ಹಲೋ ಸ್ನೇಹಿತರೇ, ರಾಜ್ಯದ ಜನರಿಗೆ ಹೆಚ್ಚಿನ ಅನುಕೂಲಗಳನ್ನು ಕೊಡಬೇಕು, ಅವರೆಲ್ಲರೂ ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಉಚಿತ ಯೋಜನೆಗಳನ್ನು ಜಾರಿಗೆ ತಂದಿತು.
ಅದು ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆ. ಈ ಯೋಜನೆಗಳ ಮೂಲಕ ಸರ್ಕಾರವು ಜನರಿಗೆ ಅರ್ಥಿಕವಾಗಿಯೂ ಸಹಾಯ ಮಾಡುತ್ತಿದೆ..
ಈ ಕೆಲಸ ತಪ್ಪದೇ ಮಾಡಿ
ಗೃಹಲಕ್ಷ್ಮಿ ಯೋಜನೆಯ ಮೂಲಕ ಮನೆಯ ಮುಖ್ಯಸ್ಥೆಯ ಖಾತೆಗೆ ಪ್ರತಿ ತಿಂಗಳು 2000 ಬರುತ್ತಿದೆ, ಅನ್ನಭಾಗ್ಯ ಯೋಜನೆಯ ಮೂಲಕ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಇರುವ ಎಲ್ಲಾ ಸದಸ್ಯರಿಗೆ ಪ್ರತಿ ತಿಂಗಳು 170 ರೂಪಾಯಿ ಸಿಗುತ್ತಿದೆ. ಆದರೆ ರಾಜ್ಯದ ಎಲ್ಲಾ ಜನರಿಗೂ ಕೂಡ ಈ ಯೋಜನೆಯ ಹಣ ಸಿಗುತ್ತಿಲ್ಲ, ಕೆಲವರಿಗೆ ದಾಖಲೆ ಸರಿ ಇಲ್ಲದೇ ಅಥವಾ ಇನ್ನಿತರ ಕಾರಣಕ್ಕೆ ಈ ಯೋಜನೆಗಳ ಹಣ ಸಿಗುತ್ತಿಲ್ಲ. ಒಂದು ವೇಳೆ ನಿಮಗೆ ಹೀಗೆ ಆಗಿದ್ರೆ ಈ ಒಂದು ಕೆಲಸವನ್ನು ನೀವು ಕಡ್ಡಾಯವಾಗಿ ಮಾಡ ಬೇಕು.
ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ!
ಹೌದು, ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಇನ್ನು ಕೂಡ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎಂದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು ಎಂದು ಸರ್ಕಾರ ತಿಳಿಸಿದೆ.
ಹೌದು, 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿರುವವರು ಅಪ್ಡೇಟ್ ಮಾಡಿಸಬೇಕು ಎಂದು ಈಗಾಗಲೇ ಸರ್ಕಾರ ತಿಳಿಸಿತ್ತು, ಒಂದು ವೇಳೆ ನೀವಿನ್ನು ಈ ಕೆಲಸ ಮಾಡಿಸಿಲ್ಲ ಎಂದರೆ, ಈಗಲೇ ಮಾಡಿಸಿ. ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಜೂನ್ 14 ಕೊನೆಯ ದಿನಾಂಕ ಆಗಿದ್ದು, ಆಧಾರ್ ಅಪ್ಡೇಟ್ ಹೇಗೆ ಮಾಡಬಹುದು ಎಂದು ತಿಳಿಯೋಣ..
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ
ಮೊಬೈಲ್ ನಲ್ಲೇ ಮಾಡಿ ಆಧಾರ್ ಅಪ್ಡೇಟ್
*ಮೊದಲಿಗೆ ನೀವು UIDAI ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ,
https://myaadhaar.uidai.gov.in/verifyAadhaar ಇದು ಅಧಿಕೃಫಾ ವೆಬ್ಸೈಟ್ ಆಗಿದೆ
*ಈಗ ಲಾಗಿನ್ ಮಾಡ್ಬೇಕು, ಇದಕ್ಕಾಗಿಯೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಅನ್ನು ಹಾಕಿ, ಕ್ಯಾಪ್ಚ ಕೋಡ್ ಅನ್ನು ಎಂಟ್ರಿ ಮಾಡಿ, ಬಳಿಕ ನಿಮ್ಮ ಓಟಿಪಿ ಪಡೆಯುವ ಆಪ್ಶನ್ ಸೆಲೆಕ್ಟ್ ಮಾಡಿ.
*ನಿಮ್ಮ ಫೋನ್ ಗೆ ಬರುವ ಓಟಿಪಿ ಅನ್ನು ಎಂಟರ್ ಮಾಡಿ ಆ ಮೂಲಕ Login ಮಾಡಿ
*ಬಳಿಕ ಡಾಕ್ಯುಮೆಂಟ್ ಅಪ್ಡೇಟ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ
*ಈಗ ನಿಮ್ಮ ಬಗ್ಗೆ ಇರುವ ಎಲ್ಲಾ ಮಾಹಿತಿಗಳು ಸರಿಯಾಗಿದೆಯಾ ಎಂದು ಚೆಕ್ ಮಾಡಿ, ನಿಮ್ಮ ಹೆಸರು, ಅಡ್ರೆಸ್, ಡೇಟ್ ಆಫ್ ಬರ್ತ್ ಎಲ್ಲವನ್ನು ವೆರಿಫೈ ಮಾಡಿ. ಎಲ್ಲವೂ ಸರಿ ಇದ್ದರೆ I verify above details are correct ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ನಂತರ Next ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.
*ಇದಾದ ಬಳಿಕ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ Submit ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಇಲ್ಲಿಗೆ ಆಧಾರ್ ಅಪ್ಡೇಟ್ ನ ಪ್ರಕ್ರಿಯೆಯು ಮುಗಿದಿದೆ ಎಂದು ಅರ್ಥ.
ಆಧಾರ್ ಅಪ್ಡೇಟ್ ಗೆ ಅಗತ್ಯವಿರುವ ದಾಖಲೆಗಳು
*ಆಧಾರ್ ಕಾರ್ಡ್
*ಫೋನ್ ನಂಬರ್
*ಪ್ಯಾನ್ ಕಾರ್ಡ್ / LPG Cylinder Bill
*ಐಡೆಂಟಿಟಿ ಪ್ರೂಫ್ ಅಥವಾ ರೇಷನ್ ಕಾರ್ಡ್
ಇತರೆ ವಿಷಯಗಳು:
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ
ಮನೆ ಇಲ್ಲದವರಿಗೆ ಮನೆ ಭಾಗ್ಯ.!! ಕೇಂದ್ರದ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ