ಹಲೋ ಸ್ನೇಹಿತರೆ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮಿಯ ಯೋಜನೆಯು ಜೂನ್, ಜುಲೈ ತಿಂಗಳ ಕಂತಿನ ಹಣ ಇಂದಿನಿಂದ ಹಂತ ಹಂತವಾಗಿ ಖಾತೆಗೆ ಜಮೆ ಕಾರ್ಯ ಆರಂಭವಾಗಲಿದೆ. ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಹಿತಿ ಸಂಪೂರ್ಣ ನೀಡಿರುವ ಅವರು, ಎಲ್ಲಾ ಜಿಲ್ಲೆಗಳಾದ್ಯಂತ ಹಂತ ಹಂತವಾಗಿ ಗೃಹಲಕ್ಷ್ಮಿ ಹಣ ವಿತರಣೆ ಮಾಡುವುದರೊಂದಿಗೆ ಯೋಜನೆಯು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ಫಲಾನುಭವಿಗಳಿಗೆ ಭರವಸೆ ನೀಡಿದರು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭಿಸಲಾದ ಗೃಹ ಲಕ್ಷ್ಮಿ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ಅರ್ಹ ಮಹಿಳೆಯರಿಗೆ ಪ್ರತೀ ತಿಂಗಳು 2,000 ರೂ.ಗಳ ಆರ್ಥಿಕ ನೆರವು ನೀಡುವ ಗುರಿಯೊಂದಿಗೆ ಆರಂಭಿಸಲಾಯಿತು. ಆದಾಗ್ಯೂ, ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಜೀವನೋಪಾಯಕ್ಕಾಗಿ ಈ ಯೋಜನೆಯನ್ನು ಅವಲಂಬಿಸಿರುವ ಅನೇಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ.
ಇತರೆ ವಿಷಯಗಳು:
ಫ್ರೇಶರ್ಸ್‌ಗಳಿಗೆ ಭರ್ಜರಿ ಗುಡ್ ನ್ಯೂಸ್.!! ಇನ್ಫೋಸಿಸ್‌ನಲ್ಲಿ ಜಾಬ್ ಭಾಗ್ಯ
PM ಸ್ಕಾಲರ್‌ಶಿಪ್ ಯೋಜನೆ 2024: ಈ ಮಕ್ಕಳ ಅದೃಷ್ಟ ಖುಲಾಯಿಸಿದೆ.! ಸರ್ಕಾರದಿಂದ ನಿಮ್ಮ ಖಾತೆ ಸೇರಲಿದೆ 36,000 ರೂ.