ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇಲ್ಲಿ ಇನ್ನೊಂದು ಯೋಜನೆಯ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡುತ್ತಿದೆ. ಈ ಕುರಿತು ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.
ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು 1 ಫೆಬ್ರವರಿ 2023 ರಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರವು ಅನೇಕ ರೀತಿಯ ಸಾಲ (Loan) ಮತ್ತು ತರಬೇತಿಯನ್ನು ನೀಡುತ್ತದೆ.
ತರಬೇತಿ ಅಗತ್ಯವಿರುವವರಿಗೆ ಎರಡು ರೀತಿಯಲ್ಲಿ ಸಾಲ ನೀಡಲಾಗುತ್ತದೆ. 5 – 7 ದಿನಗಳು ಮೂಲಭೂತ ಕೌಶಲ್ಯಕ್ಕೆ ಮೊದಲ ಮತ್ತು 15 ದಿನಗಳು ಮುಂದುವರಿದ ಕೌಶಲ್ಯಕ್ಕೆ.. ದಿನಕ್ಕೆ ರೂ. 500 ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿಯ ನಂತರ ರೂ.15 ಸಾವಿರ ಮೌಲ್ಯದ ಟೂಲ್ ಕಿಟ್ ಗಳನ್ನು ನೀಡಲಾಗುತ್ತದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ.. ವಿಶ್ವಕರ್ಮ ಸಮುದಾಯಕ್ಕೆ ಸೇರಿದವರು ಉಚಿತ ತರಬೇತಿ ಪಡೆಯಬಹುದು. ಅಲ್ಲದೆ ನಿಮ್ಮ ಸ್ವಂತವಾದ ವ್ಯವಹಾರವನ್ನು ಪ್ರಾರಂಭಿಸಲು ನೀವು ಸಾಲವಾಗಿ 3,00,000 ಪಡೆಯಬಹುದು.
ಈ ಮೊತ್ತವನ್ನು ಎರಡು ಹಂತಗಳಲ್ಲಿ ನೀಡಲಾಗುವುದು. ಮೊದಲ ಹಂತದಲ್ಲಿ ರೂ. 1,00,000 ಸಾಲ ನೀಡಲಾಗುವುದು. ಆ ನಂತರ ಎರಡನೇ ಹಂತದಲ್ಲಿ ರೂ. 2,00,000 ಸಾಲ ನೀಡಲಾಗುವುದು.
ಪ್ರಸ್ತುತ 18 ರೀತಿಯ ವ್ಯವಹಾರಗಳು ಯೋಜನೆಯ ಮೂಲಕವಾಗಿ ಸಾಲ ಸೌಲಭ್ಯವನ್ನು ಪಡೆಯಬಹುದು. ಕಮ್ಮಾರ, ಬಡಗಿ ಮತ್ತು ಅಕ್ಕಸಾಲಿಗ, ಶಿಲ್ಪಿ ಮತ್ತು ಕುಂಬಾರ, ಬಟ್ಟೆ, ಪೊರಕೆ ಹಾಗೂ ಕ್ಷೌರಿಕ, ಚಮ್ಮಾರ, ಆಟಿಕೆ, ಮೀನು ಬಲೆ, ಬಡಗಿ ಮುಂತಾದ ವೃತ್ತಿಗಳಿವೆ.
ಆದರೆ ಈ ಉಚಿತವಾದ ಹೊಲಿಗೆ ಯಂತ್ರ ಯೋಜನೆಯನ್ನು ಈ ಯೋಜನೆಯ ಭಾಗವಾಗಿ ಸರ್ಕಾರವು ಜಾರಿಗೆ ತಂದಿದೆ. ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ನೀವು ಇನ್ನೂ ಅರ್ಜಿ ಸಲ್ಲಿಸದಿದ್ರೆ ಈಗ ನೀವು ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಬಹುದು. ಈ ಮೂಲಕ ಸರ್ಕಾರದ 15 ಸಾವಿರ ರೂಪಾಯಿಯನ್ನು ನೀಡುತ್ತದೆ. ಇದರ ಮೂಲಕವಾಗಿ ನೀವು ಹೊಲಿಗೆ ಯಂತ್ರವನ್ನು ಖರೀದಿಸಬಹುದು ಹಾಗೂ ವ್ಯವಹಾರವನ್ನು ಪ್ರಾರಂಭಿಸಬಹುದು.
ಆಧಾರ್ – ಪ್ಯಾನ್ ಕಾರ್ಡ್ ದಾರರಿಗೆ ನ್ಯೂ ರೂಲ್ಸ್.!! ಇನ್ಮುಂದೆ ಈ ನಿಯಮ ಕಡ್ಡಾಯ
ಇದರ ಅಡಿಯಲ್ಲಿ ಅರ್ಜಿದಾರರು ಹೊಲಿಗೆ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು. ಈ ಯೋಜನೆಯ ಅಂತಿಮವಾದ ದಿನಾಂಕವನ್ನು ಸರ್ಕಾರವು ಇನ್ನೂ ನಿರ್ಧರಿಸಿಲ್ಲ. ನೀವು ಉಚಿತವಾಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಸರ್ಕಾರವು ನಿಗದಿಪಡಿಸಿದ ಕೆಳಗಿನ ವಿದ್ಯಾರ್ಹತೆಗಳನ್ನು ಪೂರೈಸಬೇಕು.
ಈ ಯೋಜನೆಗಾಗಿ ಸರ್ಕಾರವು ಮಹಿಳೆಯರ ವಯೋಮಿತಿಯನ್ನು 18 ವರ್ಷದಿಂದ 40 ವರ್ಷಕ್ಕೆ ನಿಗದಿಪಡಿಸಿದೆ. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ಮಾಸಿಕವಾದ ಆದಾಯ ರೂಪಾಯಿ 12000 ಅಥವಾ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸಲು ಬಯಸುವವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ www.pmvishwakarma.gov.in ಗೆ ಭೇಟಿ ನೀಡಿ ಮತ್ತು ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಅರ್ಜಿ ಸಲ್ಲಿಸಿ
ಇತರೆ ವಿಷಯಗಳು:
ಸರ್ಕಾರದ ಬಂಪರ್ ಯೋಜನೆ! ಮನೆಯಲ್ಲಿ 2 ಮಕ್ಕಳಿದ್ದರೆ ಸಿಗಲಿದೆ ₹11,000
ಗೃಹಲಕ್ಷ್ಮಿ11ನೇ ಕಂತಿನ ಹಣ ನಾಳೆ ಈ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆ!