ಹಲೋ ಸ್ನೇಹಿತರೇ, ಕೇಂದ್ರ ಸರಕಾರದ ಎರಡನೇ ಸಂಪುಟ ಸಭೆಯಲ್ಲಿ ರೈತರಿಗೆ ಭರ್ಜರಿ ಶುಭ ಸುದ್ದಿ ನೀಡಲಾಗಿದ್ದು ಭತ್ತ, ರಾಗಿ, ಮೆಕ್ಕೆಜೋಳ ಸೇರಿದಂತೆ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಮೊದಲ ಸಂಪುಟ ಸಭೆಯಲ್ಲಿ 17ನೇ ಕಂತಿನ ಪಿಎಂ ಕಿಸಾನ್ ಅರ್ಥಿಕ ನೆರವನ್ನು ರೈತರಿಗೆ ವರ್ಗಾವಣೆ ಮಾಡಲು ಅನುಮೋದನೆ ನೀಡಲಾಗಿತ್ತು, ಈಗ ಎರಡನೇ ಸಂಪುಟ ಸಭೆಯಲ್ಲಿ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗಳನ್ನು ಏರಿಕೆ ಮಾಡಲಾಗಿದೆ.
ಬೆಳೆಗಾರರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 2024-25ರ ಮಾರುಕಟ್ಟೆ ಮುಂಗಾರು ಹಂಗಾಮಿಗಾಗಿ ಬೆಳೆಗಳ ಬೆಂಬಲ ಬೆಲೆಯನ್ನು ಏರಿಕೆ ಮಾಡಿದೆ. ಹಿಂದಿನ ವರ್ಷಕ್ಕಿಂತ ಬೆಂಬಲ ಬೆಲೆಯಲ್ಲಿ ಅಧಿಕ ಸಂಪೂರ್ಣ ಹೆಚ್ಚಳವನ್ನು ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಿಗೆ ಶಿಫಾರಸು ಮಾಡಲಾಗಿದೆ. ಉದಾ: ಹುಚ್ಚೆಳ್ಳು (ಕ್ವಿಂಟಲ್‌ಗೆ ರೂ.983/-̧) ಎಳ್ಳು (ಕ್ವಿಂಟಲ್‌ಗೆ ರೂ.632/-) ಮತ್ತು ತೊಗರಿ/ಅರ್ಹರ್ (ಕ್ವಿಂಟಲ್‌ಗೆ ರೂ.550/-).
MSP price list-2024: ಯಾವ ಬೆಳೆಗೆ ಎಷ್ಟು ಹೆಚ್ಚಳ ಮಾಡಲಾಗಿದೆ?
ಬೆಳೆ | 2024-25 ಎಂಎಸ್‌ಪಿ | 2023-24ಕ್ಕೆ ಹೋಲಿಸಿದರೆ ಏರಿಕೆ |
ಭತ್ತ ಸಾಮಾನ್ಯ | 2300 | 117 |
ಭತ್ತ ಗ್ರೇಡ್ ಎ | 2320 | 117 |
ಜೋಳ ಹೈಬ್ರಿಡ್ | 3371 | 191 |
ಜೋಳ ಮಲ್ದಂಡಿ | 3421 | 196 |
ಸಜ್ಜೆ (ಬಜ್ರಾ-ಸಿರಿಧಾನ್ಯ) | 2625 | 125 |
ರಾಗಿ | 4290 | 444 |
ಮೆಕ್ಕೆಜೋಳ | 2225 | 135 |
ತೊಗರಿ | 7550 | 550 |
ಹೆಸರು | 8682 | 124 |
ಉದ್ದು | 7400 | 450 |
ಶೇಂಗಾ | 6783 | 406 |
ಸೂರ್ಯಕಾಂತಿ | 7280 | 520 |
ಸೋಯಾಬೀನ್ | 4892 | 292 |
ಎಳ್ಳು | 9267 | 632 |
ಹುಚ್ಚೆಳ್ಳು | 8717 | 983 |
ಹತ್ತಿ – ಮಧ್ಯಮ ಗಾತ್ರ | 7121 | 501 |
ಹತ್ತಿ – ಉದ್ದ ಗಾತ್ರ | 7521 | 501 |
ಬ್ಯಾಂಕ್ ಗ್ರಾಹಕರಿಗೆ ಎದುರಾಯ್ತು ಸಂಕಷ್ಟ! ಜೂನ್ 30ರ ನಂತರ ಹೊಸ ಸವಾಲ್
2024-25 ರ ಮಾರುಕಟ್ಟೆ ಹಂಗಾಮುಗಾಗಿ ಮುಂಗಾರು ಬೆಳೆಗಳಿಗೆ ಎಂ ಎಸ್ ಪಿ ಯಲ್ಲಿನ ಹೆಚ್ಚಳವು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂ ಎಸ್ ಪಿ ಯನ್ನು ನಿಗದಿಪಡಿಸುವ ಕೇಂದ್ರ ಬಜೆಟ್ 2018-19 ರ ಘೋಷಣೆಗೆ ಅನುಗುಣವಾಗಿದೆ, ನಿರೀಕ್ಷಿತ ಲಾಭವು ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಅತ್ಯಧಿಕವಾಗಿರುತ್ತದೆ. ಉದಾ: ಸಜ್ಜೆ (77%), ತೊಗರಿ (59%), ಮೆಕ್ಕೆಜೋಳ (54%) ಮತ್ತು ಉದ್ದಿನಕಾಳು (52%) ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ಅವುಗಳ ಉತ್ಪಾದನಾ ವೆಚ್ಚದ ಮೇಲೆ ರೈತರಿಗೆ ಲಾಭವು ಶೇ.50 ರಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಶ್ರೀ ಅನ್ನದಂತಹ ಧಾನ್ಯಗಳನ್ನು ಹೊರತುಪಡಿಸಿ, ಈ ಬೆಳೆಗಳಿಗೆ ಹೆಚ್ಚಿನ ಎಂ ಎಸ್ ಪಿ ಯನ್ನು ನೀಡುವ ಮೂಲಕ ಸರ್ಕಾರವು ಇತರ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ.
ದೇಶದ ಒಟ್ಟು ಉತ್ಪನ್ನಗಳ ಉತ್ಪಾದನೆ ವಿವರ ಹೀಗಿದೆ:
2023-24 ರ ಉತ್ಪಾದನೆಯ 3 ನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯ ಉತ್ಪಾದನೆಯು 3288.6 ಲಕ್ಷ ಮೆಟ್ರಿಕ್ ಟನ್ (LMT) ಎಂದು ಅಂದಾಜಿಸಲಾಗಿದೆ ಮತ್ತು ಎಣ್ಣೆಕಾಳುಗಳ ಉತ್ಪಾದನೆಯು 395.9 ಲಕ್ಷ ಮೆಟ್ರಿಕ್ ಟನ್ ಅನ್ನು ಮುಟ್ಟುತ್ತಿದೆ. 2023-24ರಲ್ಲಿ, ಅಕ್ಕಿ, ಬೇಳೆಕಾಳುಗಳು, ಎಣ್ಣೆಕಾಳುಗಳು ಮತ್ತು ಪೌಷ್ಠಿಕ ಧಾನ್ಯಗಳು/ಶ್ರೀ ಅನ್ನ ಮತ್ತು ಹತ್ತಿಯ ಮುಂಗಾರು ಹಂಗಾಮಿನ ಉತ್ಪಾದನೆಯು ಕ್ರಮವಾಗಿ 1143.7 ಲಕ್ಷ ಮೆಟ್ರಿಕ್ ಟನ್, 68.6 ಲಕ್ಷ ಮೆಟ್ರಿಕ್ ಟನ್, 241.2 ಲಕ್ಷ ಮೆಟ್ರಿಕ್ ಟನ್, 130.3 ಲಕ್ಷ ಮೆಟ್ರಿಕ್ ಟನ್ ಮತ್ತು 325.2 ಲಕ್ಷ ಟನ್ ಗಳು ಎಂದು ಅಂದಾಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇತರೆ ವಿಷಯಗಳು:
150 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ BBMP : ಆರಂಭದಲ್ಲೇ ವೇತನ 20+ಸಿಗಲಿದೆ
ಸರ್ಕಾರದ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿದರೆ ನಿಮ್ಮ ಜೀವನ ಸುಖಮಯ!