ಹಲೋ ಸ್ನೇಹಿತರೇ, ಪ್ರತಿ ದಿನ ಕೆಲಸ ಮುಗಿಸಿಕೊಂಡು ಹೊರಟಾಗ ನೆಮ್ಮದಿಯಾಗಿ ಹೋಗಿ ಊಟ ಮಾಡಿ ಮಲಗೋದಕ್ಕೆ ತಮ್ಮದೇ ಒಂದು ಸ್ವಂತ ಮನೆ ಇರಬೇಕು ಎನ್ನುವುದು ಎಲ್ಲರ ಆಸೆ.. ಆದರೆ ಈಗ ಪ್ರಪಂಚ ಓಡುತ್ತಿರುವ ಸ್ಥಿತಿ, ಹಣದುಬ್ಬರ ಇದೆಲ್ಲವನ್ನು ನೋಡಿದರೆ ಸ್ವಂತ ಮನೆ ಮಾಡಿಕೊಳ್ಳುವುದು ಮಧ್ಯಮವರ್ಗದ ಜನರಿಗೆ ಮತ್ತು ಬಡವರಿಗೆ ಕನಸಿನ ಮಾತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಎಷ್ಟೇ ಕಷ್ಟಪಟ್ಟರು ಮನೆ ಮಾಡಿಕೊಳ್ಳುವಷ್ಟು ಹಣ ಹೊಂದಿಸಲು ಸಾಧ್ಯ ಆಗುವುದಿಲ್ಲ.
ಹೀಗಿದ್ದಾಗ ಜನರು ಸಾಲ ಮಾಡಿ, ಬ್ಯಾಂಕ್ ಲೋನ್ ಪಡೆದು ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಆಸೆ ಪಡುತ್ತಾರೆ. ಅದಕ್ಕಾಗಿ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಬ್ಯಾಂಕ್ ಲೋನ್ ಸಿಗುವುದು ಸುಲಭದ ಮಾತಲ್ಲ, ಅದಕ್ಕೆ ಬಹಳಷ್ಟು ಪ್ರೋಸಿಜರ್ ಇರುತ್ತದೆ, ಅನೇಕ ದಾಖಲೆಗಳು ಬೇಕಾಗುತ್ತದೆ.
ಅವೆಲ್ಲವನ್ನೂ ಒದಗಿಸಿ ಲೋನ್ ಪಡೆಯುವುದು ಕೂಡ ಕಷ್ಟವೇ, ಜೊತೆಗೆ ಹೋಮ್ ಲೋನ್ ಗೆ (Home Loan) ಇರುವ ಬಡ್ಡಿ ಕಟ್ಟುವುದು ಕೂಡ ಕಷ್ಟದ ವಿಚಾರವೇ. ಇಂಥ ಜನರಿಗೆ ಸಹಾಯ ಆಗಲಿ ಎಂದು ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಹೌದು, ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಅದು ಪಿಎಮ್ ಆವಾಸ್ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಮನೆ ಕಟ್ಟುವುದಕ್ಕೆ ಕಡಿಮೆ ಬಡ್ಡಿದರದಲ್ಲಿ ಸಬ್ಸಿಡಿ ಸಾಲವನ್ನು ಕೊಡಲಾಗುತ್ತದೆ.
ಈ ಯೋಜನೆಯ ಲಾಭವನ್ನು ಈಗಾಗಲೇ ಅನೇಕ ಜನರು ಪಡೆದಿದ್ದು, ಒಂದು ವೇಳೆ ನೀವು ಕೂಡ ಸ್ವಂತ ಮನೆ ಮಾಡಿಕೊಳ್ಳುವ ಕನಸು ಹೊಂದಿದ್ದರೆ, ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..
ಪಿಎಮ್ ಆವಾಸ್ ಯೋಜನೆಯ ಅರ್ಹತೆ
*ಅರ್ಜಿದಾರರು ಭಾರತದ ಪ್ರಜೆಯೇ ಆಗಿರಬೇಕು
*ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು
ದೇಶದಲ್ಲಿ ಶುರುವಾಯ್ತು ಮೋದಿ ಅಲೆ.!! ಈ ಯೋಜನೆಗೆ ಕರ್ನಾಟಕದಲ್ಲಿ 10 ಲಕ್ಷ ಜನ ಅರ್ಜಿ ಸಲ್ಲಿಕೆ
*ಅರ್ಜಿದಾರರ ಬಳಿ ಅದುವರೆಗೂ ಯಾವುದೇ ಸ್ವಂತ ಮನೆ ಇರಬಾರದು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಇನ್ಯಾವುದೇ ಯೋಜನೆಯಿಂದ ಮನೆ ಕಟ್ಟಲು ಅನುಕೂಲ ಪಡೆದುಕೊಂಡಿರಬಾರದು
*ಒಂದು ಸಾರಿ ಮಾತ್ರ ಈ ಯೋಜನೆಯಿಂದ ಸಾಲ ಪಡೆಯಲು ಸಾಧ್ಯ
*ಟ್ಯಾಕ್ಸ್ ಮತ್ತು GST ಕಟ್ಟುವವರಿಗೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ
*ಸಿಟಿ ಅಥವಾ ಹಳ್ಳಿಯಲ್ಲಿ ಅದಾಗಲೇ ಸ್ವಂತ ಮನೆ ಇರುವವರು ಅರ್ಜಿ ಸಲ್ಲಿಸುವ ಹಾಗಿಲ್ಲ
*ಅರ್ಜಿದಾರರು ಅಥವಾ ಅವರ ಮನೆಯವರು ಸರ್ಕಾರಿ ಕೆಲಸ ಹೊಂದಿದ್ದರೆ ಲೋನ್ ಸಿಗುವುದಿಲ್ಲ
*ಈ ಯೋಜನೆಯಲ್ಲಿ ನಿಮಗೆ ಎರಡೂವರೆ ಲಕ್ಷದ ವರೆಗು ಲೋನ್ ಸಿಗುತ್ತದೆ.
ವಸತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಒಂದು ವೇಳೆ ನೀವು ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಆಸಕ್ತಿ ಇದ್ದರೆ, https://pmaymis.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಸಿ. ನೀವು ನೀಡಿರುವ ಎಲ್ಲಾ ಮಾಹಿತಿ ಸರಿ ಇದ್ದರೆ, ನಿಮಗೆ 2.5 ಲಕ್ಷದವರೆಗೂ ಸಬ್ಸಿಡಿ ಲೋನ್ ಸಿಗುತ್ತದೆ.
ಇತರೆ ವಿಷಯಗಳು:
ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ! 400+ ಖಾಲಿ ಹುದ್ದೆ
ಕೆಎಸ್ಆರ್ಟಿಸಿ ಬಸ್ ಹೊಸ ನಿರ್ಧಾರ.!!! ಸರ್ಕಾರದಿಂದ ಬಂತು ಖಡಕ್ ವಾರ್ನಿಂಗ್