ಹಲೋ ಸ್ನೇಹಿತರೇ, ಇಂದು ಪ್ರತಿಯೊಂದು ಮನೆಗೂ ಕೂಡ ಮೂಲಭೂತ ಅವಶ್ಯಕ ವಸ್ತುಗಳು ಬಹಳ ಮುಖ್ಯವಾಗಿ ಬೇಕು. ಹೌದು ಅದರಲ್ಲಿ ಮುಖ್ಯವಾಗಿ ಅಡುಗೆಗೆ ಬಳಸುವಂತಹ ಗ್ಯಾಸ್ ಸಿಲಿಂಡರ್ ಕೂಡ ಒಂದಾಗಿದೆ. ಹಿಂದೆಲ್ಲ ಇದ್ದಿಲು, ಕಟ್ಟಿಗೆ ಬಳಸಿ ಅಡುಗೆ ಮಾಡ್ತಾ ಇದ್ದರು, ಆದರೆ ಇಂದು ಹಾಗಲ್ಲ ಪ್ರತಿಯೊಂದು ಮನೆಗೂ ಗ್ಯಾಸ್ ಸಿಲಿಂಡರ್ ಪೂರೈಕೆ ಇರಲಿದೆ. ಅದರಲ್ಲೂ ಕೇಂದ್ರ ಸರ್ಕಾರ ಕೂಡ ಬಡವರ್ಗದ ಜನತೆಗಾಗಿಯೇ ಉಜ್ವಲ ಯೋಜನೆಯನ್ನು ಕೂಡ ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಕಡಿಮೆ ದರದ ಗ್ಯಾಸ್ ಮತ್ತು ಸಬ್ಸಿಡಿ ಯನ್ನು ಸಹ ಪಡೆಯುತ್ತಿದ್ದಾರೆ.
ಆದರೆ ಇಂದು ಉಚಿತ ಸೌಲಭ್ಯ ಗಳು ಸಿಗ್ತಾ ಹೊದಂತೆ ಆಕ್ರಮಗಳು ಕೂಡ ಹೆಚ್ಚಾಗುತ್ತಿದೆ. ಅನರ್ಹರು ಕೂಡ ಸೌಲಭ್ಯ ಪಡೆಯಲು ಮುಂದೆ ಬರುತ್ತಾರೆ. ಇಂದು ಗ್ಯಾಸ್ ಸಿಲಿಂಡರ್ ಗಳ ಅಕ್ರಮಗಳು ಕೂಡ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಗ್ಯಾಸ್ ಸಿಲಿಂಡರ್ ಆಕ್ರಮ ತಡೆ ಗಟ್ಟಲು ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈ ಗೊಂಡಿದೆ.
ಹೌದು ಗ್ಯಾಸ್ ಸಿಲಿಂಡರ್ ಗಳಲ್ಲಿ ಕ್ಯೂಆರ್ ಕೋಡ್ ಬಳಕೆಗೆ ನಿರ್ಣಯ ಮಾಡಿದೆ. ಇದರಿಂದ ಸಿಲಿಂಡರ್ ಗಳ ಟ್ರ್ಯಾಕಿಂಗ್, ಕಳ್ಳತನ ಮತ್ತು ಏಜೆನ್ಸಿಗಳ ದಾಸ್ತಾನು ನಿರ್ವಹಣೆಯಲ್ಲಿ ಅಕ್ರಮಗಳನ್ನು ತಡೆಯಬಹುದಾಗಿದೆ.
ಅಟಲ್ ಪಿಂಚಣಿ ಯೋಜನೆ ಹಣ ಡಬಲ್! ಈಗ ನಿಮ್ಮ ಖಾತೆಗೆ ಸಾವಿರ 10 ಜಮಾ
ಕ್ಯುಆರ್ ಕೋಡ್ ಎಂಬುದು ಸ್ವಲ್ಪ ಮಟ್ಟಿಗೆ ಆಧಾರ್ ಕಾರ್ಡ್ ವಿಧಾನವೇ ಹೋಲಲಿದೆ. ಈ ಕೋಡ್ ಮೂಲಕ ಗ್ಯಾಸ್ ಸಿಲಿಂಡರ್ ನಲ್ಲಿರುವ ಗ್ಯಾಸ್ ಮಾಹಿತಿ ಯನ್ನು ಅನ್ನು ಟ್ರ್ಯಾಕ್ ಮಾಡಲು ಸುಲಭ.
ಉಜ್ವಲ ಯೋಜನೆಯ ಲಾಭವೇನು?
- ಗ್ಯಾಸ್ ಕಳ್ಳತನ ವನ್ನು ತಡೆಯಬಹುದು.
- ಸಿಲಿಂಡರ್ ಗೆ ಎಷ್ಟು ಬಾರಿ ಗ್ಯಾಸ್ ರೀಫಿಲ್ ಮಾಡಲಾಗಿದೆ ಪತ್ತೆ ಹಚ್ಚ ಬಹುದು.
- ಗ್ಯಾಸ್ ಸಿಲಿಂಡರ್‌ನಲ್ಲಿ ಕ್ಯೂಆರ್ ಕೋಡ್ ಅಳವಡಿಸಿದರೆ ಟ್ರ್ಯಾಕಿಂಗ್ ಮಾಡಲು ಸರಳವಾಗಲಿದೆ
- ಕ್ಯುಆರ್ ಕೋಡ್ (QR code) ಅನ್ನು ಹೊಸ ಸಿಲಿಂಡರ್ ಗಳಲ್ಲಿ ಮೆಟಲ್ ಸ್ಟಿಕರ್ ಜೊತೆಗೆ ಅಳವಡಿಸಲಾಗಲಿದ್ದು ಯಾವ ಡೀಲರ್ ನಿಂದ ಬಂದಿದೆ ಪತ್ತೆ ಮಾಡಬಹುದು.
- ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆಯೇ ಕಂಡುಹಿಡಿಯಬಹುದು.
ಹಾಗಾಗಿ ಇನ್ಮುಂದೆ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ಅನರ್ಹರು ಬಳಕೆ ಮಾಡಿಕೊಂಡರೆ ಸುಲಭವಾಗಿ ಮಾಹಿತಿ ಸಿಗಲಿದೆ.
ಇತರೆ ವಿಷಯಗಳು:
ಕರ್ನಾಟಕದಲ್ಲಿ ಬಿರುಸಿನ ಮಳೆಯ ಅಬ್ಬರ.!! ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ! ಈ ಯೋಜನೆಗಳ ಮೇಲಿನ ಬಡ್ಡಿ ದರ ಘೋಷಣೆ