ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತುಂಬಾ ದಿನಗಳ ಬೇಡಿಕೆಯಾದ 7ನೇ ವೇತನ ಆಯೋಗ ಕೆಲವೇ ದಿನಗಳಲ್ಲಿ ಜಾರಿ ಆಗಲಿದ್ದು, ಜಾರಿ ಆದ ಬಳಿಕ ಯಾವ ನೌಕರರ ಮೂಲವೇತನ ಎಷ್ಟೆಷ್ಟು ಹೆಚ್ಚಾಗಲಿದೆ ಎಂಬ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.
ರಾಜ್ಯ ಸರ್ಕಾರಿ ನೌಕರರ ಅನೇಕ ದಿನಗಳ ಬಹು ದಿನಗಳ ಬೇಡಿಕೆಯಾದ 7ನೇ ವೇತನ ಆಯೋಗದ ವರದಿ ಸರ್ಕಾರದ ಕೈ ಸೇರಿದ್ದು, ಈ ವರದಿಯ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 7ನೇ ವೇತನ ಆಯೋಗದ ವರದಿಯಲ್ಲಿ ಯಾವೆಲ್ಲ ಬದಲಾವಣೆಗಳಿವೆ? ನೌಕರರ ಮೂಲ ವೇತನ ಎಷ್ಟು ಹೆಚ್ಚಾಗಲಿದೆ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.
ನೌಕರರ ಮೂಲವೇತನ ಎಷ್ಟು ಹೆಚ್ಚಾಗಲಿದೆ?
ನೀತಿ ಸಂಹಿತೆ ಜಾರಿಯಾಗುವ ಮೊದಲೇ ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ನೇತೃತ್ವದ ಆಯೋಗವು ವರದಿ ಸಲ್ಲಿಸಿದ್ದು, ಸರ್ಕಾರಿ ನೌಕರರ ಮೂಲವೇತನದಲ್ಲಿ 27.5% ಹೆಚ್ಚಳವಾಗಲಿದೆ ಎಂದು ಘೋಷಿಸಿದೆ. ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರಿಂದ 27,000 ರೂಪಾಯಿ ವರೆಗೆ ಏರಿಕೆಯಾಗಲಿದ್ದು ನೌಕರರ ಸಂತೋಷ ಮೂಡಿಸಿದೆ.
ಪೋಸ್ಟ್ ಆಫೀಸ್ ಈ ಯೋಜನೆಯಿಂದ ದುಪ್ಪಟ್ಟು ಹಣ ನಿಮ್ಮ ಖಾತೆಗೆ!
7ನೇ ವೇತನ ಆಯೋಗದ ವರದಿಯ ಪ್ರಕಾರ ಸರ್ಕಾರಿ ನೌಕರರ ಹಳೆಯ ಮೂಲ ವೇತನ ₹20,900 ಇದ್ದರೆ, ಹೊಸ ವರದಿಯ ಪ್ರಕಾರ ₹33,300 ಕ್ಕೆ ಏರಿಕೆಯಾಗಲಿದೆ. ಅದೇ ಮೂಲ ವೇತನ ₹40,900 ಇದ್ದರೆ ಹೊಸ ವರದಿ ಪ್ರಕಾರ ₹65,950 ಕ್ಕೆ ಏರಿಕೆಯಾಗಲಿದೆ. ನೌಕರರ ಮೂಲ ವೇತನ ₹50,150 ಇದ್ದರೆ ಅದು ಹೊಸ ವೇತನ ಆಯೋಗದ ವರದಿಯ ಪ್ರಕಾರ ₹79,900ಕ್ಕೆ ರೂಪಾಯಿ ಏರಿಕೆಯಾಗಲಿದೆ. ಹಿರಿಯ ನೌಕರರ ಮೂಲವೇತನ ₹1,04,600 ಇದ್ದರೆ ಅದು ಹೊಸ ವೇತನದ ವರದಿ ಪ್ರಕಾರ ₹1,67,200 ಆಗಲಿದೆ. ಮೂಲವೇತನ ಏರಿಕೆ ಆಗುವುದರ ಜೊತೆಗೆ ಡಿಎ, ಐಆರ್ (IR – Interim Relief) ಸೇರಿ ನೌಕರರ ವೇತನ ಮತ್ತಷ್ಟು ಏರಿಕೆಯಾಗಲಿದೆ.
ನೌಕರರ ಮೂಲ ವೇತನದ ಜೊತೆಗೆ ಏನೆಲ್ಲಾ ಬದಲಾವಣೆ ಆಗಲಿವೆ?
7ನೇ ವೇತನ ಆಯೋಗ ವರದಿಯಲ್ಲಿ ಮಹಿಳಾ ನೌಕರರು ಮತ್ತು ಪಿಂಚಣಿದಾರರ ನಿಯಮದಲ್ಲಿ ಬದಲಾವಣೆಗೆ ಶಿಫಾರಸು ಮಾಡಲಾಗಿದ್ದು, ಮಹಿಳಾ ಸರ್ಕಾರಿ ನೌಕರರು ಕುಟುಂಬ ಪಿಂಚಣಿಯ ನಾಮನಿರ್ದೇಶನದಲ್ಲಿ ಪತಿಯ ಬದಲು ತಮ್ಮ ಮಕ್ಕಳ ನಾಮ ನಿರ್ದೇಶನ ಮಾಡಬಹುದೆಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ 70 ರಿಂದ 80 ವರ್ಷದ ವಯಸ್ಸಿನ ಹಿರಿಯ ಪಿಂಚಣಿದಾರರ ಮೂಲ ಪಿಂಚಣಿ ಮೊತ್ತವು 10% ಏರಿಕೆಯಾಗಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಇತರೆ ವಿಷಯಗಳು:
ಆಯುಷ್ಮಾನ್ ಕಾರ್ಡ್ ಮಾಡಿಸಿದವರಿಗೆ ಹೊಸ ಸೂಚನೆ!
ಕೃಷಿ ಭಾಗ್ಯ ಯೋಜನೆ: ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ