ಹಲೋ ಸ್ನೇಹಿತರೆ, ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಸಾರಿಗೆ ನಿಗಮಗಳ ನಿವೃತ್ತ ನೌಕರರ ವೇತನ ಹೆಚ್ಚಳ ಮಾಡುವಂತೆ ಆದೇಶ ಹೊರಡಿಸಲಾಗಿದೆ. 2023ರ ಮಾರ್ಚ್ ನಲ್ಲಿ ನಿವೃತ್ತಿಯಾದ ನೌಕರರಿಗೆ ಶೇ.15ರಷ್ಟು ಹೆಚ್ಚುವರಿ ವೇತನ ಸಿಗಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
2023ರ ಮಾರ್ಚ್ ನಲ್ಲಿ ನಿವೃತ್ತಿಯಾಗಿರುವ ಅಧಿಕಾರಿಗಳು ಮತ್ತು ನೌಕರರಿಗೆ 2019ರ ಡಿಸೆಂಬರ್ 31ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಪರಿಗಣಿಸಿ ಶೇ.15ರಷ್ಟು ಹೆಚ್ಚಿಸಿ ವೇತನ ಶ್ರೇಣಿ ಪರಿಷ್ಕರಿಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ 4 ನಾಲ್ಕು ಸಾರಿಗೆ ನಿಗಮಗಳಿಗೆ ಸುಮಾರು 220 ಕೋಟಿ ರೂ ಹಣ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ: ತಿಂಗಳಾಂತ್ಯಕ್ಕೆ ಕ್ಯಾನ್ಸಲ್ ಆಗುತ್ತೆ ಇಂತವರ ರೇಷನ್ ಕಾರ್ಡ್!
ಸರ್ಕಾರದ ಆದೇಶದ ಸಂಖ್ಯೆ ಟಿ.ಡಿ 12 ಟಿಸಿಬಿ 2023 ರ ಅನುಸಾರ ಬೆಂಗಳೂರು ದಿನಾಂಕ 17.03.2023 ರಲ್ಲಿ ಅಧಿಕಾರಿ ಮತ್ತು ನೌಕರರು ದಿನಾಂಕ 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15 ರಷ್ಟು ಏರಿಕೆ ಮಾಡಿ ಅದರಂತೆಯೇ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ, ದಿನಾಂಕ 01.03.2023 ರಿಂದ ಜಾರಿಗೊಳಿಸಲು ಆದೇಶಿಸಲಾಗಿದೆ, ದಿನಾಂಕ 01.03.2023 ರಂದು ಸಂಸ್ಥೆಯ ಸೇವೆಯಲ್ಲಿದ್ದ (On Roll) ಅಧಿಕಾರಿ/ನೌಕರರಿಗೆ ದಿನಾಂಕ 01.01.2020 ರಿಂದ ದಿನಾಂಕ 28.02.2023 ರ ವರೆಗಿನ ಅವಧಿಯನ್ನು ನೋಷನಲ್ ಆಗಿ ಪರಿಗಣಿಸಿ ವೇತನ ನಿಗದಿಪಡಿಸಲು ಹೇಳಿದೆ, ದಿನಾಂಕ 01.03.2023 ರಿಂದ ಜಾರಿಗೊಳಿಸಿ, ಏಪ್ರಿಲ್-2023 ರ ತಿಂಗಳಿನಿಂದ ಮತ್ತು ಮುಂದಿನ ವೇತನದಲ್ಲಿ ಅನುಷ್ಠಾನಗೊಳಿಸಲು ಹಾಗೂ ಮಾರ್ಚ್-2023 ರ ತಿಂಗಳಿನ ವ್ಯತ್ಯಾಸವನ್ನು ಏಪ್ರಿಲ್-2023 ರ ತಿಂಗಳಿನ ವೇತನದೊಂದಿಗೆ ಸೇರಿಸಿ ಪಾವತಿಸಲು ಸುತ್ತೋಲೆ ಸಂಖ್ಯೆ 16/2023 ದಿನಾಂಕ 28.03.2023 ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು.
ಇತರೆ ವಿಷಯಗಳು:
ಇಳಿಕೆಯಾಗುತ್ತಿದೆ ಚಿನ್ನ! ಎಲ್ಲಿಗೆ ಹೋಗಿ ಮುಟ್ಟುತ್ತೆ ಚಿನ್ನದ ಬೆಲೆ ಗೊತ್ತಾ?
BPL ಕಾರ್ಡ್ ಇರುವ ಕುಟುಂಬಕ್ಕೆ ಉಚಿತ ಮನೆ ನೋಂದಣಿ ಪ್ರಾರಂಭ!