ ಕೂಡ ಸರ್ಕಾರಿ ಕೆಲಸ ಹೊಂದಿರಬಾರದು.
- ಭಾರತದ ಸದಸ್ಯರೇ ಆಗಿರಬೇಕು.
- ಅಗತ್ಯವಿರುವ ಎಲ್ಲಾ ದಾಖಲೆಗಳು ಇರಬೇಕು.
- ಪೆನ್ಶನ್ ಪಡೆಯುವವರು ಅರ್ಜಿ ಸಲ್ಲಿಸುವ ಹಾಗಿಲ್ಲ.
- ಒಂದು ಸಾರಿ ಮಾತ್ರ ಈ ಸೌಲಭ್ಯ ಪಡೆಯಬಹುದು ಎರಡನೇ ಸಾರಿ ಆಗುವುದಿಲ್ಲ.
ಕೊಳವೆ ಬಾವಿ ವಿಫಲವಾದ ರೈತರಿಗೆ ಸರ್ಕಾರದಿಂದ ಈ ಯೋಜನೆ ಜಾರಿ!
ಉಚಿತ ಮನೆ ಪಡೆಯಲು ಅರ್ಹತೆಗಳು:
ಅರ್ಜಿ ಸಲ್ಲಿಸಿದ ವ್ಯಕ್ತಿಯ ಮಾಹಿತಿಗಳನ್ನು ಪರಿಶೀಲಿಸಿ, ಮನೆಯನ್ನು ನೀಡಲಾಗುತ್ತದೆ. ಪಿಎಂ ಆವಾಸ್ ಯೋಜನೆಯ ಸೌಲಭ್ಯದಿಂದ ಸ್ವಂತ ಮನೆ ಪಡೆಯಲು ಕೆಲವು ನಿಯಮಗಳು, ಅರ್ಹತೆಗಳು ಇದೆ.
ಅವೆಲ್ಲವೂ ಇರುವ ವ್ಯಕ್ತಿಗಳಿಗೆ ಮಾತ್ರ ಆವಾಸ್ ಯೋಜನೆಯ ಮೂಲಕ ಸ್ವಂತ ಮನೆ ಸಿಗುತ್ತದೆ. ಈ ಅರ್ಹತೆಯ ಬಗ್ಗೆ ಪೂರ್ತಿಯಾಗಿ ತಿಳಿಯಲು, ಸರ್ಕಾರ ಪಿಎಂ ಆವಾಸ್ ಯೋಜನೆಯ ಬಗ್ಗೆ ಜಾರಿಗೆ ತಂದಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
ಇಲ್ಲಿ ನಿಯಮಗಳನ್ನು ತಿಳಿದುಕೊಂಡು, ಉಚಿತ ಮನೆ ಪಡೆಯುವ ಅರ್ಹತೆ ನಿಮಗಿದ್ದರೆ, ವೆಬ್ಸೈಟ್ ನಲ್ಲಿ ಈ ಯೋಜನೆಗಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ರಿಜಿಸ್ಟರ್ ಮಾಡಿಸುವುದಕ್ಕೆ ಕೆಲವು ದಾಖಲೆಗಳು ಸಹ ಪ್ರಮುಖವಾಗಿ ಬೇಕಾಗುತ್ತದೆ. ಅವೆಲ್ಲವನ್ನೂ ನೀಡಿ, ನೀವು ಅರ್ಜಿ ಸಲ್ಲಿಸಬಹುದು.
ಎಲ್ಲವೂ ಸರಿ ಇದ್ದರೆ, ಈ ಯೋಜನೆಯ ಸೌಲಭ್ಯ ನಿಮಗೆ ಸಿಗಲಿದ್ದು, ಸರ್ಕಾರದ ಕಡೆಯಿಂದ ನಿಮ್ಮದೇ ಆದ ಶಾಶ್ವತವಾದ ಸ್ವಂತ ಮನೆಯನ್ನು ಪಡೆದುಕೊಳ್ಳಬಹುದು. ಹಾಗೆಯೇ ಈ ಯೋಜನೆಯಲ್ಲಿ ಕಡಿಮೆ ಬಡ್ಡಿಯಲ್ಲಿ 20 ವರ್ಷದವರೆಗು ಸಾಲ ಸೌಲಭ್ಯ ಕೂಡ ಸಿಗುತ್ತದೆ.
ಇತರೆ ವಿಷಯಗಳು:
ಮೇಕೆ-ಕುರಿ-ಹಸು ಸಾಕಾಣಿಕೆಗೆ ಸರ್ಕಾರದ ಸಹಕಾರ.!! ಈ ಯೋಜನೆಯಡಿ ನಿಮ್ಮದಾಗಲಿದೆ ಸಹಾಯಧನ
ರೈತರಿಗೆ ಸಂತಸದ ಸುರಿ ಮಳೆ.!! ನೀರಾವರಿಗಾಗಿ ಸೋಲಾರ್ ಪಂಪ್ಗಳ ಮೇಲೆ ಭರ್ಜರಿ ಸಬ್ಸಿಡಿ