ಮಳೆಯಿಂದ ಮನೆ ಕಳೆದುಕೊಂಡವರಿಗೆ ಗುಡ್‌ ನ್ಯೂಸ್.!! ಸರ್ಕಾರದಿಂದ ನಿಮ್ಮ ಕೈ ಸೇರಲಿದೆ ಪರಿಹಾರ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಮಳೆಹಾನಿಯಿಂದ ಮನೆಹಾನಿಗೊಂಡ ಸಂತ್ರಸ್ತ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಪರಿಹಾರದ ಹಣವನ್ನು ಹೆಚ್ಚಳ ಮಾಡಿ, ಸರ್ಕಾರ ಆದೇಶಿಸಿದೆ.

Government compensation for house damage

ಈ ಕುರಿತಂತೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಹಾಗೂ ಸೇವೆಗಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯ ನಡವಳಿಯನ್ನು ಹೊರಡಿಸಿದ್ದಾರೆ.

ಅದರಲ್ಲಿ ಭಾರತೀಯ ಹವಾಮಾನ ಇಲಾಖೆಯು ದಿನಾಂಕ: ಇಲಾಖೆಯು ದಿನಾಂಕ: 15.04,2024 ರಂದು ನೀಡಿರುವ ಮುನ್ಸೂಚನೆಯಲ್ಲಿ ನೈಋತ್ಯ ಮುಂಗಾರು-2024 ರ ಮೊದಲ ಹಂತದ ಕಾರ್ಯಚರಣೆಯ ಧೀರ್ಘ ವ್ಯಾಪ್ತಿಯ ಮುನ್ಸೂಚನೆಯ (LRF) ಪುಕಾರ ಒಟ್ಟಾರೆಯಾಗಿ ದೇಶದಾದ್ಯಂತ ಮಳೆಯು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಅದರಂತೆಯೇ ಈಗಾಗಲೇ ರಾಜ್ಯದಲ್ಲಿ 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇದರಿಂದಾಗಿಯೇ ಹಲವಾರು ಮನೆ ಹಾನಿ / ಗೃಹೋಪಯೋಗಿ ವಸ್ತುಗಳು ಹಾನಿಯಾಗಿರುವುದು ವರದಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ಅದರಂತೆ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ನೀಡಬಹುದಾದ ಪರಿಹಾರಗಳ ಕುರಿತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Items and Norms of Assistance ಮಾರ್ಗಸೂಚಿಗಳನ್ನು ಭಾರತ ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ:11/07/2023 ರಂದು ಹೊರಡಿಸಿರುತ್ತದೆ. ಸದರಿ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವಂತಹ ಪರಿಹಾರ ಮೊತ್ತವನ್ನು ಮಾತ್ರವೇ ರಾಜ್ಯ ವಿಪತ್ತು ಪರಿಹಾರವನ್ನು ನಿಧಿಯ ಅನುದಾನದಲ್ಲಿ ಭರಿಸಲು ಅವಕಾಶವಿರುತ್ತದೆ.

ಆದ್ದರಿಂದ ಪುಸ್ತುತ 2024-25 ನೇ ಸಾಲಿನ ಮುಂಗಾರು ಹಾಂಗಮಿನಲ್ಲಿ (1ನೇ ಜೂನ್ ರಿಂದ 30ನೇ ಸಪ್ಟೆಂಬರ್ ರವರೆಗೆ) ಭಾರಿ ಮಳೆಯಿಂದ ಉಂಟಾಗುವ ನೈಸರ್ಗಿಕ ವಿಪತ್ತುಗಳಿಗೆ, ಭಾರತ ಸರ್ಕಾರವು ದಿನಾಂಕ:11/07/2023 ರಂದು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪರಿಹಾರವನ್ನು ಮೊತ್ತದ ಜೊತೆಗೆ ರಾಜ್ಯ ಸರ್ಕಾದಿಂದ ಅರ್ಹತೆಯಂತೆ ಮನೆ/ಹೆಚ್ಚುವರಿ ಮೊತ್ತವನ್ನು ಪಾವತಿಸಲು ನಿರ್ಧರಿಸಿ ಈ ಕೆಳಕಂಡಂತೆ ಆದೇಶದ್ದಾರೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಉಂಟಾಗುವ ಅತಿವೃಷ್ಟಿ | ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ | ದುರಸ್ತಿ ಕಾರ್ಯ ಹಾಗೂ ಪ್ರವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಈ ಕೆಳಗೆ ನೀಡಿರುವಂತಹ ಪರಿಹಾರವನ್ನು ಪಾವತಿಸಲು ಮಂಜೂರಾತಿಯನ್ನು ನೀಡಿ ಆದೇಶಿಸಿದ್ದಾರೆ.

1. ಪ್ರವಾಹದಿಂದ ಹಾನಿಗೊಳಗಾದ ಮನೆಗಳನ್ನು 02 ವರ್ಗಗಳಲ್ಲಿ (ಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣ ಮತ್ತು ಭಾಗಶ: ಹಾನಿಯಾದ ಮನೆಗಳ ದುರಸ್ತಿ) ವಿಂಗಡಿಸಿ ಪರಿಹಾರ ಪಾವತಿಸುವುದು.

2. ಪೂರ್ಣಹಾನಿಯಾದ ಮನೆಗಳಿಗೆ ಭಾರತ ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ | ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ಮಾರ್ಗಸೂಚಿಗಳನ್ವಯ ರೂ.1.20 ಲಕ್ಷಗಳ ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನ ನೀಡುವುದು. ದೇವರಾಜ್ ಅರಸು ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪುದೇಶಗಳಲ್ಲಿ ಸಾಮಾನ್ಯ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.20 ಲಕ್ಷ ಮತ್ತು ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಮಂಜೂರು ಮಾಡುವ ಮನೆಗೆ ರೂ.1.50 ಲಕ್ಷ ಮಂಜೂರು ಮಾಡುವುದು. ಈ ಮನೆಗಳನ್ನು ಜಿಲ್ಲಾಧಿಕಾರಿಗಳು ಅನುಮೋದನೆ ಮಾಡಿ ವಿವರಗಳೊಂದಿಗೆ ಫಲಾನುಭವಿಗಳ ಪಟ್ಟಿಯನ್ನು RGRHCL ಪರಿಹಾರ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿಯ ವಿವರಗಳನ್ನು ದಾಖಲಿಸುವುದು.

3. ಅನಧಿಕೃತವಾದ ಜಮೀನಿನಲ್ಲಿ ಸಂಪೂರ್ಣವಾದ ಹಾನಿಗೊಳಗಾದ ಮನೆಗಳಿಗೆ 1 ಬಾರಿ ಪರಿಹಾರವಾಗಿ ರೂ.1.00 ಲಕ್ಷಗಳನ್ನು ಪಾವತಿಸುವುದು ಹಾಗೂ ಯಾವುದೇ ಮನೆಯನ್ನು ಮಂಜೂರು ಮಾಡುವಂತಿಲ್ಲ.

4. ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯನ್ನು / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳ ಅನ್ವಯ ಭಾಗಶಃ ಹಾನಿಗೊಳಗಾದ ಮನೆಗದುರಸ್ತಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ರೂ.6,500/-ಗಳ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.43,500/-ಗಳು ಸೇರಿದಂತೆ ಒಟ್ಟು ರೂ.50,000/-ಗಳನ್ನು ಪಾವತಿಸುವುದು.

ಯಜಮಾನಿಯರಿಗೆ ಅಭಯ ನೀಡದ ಸಿಎಂ.!! ಈ ದಿನಾಂಕದೊಳಗೆ ಖಾತೆ ಸೇರಲಿದೆ ಬಾಕಿ ಹಣ

5. ನೈಸರ್ಗಿಕ ತುರ್ತು ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ పిడి ಖಾತೆಗೆ ಒದಗಿಸಿರುವ ಅನುದಾನವನ್ನು ನಂತರ ಲೆಕ್ಕ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

6. ಭಾರತ ಸರ್ಕಾರದ ಗ್ರಹ ಮಂತ್ರಾಲಯವು ದಿನಾಂಕ:11/07/2023ರಂದು ಹೊರಡಿಸಿರುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ / ರಾಜ್ಯ ವಿಪತ್ತು ಪರಿಹಾರ ನಿಧಿಯ Revised Items and Norms of Assistance ರ ಮಾರ್ಗಸೂಚಿಗಳನ್ವಯ ಪ್ರವಾಹದಿಂದ ಬಟ್ಟೆ ಕಳೆದುಕೊಂಡರೆ ರೂ.2,500/- ಹಾಗೂ ಗೃಹೋಪಯೋಗಿ ವಸ್ತುಗಳನ್ನು ಹಾನಿಯಾದರೆ ರೂ.2,500/- ಗಳ ಪರಿಹಾರ ಪಾವತಿಸಲು ನಿಗದಿಯಾಗಿದ್ದು, ಅದರಂತೆ ರೂ.5,000/- ಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸುವುದು.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಮತ್ತು ದುರಸ್ತಿ ಕಾರ್ಯ ಹಾಗೂ ಪುವಾಹದಿಂದಾಗಿ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಮೇಲೆ ತಿಳಿಸಿರುವಂತೆ ಪರಿಹಾರವನ್ನು ಈ ಕೆಳಕಂಡ ಷರತ್ತುಗಳ ಪಾಲನೆಗೆ ಒಳಪಟ್ಟು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುಮತಿಯನ್ನು ನೀಡಿದ್ದಾರೆ.

ಷರತ್ತುಗಳು:

1. ಜಿಲ್ಲಾಧಿಕಾರಿಗಳು ಪರಿಹಾರ ಮೊತ್ತವನ್ನು ನಿಯಮ ಅನುಸಾರವಾಗಿ ಅರ್ಹ ಸಂತ್ರಸ್ತರುಗಳಿಗೆ ನೇರವಾಗಿ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್‌ ಖಾತೆಗಳಿಗೆ DBT ಮೂಲಕ ಪರಿಹಾರವನ್ನು ಪಾವತಿಸಲು ಕ್ರಮವಹಿಸುವುದು.
2. ಅತಿವೃಷ್ಟಿ ಮತ್ತು ಪ್ರವಾಹದಿಂದ ಮನೆ ಹಾನಿಯ ಬಗ್ಗೆ ಘಟನೆ ನಡೆದ ತಕ್ಷಣ (ಗರಿಷ್ಟ 2 ದಿನಗಳೊಳಗಾಗಿ ವರದಿಯಾದ 05 ದಿನಗಳ ಒಳಗಾಗಿ ಗ್ರಾಮ ಆಡಳಿತಾಧಿಕಾರಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಎಂಜಿನಿಯರಿಂಗ್‌ ವಿಭಾಗ ಇವರುಗಳು ಜಂಟಿಯಾಗಿ ಸ್ಥಳಗಳು ಭೇಟಿ ನೀಡಿ, ಸರ್ವೆ ನಡೆಸಿ, ಹಾನಿ ವಿವರಗಳ ಕುರಿತು ವರದಿಯನ್ನು ತಹಶೀಲ್ದಾರ್‌ರವರಿಗೆ ನೀಡುವುದರ ಬಗ್ಗೆ ತಿಳಿಸಿದ್ದಾರೆ.
3. ಮನಹಾನಿಯ ಜಂಟಿ ಸಮೀಕ್ಷೆ ವರದಿ ಸ್ವೀಕೃತವಾದ 03 ಕರ್ತವ್ಯದ ದಿನಗಳ ಒಳಗಾಗಿ ತಹಶೀಲ್ದಾರ್‌ರವರು ನಿಯಮಾನುಸಾರ ಪರಿಶೀಲಿಸಿ, ಸದರಿ ವರದಿಯ
ಪುಸ್ತಾವನೆಯನ್ನು ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು. ಪುಸ್ತಾವನೆಯನ್ನು ಉಪ ವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.

4. ಜಿಲ್ಲಾಧಿಕಾರಿಗಳು ಪುಸ್ತಾವನೆಯನ್ನು ಪರಿಶೀಲಿಸಿ ಮತ್ತು 07 ಕರ್ತವ್ಯದ ದಿನಗಳ ಒಳಗಾಗಿ ನಿರ್ಧಾರವನ್ನು ಕೈಗೊಂಡು ಹಾಗೂ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರವಾಗಿ ನೇರವಾಗಿ ಅವರ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕವಾಗಿ ಪರಿಹಾರವನ್ನು ಪಾವತಿಸಲು ಕ್ರಮವಹಿಸುವುದು.

5. ಜಿಲ್ಲಾಧಿಕಾರಿಗಳ PD ಖಾತೆಯಲ್ಲಿರುವ ರಾಜ್ಯ ವಿಪತ್ತು ಪರಿಹಾರ ನಿಧಿಗಳ ಅನುದಾನವನ್ನು ಮೇಲೆ ತಿಳಿಸಿರುವ ನೈಸರ್ಗಿಕ ವಿಕೋಪಗಳಿಂದ ಉಂಟಾದಂತಹ ಹಾನಿ ಪ್ರಕರಣಗಳಲ್ಲಿ ಪರಿಹಾರವನನ್ನು ಪಾವತಿಸಲು ಬಳಸತಕ್ಕದ್ದು.

6. ಜಿಲ್ಲಾಧಿಕಾರಿಗಳು ಆರ್ಥಿಕವಾದ ವರ್ಷದ ಅಂತ್ಯಕ್ಕೆ ನಿಗಧಿತವಾದ ನಮೂನೆಯಲ್ಲಿ ಹಣವನ್ನು ಬಳಕ ಪುಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸುವುದು. ಸಂತ್ರಸ್ತರ ಗುರುತಿಸುವಿಕೆಯಲ್ಲಿ ಯಾವುದೇ ರೀತಿಯ ಪುನರಾವರ್ತನೆ ಆಗದಂತೆ ನೋಡಿಕೊಳ್ಳತಕ್ಕದ್ದು.

8. ಪ್ರತಿ ತಿಂಗಳು ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮವಾರು ಫಲಾನುಭವಿಗಳ ವಿವರ, ವಿವರಗಳ ಮಾಹಿತಿಯನ್ನು ತಯಾರಿಸಿ, ಪಾವತಿಸಲಾಗದ ಪರಿಹಾರದ ಮೊತ್ತದ ವಿವರಗಳ ಮಾಹಿತಿಯನ್ನು ತಯಾರಿಸಿ ಸಂಬಂಧಪಟ್ಟ ಜಿಲ್ಲಾ ಕಛೇರಿಗಳಲ್ಲಿ, ತಾಲ್ಲೂಕು ಕಛೇರಿಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸತಕ್ಕದ್ದು ಮತ್ತು ಸದರಿ ವಿವರಗಳನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ತಮ್ಮ ಜಾಲತಾಣದಲ್ಲಿ (ವೆಬ್‌ಸೈಟ್‌ನಲ್ಲಿ) ಪಾರದರ್ಶಕತೆಗಾಗಿ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪುಕಟಿಸುವುದು.

9. ಮನಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹತೆಯನ್ನು ಹಾಗೂ ಮಾಹಿತಿಯನ್ನು ನಮೂದಿಸುವುದರಲ್ಲಿ ಮತ್ತು ಹಣ ಬಳಕೆಯಲ್ಲಿ ಯಾವುದೇ ಲೋಪವಾದಲ್ಲಿ ಸಂಭಂದಪಟ್ಟ ಅಧಿಕಾರಿ/ನೌಕರರನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು.

ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಮನೆಗಳ ವಿವರಗಳನ್ನು ಜಿಲ್ಲಾಧಿಕಾರಿಗಳು RGRHCL ಪರಿಹಾರಗಳ ತಂತ್ರಾಂಶದಲ್ಲಿ ದಾಖಲಿಸಲು ಅನುವಾಗುವಂತೆ, ಸದರಿ ತಂತ್ರಾಂಶವನ್ನು ಈ ಕೂಡಲೇ ಹಾಗೂ ದಿನಾಂಕ:30.09.2024 ರವರೆಗೆ ಸಕ್ರಿಯಗೊಳಿಸಲು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ರವರು ಕ್ರಮವಹಿಸಿರುವಂತೆ ತಿಳಿಸಿದ್ದಾರೆ.

ಅತಿವೃಷ್ಟಿ ಮತ್ತು ಪುವಾಹದಿಂದ ದಿನಾಂಕ: 01.06.2024 ರಿಂದ ಇದುವರೆವಿಗೂ ಹಾನಿಯಾಗಿರುವ ಮನಗಳ ವಿವರ ಮತ್ತು ಅರ್ಹ ಫಲಾನುಭವಿಗಳ ವಿವರಗಳನ್ನು ಪಾವತಿಸಲಾದ ಪರಿಹಾರದ ಮೊತ್ತ ಮತ್ತು ಇನ್ನಿತರೆ ಅಗತ್ಯ ಮಾಹಿತಿಗಳನ್ನು ಹಾಗೂ 30ನೇ ಸೆಪ್ಟೆಂಬರ್ ರವರೆಗೆ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ರವರೆಗೆ) ಮನ ಹಾನಿಯ ವಿವರಗಳನ್ನು RGRHCL ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮವನ್ನು ವಹಿಸುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 540 ವೆಚ್ಚ-7/2021, ದಿನಾಂಕ:31.07.2024 ರಲ್ಲಿ ನೀಡಿರುವ ಸಹಮತದ ಅನುಸಾರ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು :

ಆರೋಗ್ಯ ಇಲಾಖೆಯಿಂದ ಭರ್ಜರಿ ಆಫರ್.!!‌ 14 ಸಾವಿರಕ್ಕೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ.! ಈ ಸ್ಕೀಮ್‌ನಿಂದ ರಾಜ್ಯದ ಯುವಕರಿಗೆ ವಿದೇಶದಲ್ಲಿ ಉದ್ಯೋಗ ಅವಕಾಶ

Leave a Reply

Your email address will not be published. Required fields are marked *