ಹಲೋ ಸ್ನೇಹಿತರೇ, ರೈತರಿಗೆ ಸರ್ಕಾರದಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ರೈತರಿಗೆ ಫ್ರೀ ಬೋರ್‌ವೆಲ್ ಕೊರೆಸಲು ಸಹಾಯಧನ ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯು ಅರ್ಜಿಯನ್ನು ಕರೆದಿದ್ದಾರೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಲಿದೆ. ಒಟ್ಟು 4 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ.
ಅರ್ಹರು ಯಾರು?
- ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ವ್ಯವಸಾಯ ನಿರತರಾಗಿಬೇಕು
- ಕನಿಷ್ಠ 02 ಎಕರೆ ಜಮೀನು ಇರಬೇಕು.
- ಈ ಹಿಂದೆ ನೀರಾವರಿ ಸೌಲಭ್ಯ ಪಡೆದಿರಬಾರದು ಹಾಗೂ ಹೊಂದಿರಬಾರದು
- ಕನಿಷ್ಠ18 ರಿಂದ ಗರಿಷ್ಠ 60 ವರ್ಷದೊಳಗಿರಬೇಕು.
- ಆದಾಯದ ಮಿತಿಯು ವಾರ್ಷಿಕವಾಗಿ ಗ್ರಾಮೀಣ ಪ್ರದೇಶವಾದ್ರೆ 98 ಸಾವಿರ ರೂ., ನಗರಗಳಂತಹ ಪ್ರದೇಶವಾದಲ್ಲಿ 1.20 ಲಕ್ಷ ರೂ. ಒಳಗಿರಬೇಕು ಎನ್ನುವ ನಿಯಮವನ್ನು ರೂಪಿಸಲಾಗಿದೆ.
ಇನ್ಮುಂದೆ ಈ ಕಾರ್ಡ್ ಹೊಂದಿದವರಿಗೆ ಗ್ಯಾರಂಟಿ ಭಾಗ್ಯ ಸಿಗಲ್ಲ? ಲಕ್ಷ್ಮೀ ಹೆಬ್ಬಾಳ್ಕರ್
ದಾಖಲೆ ಏನು ಬೇಕು?
- ಜಾತಿ ಪ್ರಮಾಣಪತ್ರ
- ಸಣ್ಣ ಹಿಡುವಳಿದಾರರ ಪ್ರಮಾಣಪತ್ರ
- ಇತ್ತೀಚಿನ ಪಹಣಿ
- ಆದಾಯ ಪ್ರಮಾಣ ಪತ್ರ
- ಕುಟುಂಬದ ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್
- ಅರ್ಜಿದಾರರ ಭಾವಚಿತ್ರ
ಅರ್ಜಿ ಹಾಕಲು ಬಯಸುವವರು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಆಗಸ್ಟ್ 31 ರೊಳಗಾಗಿ ಸಲ್ಲಿಸಬಹುದು.
ಇತರೆ ವಿಷಯಗಳು:
ಕರ್ನಾಟಕಕ್ಕೆ ಮತ್ತೊಂದು ಶಾಕ್.!! ನೀರಿನ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ
ಕೇಂದ್ರದ ಹೊಸ ಯೋಜನೆ! 5 ವರ್ಷಗಳವರೆಗೆ ಪ್ರತಿ ತಿಂಗಳು ಪಡೆಯಬಹುದು ₹20,500