ಹಲೋ ಸ್ನೇಹಿತರೆ, ಎಲ್ಲಾ ಹೆಣ್ಣು ಮಕ್ಕಳು ತುಂಬಾ ಇಷ್ಟ ಪಟ್ಟು ಖರೀದಿಸುವ ವಸ್ತು ಎಂದರೆ ಅದು ಚಿನ್ನ. ಆದರೆ ಪ್ರಸ್ತುತ ದಿನೇ ದಿನೇ ಚಿನ್ನದ ಮೇಲೆ ಬೆಲೆ ಹೆಚ್ಚಾಗುತ್ತಲೇ ಇದೆ. ಮಹಿಳೆಯರು ಚಿನ್ನ ತೆಗೆದುಕೊಳ್ಳುವುದು ಕನಸಿನ ಮಾತಾಗಿ ಉಳಿದಿದೆ. ಬೆಲೆ ಏರಿಕೆಯಾದರೂ ಚಿನ್ನಕೊಳ್ಳುವವರ ಸಂಖ್ಯೆಯಲ್ಲಿ ಏನು ಕಡಿಮೆಯಾಗಿಲ್ಲ. ಚಿನ್ನದ ಬೆಲೆಯ ಬಗ್ಗೆ ಒಂದು ಹೊಸ ಅಪ್ಡೇಟ್ ಒಂದು ಬಂದಿದೆ. ಏನು ಆ ಹೊಸ ಮಾಹಿತಿ? ಇಂದಿನ ಬೆಲೆ ಎಷ್ಟು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಸದ್ಯಕ್ಕೆ ಹತ್ತು ಗ್ರಾಂ ಚಿನ್ನದ ಬೆಲೆ 66,650 ರೂಪಾಯಿ ಇದೆ. ಇಂದು ಒಂದು ಲಕ್ಷಕ್ಕೆ ಬಂದರೂ ಆಶ್ಚರ್ಯವೇನಿಲ್ಲ. ಆದರೆ ಈಗ ಚಿನ್ನ ಖರೀದಿದಾರರಿಗೆ ಖುಷಿಯ ವಿಚಾರವೊಂದು ಹರಿದಾಡುತ್ತಿದೆ. ಅದು ಸತ್ಯವಾಗಿ ಬಿಟ್ಟರೆ ಮಹಿಳಾ ಮಣಿಗಳಿಗೆ ಸಂತಸವೋ ಸಂತಸ.
ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಚಿನ್ನದ ಬೆಲೆ ಹತ್ತು ಗ್ರಾಂಗೆ 50 ಸಾವಿರಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ತಿಂಗಳಿನಿಂದ ಬಾರೀ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಇಳಿಕೆ ಕಂಡರೆ ಖುಷಿಯ ವಿಚಾರವೇ ಹೌದು.
ಇದನ್ನು ಓದಿ: ಈ ಉದ್ಯೋಗಿಗಳ ಅಧಿಕಾರಾವಧಿ 1 ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ
ಈ ಹಿಂದೆ ಭೂಮಿಯೊಳಗೆ ಚಿನ್ನ ಹೇರಳವಾಗಿ ಸಿಗುತ್ತಿತ್ತು. ಹೀಗಾಗಿ ಚಿನ್ನ ಎಲ್ಲರ ಕೈಗೆ ಎಟಕುವಂತ ಬೆಲೆಯಲ್ಲಿ ಸಿಗುತಿತ್ತು. ಆದರೆಅದು ಕೂಡ ಈಗ ನಿಂತು ಹೋಗಿದೆ. ಹೀಗಾಗಿ ದಿನೇ ದಿನೇ ಏರಿಕೆಯತ್ತಲೇ ಸಾಗುತ್ತಿದೆ. ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ಇಸ್ರೇಲ್ ಹಾಗೂ ಹಮಾಸ್ ಯುದ್ಧ ನಿಂತಿದೆ. ಪ್ಯಾಲೆಸ್ತೀನ್ ಭಾಗದಲ್ಲಿ ಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಾಣಬಹುದು ಎಂಬ ನಿರೀಕ್ಷೆಯಡಿ 50 ಸಾವಿರಕ್ಕೆ ಇಳಿಯಬಹುದು ಎಂದು ಹೇಳಲಾಗುತ್ತಿದೆ. ಇದು ಹೂಡಿಕೆದಾರರಿಗೆ ಅಸಮಧಾನದ ಸುದ್ದಿಯಾದರೆ ಕೊಳ್ಳುವ ಗ್ರಾಹಕರಿಗೆ ಡಬಲ್ ಧಮಾಕ ಸುದ್ದಿ.
ಇತರೆ ವಿಷಯಗಳು:
ರೈತರಿಗೆ ಶುಭ ಸೂಚನೆ: ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು ಆರಂಭ!
ಚಿನ್ನದ ಬೆಲೆ ಏಕಾಏಕಿ 1500 ರೂಪಾಯಿ ಏರಿಕೆ! ಇಲ್ಲಿದೆ ಇಂದಿನ ಬೆಲೆಯ ಡೀಟೇಲ್ಸ್