ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಯಜಮಾನಿಯರಿಗೆ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗೃಹ ಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಇರುವ ಹಣವನ್ನು 10 ದಿನಗಳ ಒಳಗಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಾಕಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಹಣ ಮೂರ್ನಾಲ್ಕು ತಿಂಗಳಿನಿಂದ ಜಮೆ ಆಗಿಲ್ಲ ಎನ್ನುವುದು ತಪ್ಪು, ಮೇ ತಿಂಗಳ ಗೃಹಲಕ್ಷ್ಮಿ ಹಣವನ್ನು ಹಾಕಿದ್ದೇವೆ. ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಹಾಕಲು ತಾಂತ್ರಿಕ ದೋಷ ಅಡ್ಡಿಯಾಗಿದ್ದು, ಈಗಾಗಲೇ ಡಿಬಿಟಿಯನ್ನು ಪುಶ್ ಮಾಡುತ್ತಿದ್ದೇವೆ. 8-10 ದಿನದೊಳಗೆ ಗೃಹಲಕ್ಷ್ಮಿ ಹಣ ಪ್ರತೀಯೊಬ್ಬರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಸಹ ಓದಿ: ಪೋಸ್ಟ್ ಆಫೀಸ್ ನೇಮಕಾತಿ 2024: 10 ನೇ ತರಗತಿ ಪಾಸ್ ಆದವರಿಗೆ ಸಿಗುತ್ತೆ 63,000 ರೂ ಸಂಬಳ
ಈ ಯೋಜನೆಯನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ನೀಡಲಾಗುತ್ತಿದೆ. ಚುನಾವಣೆ ಮುಂಚಿತವಾಗಿಯೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಅಧಿಕಾರಕ್ಕೆ ಬರಲು ಈ ಯೋಜನೆಗಳೇ ಕಾರಣವಾಗಿರುವುದರಿಂದ ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು:
ವಾಹನ ಸವಾರರಿಗೆ ಶಾಕಿಂಗ್ ಸುದ್ದಿ: ಆಗಸ್ಟ್ ನಿಂದ ರಾಜ್ಯಾದ್ಯಂತ ಹೊಸ ರೂಲ್ಸ್!
ರಾಜ್ಯದ ಬಡಜನತೆಗೆ ಸಿಹಿ ಸುದ್ದಿ!! ರಾಜ್ಯಾದ್ಯಂತ ಮತ್ತೆ 252 ‘ನಮ್ಮ ಕ್ಲಿನಿಕ್ʼ ಆರಂಭ