ಹಲೋ ಸ್ನೇಹಿತರೇ, ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನೋದು ಸದ್ಯದ ಮಟ್ಟಿಗೆ ಇಡೀ ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ವಾಹನಗಳಲ್ಲಿ ಹಾಕಿಸಿಕೊಳ್ಳಲೇ ಬೇಕಾಗಿರುವಂತಹ ಒಂದು ವಸ್ತು ಎಂದರೆ ಅದು ನಂಬರ್ ಪ್ಲೇಟ್. ಈಗಾಗಲೇ ಮೂರು ಬಾರಿ ಇದನ್ನು ಅಳವಡಿಸಿಕೊಳ್ಳುವುದಕ್ಕೆ ಸರ್ಕಾರ ಕೊನೆಯ ದಿನಾಂಕದ ಗಡುವನ್ನು ನೀಡಿತ್ತು ಅನ್ನೋದನ್ನ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.
ಅಷ್ಟೊಂದು ಬಾರಿ ರಾಜ್ಯದ ವಾಹನ ಚಾಲಕರಿಗೆ ಎಚ್ಚರಿಕೆಯನ್ನು ನೀಡಿದ ಅನಂತರವು ಸಾರಿಗೆ ಇಲಾಖೆ ಈಗ ಮೇ 31 ಎನ್ನುವಂತಹ ದಿನಾಂಕವನ್ನು ಕೊನೆಯ ಗಡುವು ಎಂದು ತಿಳಿಸಿದೆ. HSRP ನಂಬರ್ ಪ್ಲೇಟ್ ಅನ್ನು 2019ರ ಒಳಗೆ ಖರೀದಿ ಮಾಡಿರುವಂತಹ ಪ್ರತಿಯೊಂದು ವಾಹನದ ಮಾಲೀಕರು ಕೂಡ ರಿಜಿಸ್ಟ್ರೇಷನ್ ಮಾಡಿಸಿಕೊಂಡು ತಮ್ಮ ಶೋ ರೂಂ ಗೆ ಹೋಗಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಬರಬೇಕು ಎನ್ನುವುದಾಗಿ ಸಾರಿಗೆ ಇಲಾಖೆಯ ನಿಯಮಗಳು ಈಗಾಗಲೇ ಸ್ಪಷ್ಟಪಡಿಸಿವೆ.
ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿ HSRP ನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 2000 ವರೆಗೂ ಕೂಡ ಟ್ರಾಫಿಕ್ ಪೊಲೀಸರು ಫೈನ್ ವಿಧಿಸುವುದು ಗ್ಯಾರಂಟಿ ಎಂಬುದಾಗಿ ಮಾತು ಕೇಳಿ ಬರುತ್ತಿವೆ.
ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ: ಗ್ಯಾರಂಟಿ ಯೋಜನೆಗಳ ಹೊರತಾಗಿ 18000 ಕೋಟಿ ವೆಚ್ಚ
ಹೀಗಾಗಿ ಈ ದಂಡದಿಂದ ತಪ್ಪಿಸಿಕೊಳ್ಳಲು ನೀವು HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ. ಯಾಕೆಂದ್ರೆ ಜೂನ್ ಒಂದರ ನಂತರ ಕೂಡ ನಿಮ್ಮ ನಂಬರ್ ಪ್ಲೇಟ್ ಬಾರದೆ ಇದ್ರೆ ನೀವು ರಿಜಿಸ್ಟ್ರೇಷನ್ ಮಾಡಿಸಿಕೊಂಡರೂ ಕೂಡ ದಂಡದಿಂದ ಬಚಾವ್ ಆಗುವ ಸಾಧ್ಯತೆ ಇದೆ. ಹಾಗಿದ್ರೆ ಅದು ಹೇಗೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
HSRP ನಂಬರ್ ಪ್ಲೇಟ್ ಇಲ್ಲದೇ ಇದ್ರೂ ಇದರಿಂದ ನೀವು ಬಚಾವಾಗಬಹುದು!
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅನ್ನು ಮೇ 31ರ ಒಳಗೆ ಪ್ರತಿಯೊಬ್ಬರೂ ಕೂಡ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ನಿಯಮವಾಗಿದೆ. ಇಲ್ಲವಾದಲ್ಲಿ ದಂಡ ಕಟ್ಟೋದಕ್ಕೆ ಸಿದ್ದರಾಗಬೇಕಾಗಿದೆ. ಆದರೆ ಒಂದು ವೇಳೆ ನೀವು ಕೇವಲ ನಂಬರ್ ಪ್ಲೇಟ್ ಗಾಗಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ಟ್ರಾಫಿಕ್ ಪೊಲೀಸ್ ರಿಗೆ ತೋರಿಸಿದ್ರು ಕೂಡ ನೀವು ಈ ದಂಡದಿಂದ ಬಚಾವ್ ಆಗಬಹುದಾಗಿದೆ. ಹೀಗಾಗಿಯೇ ನಂಬರ್ ಪ್ಲೇಟ್ ನ್ನು ಅಳವಡಿಸಿಕೊಳ್ಳದೆ ಹೋದರೂ ಕೂಡ HSRP ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ರಸೀದಿಯನ್ನು ತೋರಿಸಿದರೂ ನಿಮಗೆ ರಿಯಾಯಿತಿಯು ದೊರಕಲಿದೆ ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಕನಿಷ್ಟ ಪಕ್ಷ ರಿಜಿಸ್ಟ್ರೇಷನ್ ಆದರು ಪ್ರತಿಯೊಬ್ಬರು ಮಾಡಿಸಿಕೊಳ್ಳಲೇ ಬೇಕಾಗಿದೆ.
ಇತರೆ ವಿಷಯಗಳು:
ಆಧಾರ್ ಬಳಕೆದಾರರೇ ಹುಷಾರ್.!! ಈ ದಾಖಲೆ ತಪ್ಪಾಗಿದ್ರೆ ಬೀಳುತ್ತೆ ಭಾರೀ ದಂಡ