ಹಲೋ ಸ್ನೇಹಿತರೇ, ಚಿನ್ನ ಕಳೆದ ಸಾಕಷ್ಟು ಶತಮಾನಗಳಿಂದಲೂ ಸಹ ಮಾನವನ ಜೀವನದಲ್ಲಿ ಅತ್ಯಂತ ಮೌಲ್ಯಯುತವಾಗಿರುವಂತಹ ಲೋಹ ಎಂಬವ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿಯೊಬ್ಬರು ಕೂಡ ಈ ಲೋಹವನ್ನು ಖರೀದಿ ಮಾಡುವುದಕ್ಕಾಗಿ ತಮ್ಮ ದುಡಿಮೆಯ ಇಂತಿಷ್ಟು ಹಣವನ್ನು ಉಳಿತಾಯ ಮಾಡುವಂತಹ ಜನರು ಕೂಡ ಇದ್ದಾರೆ.
ಯಾಕೆಂದ್ರೆ ಹಣ ಇರುವಂತಹ ಜನರಿಗೆ ಇದು ಕೇವಲ ಒಂದು ಪ್ರತಿಷ್ಠೆಯ ವಸ್ತು ಹಾಗೂ ಅಲಂಕಾರಿಕ ವಸ್ತುವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಆದರೆ ಒಬ್ಬ ಬುದ್ಧಿವಂತ ಮಾಧ್ಯಮ ಅಥವಾ ಬಡವರ್ಗದ ಜನರಿಗೆ ಇದು ಕಷ್ಟಕಾಲದಲ್ಲಿ ನಮ್ಮ ಕಷ್ಟವನ್ನು ತೀರಿಸಬಹುದಾದಂತಹ ಆಪದ್ಬಾಂಧವ ಎಂಬುದಾಗಿ ಪರಿಗಣಿಸುತ್ತಾರೆ ಮಾತ್ರವಲ್ಲದೆ ಇನ್ನೂ ಬುದ್ಧಿವಂತ ಜನರು ಈಗ ಚಿನ್ನವನ್ನು ಕಡಿಮೆ ಬೆಲೆಗೆ ಖರೀದಿಸಿ ನಂತರ ಇದರ ಮೌಲ್ಯ ಹೆಚ್ಚಾದಾಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಅರ್ಥ ಮಾಡಿಕೊಳ್ಳುತ್ತಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಜಾಗತಿಕವಾದ ಮಟ್ಟದಲ್ಲಿ ಚಿನ್ನದ ಬೆಲೆಯ ಟ್ರೆಂಡ್ ನೋಡ್ತಾ ಇದ್ದರೆ ಈ ವಿಚಾರ ಸಹ ಅನುಮಾನವೇ ಸರಿ ಎಂದು ಹೇಳುವ ರೀತಿಯಲ್ಲಿ ನಡಿತಾ ಇದೆ ಅಂತಲೇ ಹೇಳಬಹುದು. ಹೌದು ನಾವ್ ಮಾತಾಡ್ತಿರೋದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವಂತಹ ಕೆಲವೊಂದು ವಿದ್ಯಾಮಾನಗಳು ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಕಾಣುತ್ತಿರುವಂತಹ ಇಳಿಕೆಯ ಬಗ್ಗೆ.
ಹೌದು ಚಿನ್ನದ ಬೆಲೆ ಕೆಲವು ಸಮಯಗಳ ಹಿಂದೆ ಇದ್ದಿದ್ದಕ್ಕಿಂತ ದಿನೇ ದಿನೇ ಸ್ವಲ್ಪ ಸ್ವಲ್ಪವೇ ಕಡಿಮೆ ಆಗ್ತಿರೋದು ಕಂಡು ಬರುತ್ತಿದೆ. ವಿಶೇಷವಾಗಿ ನಾವ್ ಮಾತಾಡ್ತಾ ಇರೋದು ನಮ್ಮ ಭಾರತ ದೇಶದಲ್ಲಿ ಚಿನ್ನದ ಬೆಲೆಯ ಬಗ್ಗೆ. ಚಿನ್ನವನ್ನು ಅತ್ಯಂತವಾದ ಹೆಚ್ಚು ಆಮದನ್ನು ಮಾಡಿಕೊಳ್ಳುವಂತಹ ದೇಶಗಳಲ್ಲಿ ಭಾರತ ದೇಶ ಸಹ ಒಂದಾಗಿ ಕಾಣಿಸಿಕೊಳ್ಳುತ್ತದೆ. ಭಾರತ ದೇಶದಲ್ಲಿರುವಂತಹ ಜನಸಂಖ್ಯೆಯ ಚಿನ್ನದ ಮೇಲಿನ ವ್ಯಾಮೋಹವೇ ಇದಕ್ಕೆ ಕಾರಣ ಅಂದ್ರು ಕೂಡ ತಪ್ಪಾಗಲ್ಲ.
ಬೆಳ್ಳಂಬೆಳಿಗ್ಗೆ ಸರ್ಕಾರದಿಂದ ಶಾಕ್.!! ಲೇಬರ್ ಕಾರ್ಡ್ ಲಾಭ ಇನ್ಮುಂದೆ ಬಂದ್
ಸದ್ಯಕ್ಕೆ ಚಿನ್ನದ ಬೆಲೆಯು 24 ಕ್ಯಾರೆಟ್ ಶುದ್ಧತೆಯ 10 ಗ್ರಾಂ ಚಿನ್ನಕ್ಕೆ 74,615 ರೂ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಅಂದ್ರೆ ಒಂದು ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನಕ್ಕೆ 7461 ಎಂದು ಹೇಳಬಹುದಾಗಿದೆ. ಆದ್ರೆ ಆಗಸ್ಟ್ 15ರ ಸಂದರ್ಭದಲ್ಲಿ ಈ ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಹೌದು ಗೆಳೆಯರೇ 74,000 ರೂಪಾಯಿಗಳ ಆಸು ಪಾಸಿನಲ್ಲಿ ಇರುವಂತಹ ಚಿನ್ನದ ಬೆಲೆ ಏನಿಲ್ಲಾ ಅಂದ್ರು 72,000ಗಳ ಆಸು ಪಾಸಿನಲ್ಲಿ ಆಗಸ್ಟ್ 15ರ ಸಂದರ್ಭದಲ್ಲಿ ಕಾಣಿಸಿಕೊಳ್ಳಲಿದೆ ಎನ್ನುವಂತಹ ಮಾಹಿತಿಗಳು ಸಿಕ್ಕಿವೆ. ಇದು ಎಷ್ಟರ ಮಟ್ಟಿಗೆ ನಿಜ ಆಗುತ್ತೆ ಅಥವಾ ಸುಳ್ಳಾಗುತ್ತೆ ಅನ್ನೋದನ್ನ ನಾವು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ನೀವು ಕೂಡ ಚಿನ್ನ ಖರೀದಿ ಮಾಡುವವರಾಗಿದ್ದರೆ ಇದರ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಇತರೆ ವಿಷಯಗಳು:
ಇನ್ಮುಂದೆ ಟೆನ್ಷನ್ ಬೇಡ! ₹250 ರಿಂದ ಸಿಗತ್ತೆ ಗರಿಷ್ಠ1.5 ಲಕ್ಷ
ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ ಪದವೀಧರರಿಗೆ ಉದ್ಯೋಗಾವಕಾಶ!