ಹಲೋ ಸ್ನೇಹಿತರೇ, ಸಾಮಾಜಿಕ ಮಾಧ್ಯಮದಲ್ಲಿ ಸಧ್ಯದ ಮಟ್ಟಿಗೆ ಅತ್ಯಂತ ಜನಪ್ರಿಯ ವೇದಿಕೆ. ಆದಾಗ್ಯೂ, ಅನೇಕ ಜನರು ಈ ವೇದಿಕೆಯನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಅಂತಹ ಒಂದು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಓಡಾಡಲಾಗುತ್ತಿದೆ. ಹಣಕಾಸು ಸಚಿವಾಲಯವು ಹೊಸದಾದ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಇದರಲ್ಲಿ ಬರೆಯಲಾಗಿದ್ದು, ಇದರಲ್ಲಿ ಭಾರತದ ನಾಗರಿಕರಿಗೆ 46,715 ರೂಪಾಯಿಯನ್ನು ನೀಡಲಾಗುತ್ತೆ ಎಂದು ತಿಳಿಸಿದ್ದಾರೆ. ನೀವು ಕೂಡ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ವೈರಲ್ ಸುದ್ದಿ: ಸಧ್ಯ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಈ ಸುದ್ದಿಯನ್ನ ಸಂಪೂರ್ಣವಾಗಿ ಸುಳ್ಳು ಎಂದು ಕರೆದಿದೆ. ಅಂತಹ ಯಾವುದೇ ಯೋಜನೆಯನ್ನು ಭಾರತ ಸರ್ಕಾರ ನಡೆಸುತ್ತಿಲ್ಲ ಎಂದು ತನ್ನ ಹೇಳಿಕೆಯನ್ನು ಈಗಾಗಲೇ ನೀಡಿದ್ದಾರೆ. ಇಂತಹ ಹೇಳಿಕೆಗಳ ಬಗ್ಗೆ ಜನರು ಜಾಗರೂಕರಾಗಿರಬೇಕು.
ಹಣಕಾಸು ಸಚಿವಾಲಯವು ಬಡವರಿಗೆ 46,715 ರೂ.ಗಳ ಆರ್ಥಿಕವಾದ ನೆರವು ನೀಡುತ್ತಿದೆ ಎಂಬ ಸಂದೇಶವನ್ನು ವಾಟ್ಸಾಪ್ ಮೂಲಕವಾಗಿ ಹರಡಲಾಗುತ್ತಿದೆ ಎಂದು ಪಿಐಬಿ ಫ್ಯಾಕ್ಟ್ ಚೆಕ್’ನಲ್ಲಿ ಮಾಹಿತಿ ನೀಡಿದೆ. ಈ ಯೋಜನೆಯ ಲಾಭ ಪಡೆಯಲು, ಜನರನ್ನು ಅವರ ವೈಯಕ್ತಿಕ ಮಾಹಿತಿಯನ್ನ ಕೇಳಲಾಗುತ್ತಿತ್ತು. ಪಿಐಬಿ ಪ್ರಕಾರ, ಇದು ನಕಲಿಯಾಗಿದೆ. ಹಣಕಾಸು ಸಚಿವಾಲಯವು ಅಂತಹ ಯಾವುದೇ ಯೋಜನೆಯನ್ನು ನಡೆಸುತ್ತಿಲ್ಲ. ಈ ಸಂದೇಶವನ್ನ ವಂಚಕರು ಹರಡುತ್ತಿದ್ದಾರೆ. ನಿಮ್ಮ ವೈಯಕ್ತಿಕವಾದ ಮಾಹಿತಿಯನ್ನು ಸಂಗ್ರಹ ಮಾಡುವುದರ ಮೂಲಕ ಅವರು ನಿಮಗೆ ಹಾನಿಯನ್ನು ಮಾಡಬಹುದು.
ಭಾರತದಲ್ಲಿ ಬ್ಯಾನ್ ಆದ ಟೆಲಿಗ್ರಾಂ.!! ನೆಕ್ಸ್ಟ್ ಯಾವ ಆ್ಯಪ್ ಗೊತ್ತಾ??
ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೆ ತರಹದ ಹಲವಾರು ನಕಲಿ ಸುದ್ದಿಗಳನ್ನು ಹರಿಡಲಾಗುತ್ತೆ. ಈ ರೀತಿಯ ನಕಲಿ ಯೋಜನೆಗಳ ಸಂದೇಶಗಳನ್ನು ಕಳುಹಿಸುವ ಮೂಲಕ ಅಥವಾ ಸೈಬರ್ ಅಪರಾಧಿಗಳು ಮೋಸಹೋಗುವ ಜನರನ್ನು ತಮ್ಮಯ ಬಲೆಗೆ ಬೀಳಿಸುತ್ತಾರೆ.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಬ್ಯಾಂಕ್ ಖಾತೆಯಂತಹ ವೈಯಕ್ತಿಕ ಮಾಹಿತಿಯನ್ನ ಒದಗಿಸುವಂತೆ ಕೇಳಲಾಗುತ್ತದೆ. ಒಮ್ಮೆ ಅಂತಹ ಪ್ರಮುಖ ಮಾಹಿತಿಯು ಈ ಆನ್ಲೈನ್ ವಂಚಕರ ಕೈಯಲ್ಲಿದ್ದರೆ, ಅವರು ಯಾವುದೇ ಸಮಯದಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಇಂತಹ ಅನೇಕ ಪ್ರಕರಣಗಳು ಈಗಾಗಲೇ ದೇಶದಲ್ಲಿ ನಡೆದಿವೆ. ಹಾಗಾಗಿ ಅಂತಹ ಯಾವುದೇ ಪ್ರಚೋದನಕಾರಿ ಯೋಜನೆಯ ಬಗ್ಗೆ ಮೊದಲು ಸಮಗ್ರ ತನಿಖೆ ನಡೆಸಿ.
ಇತರೆ ವಿಷಯಗಳು:
ಹೆಣ್ಣು ಮಕ್ಕಳಿಗೆ ಶಾಕಿಂಗ್ ನ್ಯೂಸ್.!! ಈ ಯೋಜನೆಯ ನಿಯಮಗಳು ಇನ್ಮುಂದೆ ಚೇಂಜ್
MGNREGA ಕಾರ್ಡ್ ಇದ್ದರೆ ಸಿಗುತ್ತೆ ಬರೋಬ್ಬರಿ ₹1,60,000..!