ಹಲೋ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಕಾರಣಕ್ಕೆ ಗ್ಯಾರಂಟಿ ಭಾಗ್ಯಗಳನ್ನು ಘೋಷಣೆ ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದಿದ್ದು, ನೀಡಿದ ಆಶ್ವಾಸನೆ ಈಡೇರಿದೆಯಾದರೂ ಈಗ ಇದೇ ಈ ಸರ್ಕಾರಕ್ಕೆ ದೊಡ್ಡ ಮುಳುವಾಗಿದೆ ಎನ್ನಲಾಗಿದೆ.
ಹೌದು, ಗ್ಯಾರಂಟಿ ಭಾಗ್ಯಗಳ ಬಗ್ಗೆ ಸರ್ಕಾರ ಅಂತರಿಕವಾಗಿ ದಿನಕ್ಕೊಂದು ಮಾರ್ಪಾಡುಗಳನ್ನು ಮಾಡುತ್ತಿರುವಂತೆ ಕಂಡು ಬರುತ್ತಿದೆ. ಅಲ್ಲದೆ ಎಲ್ಲರಿಗೂ ಭಾಗ್ಯ ಯೋಜನೆ ಸಿಗಲಿದೆ ಎಂದು ಈ ಹಿಂದೆ ನೀಡಿದ್ದ ಸಿಎಂ ಹೇಳಿಕೆ ಈಗ ಹುಸಿಯಾಗುತ್ತಿದೆಯಾ ಅನ್ನೋ ಅನುಮಾನ ಮೂಡುವಂತೆ ಆಗಿದೆ. ಅಷ್ಟಕ್ಕೂ ಸರ್ಕಾರ ಈ ವಿಚಾರದಲ್ಲಿ ಏನೆಲ್ಲಾ ನಿರ್ಧಾರ ಮಾಡಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಗ್ಯಾರಂಟಿ ಯೋಜನೆಗಳಿಗೆ ಕತ್ತರಿ
ಸರ್ಕಾರ ಗ್ಯಾರಂಟಿ ಯೋಜನಗಳಿಗೆ ಭಾರೀ ಹಣವನ್ನು ಖರ್ಚು ಮಾಡುತ್ತಿವೆ. ಕೆಲವು ವರದಿಗಳ ಪ್ರಕಾರ ಸರ್ಕಾರವೇ ಖರ್ಚಾಗುತ್ತಿರುವ ಹಣ ನೋಡಿ ಬೆಚ್ಚಿದೆಯಂತೆ. ಈ ಕಾರಣಕ್ಕೆ ಈ ಯೋಜನೆಗಳಲ್ಲಿ ಕೆಲವು ಪರಿಷ್ಕರಣೆ ಮಾಡಬೇಕು ಅನ್ನೋ ಹೇಳಿಕೆಯನ್ನು ಸರ್ಕಾರದ ಕೆಲವು ಸಚಿವರು ಸಿಎಂಗೆ ತಿಳಿಸುತ್ತಿದ್ದಾರೆ ಎನ್ನಲಾಗಿದೆ. ಈ ರೀತಿ ಏನಾದರೂ ಆದರೆ ಎಪಿಎಲ್ ಕಾರ್ಡ್ ಹೊಂದಿರುವ ಯಾರಿಗಾದರೂ ಈ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ ಎನ್ನಲಾಗಿದೆ.
ಅದಾಗ್ಯೂ ಸರ್ಕಾರ ತಳ್ಳಿಹಾಕುತ್ತಿದೆ. ನಾವು ಯಾವುದೇ ಪರಿಷ್ಕರಣೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದು, ಈಗ ಹೇಗೆ ಫಲಾನುಭವಿಗಳಿಗೆ ಸೌಲಭ್ಯ ನೀಡುತ್ತಿದ್ದೆವೋ ಅದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ ಅನ್ನೋ ಹೇಳಿಕೆ ನೀಡುತ್ತಿದೆ. ಈ ನಡುವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಹಸಿವನ್ನು ನೀಗಿಸುತ್ತಿದ್ದು, ಅವು ಯಥಾವತ್ತಾಗಿ ಮುಂದುವರಿಯಲಿದೆ ಎಂದಿದ್ದಾರೆ.
ಕೇಂದ್ರದ ಹೊಸ ಯೋಜನೆ! 5 ವರ್ಷಗಳವರೆಗೆ ಪ್ರತಿ ತಿಂಗಳು ಪಡೆಯಬಹುದು ₹20,500
ಅಜ್ಜರನಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದ ನಂತರ ಮಾಧ್ಯಮಗಳ ಜೊತೆಗೆ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಅದರಂತೆ ಸರ್ಕಾರ ಈ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ ಅರ್ಹ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳೂ ಸಹ ಹಣ ಹಾಕುತ್ತಿದೆ. ಆದರೆ ಕಳೆದ ಎರಡು ಮೂರು ತಿಂಗಳಿಂದ ಹಲವರ ಖಾತೆಗೆ ಜಮಾ ಆಗಿಲ್ಲ. ಪರಿಣಾಮ ಸರ್ಕಾರ ಈ ವಿಚಾರದಲ್ಲಿ ಏನೋ ಬದಲಾವಣೆ ಮಾಡಲು ಮುಂದಾಗಿದೆ ಅನ್ನೋ ಅನುಮಾನವನ್ನು ಉಂಟು ಮಾಡಿದೆ. ಹಾಗೆಯೇ ಅನ್ನಭಾಗ್ಯ ಯೋಜನೆಯಲ್ಲೂ ಸಹ ಕೆಲವು ಬದಲಾವಣೆಗಳಾಗಿದ್ದು, ಈ ನಡುವೆ ಯಾರಿಗೂ ಸಹ ಈ ಯೋಜನೆಗಳ ಲಾಭ ಪಡೆಯಲು ಹೊಸದಾಗಿ ಬಿಪಿಎಲ್ ಕಾರ್ಡ್ ನೀಡುವುದನ್ನೇ ನಿಲ್ಲಿಸಿಬಿಟ್ಟಿದೆ.
ಇತರೆ ವಿಷಯಗಳು:
ಕರ್ನಾಟಕಕ್ಕೆ ಮತ್ತೊಂದು ಶಾಕ್.!! ನೀರಿನ ದರ ಏರಿಕೆಗೆ ಮುಂದಾದ ರಾಜ್ಯ ಸರ್ಕಾರ
ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಸಿದ್ಧ.!! ಇನ್ಮುಂದೆ 5 ಕೆಜಿ ಅಕ್ಕಿ ಹಣ ಬಂದ್..