ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರವು ರಾಜ್ಯದ ವಿಧ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಶಿಕ್ಷಣಕ್ಕಾಗಿ ಸಹಾಯಧನ ನೀಡುವುದರ ಮೂಲಕ ಪ್ರೋತ್ಸಾಹ ನೀಡುತ್ತಿದೆ. ರಾಜ್ಯಾ ಸರ್ಕಾರ ಹಲವಾರು ಯೋಜನೆಗಳನ್ನು ವಿದ್ಯಾರ್ಥಿಗಳ ನೆರವಿಗೆ ಜಾರಿ ಮಾಡುತ್ತಿದ್ದು ಅದರಲ್ಲಿ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಯೋಜನೆ ಸಹಾ ಒಂದಾಗಿದೆ. ಆಸಕ್ತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭ ಹೇಗೆ ಪಡೆಯುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕಲಿಕಾ ಭಾಗ್ಯ ವಿದ್ಯಾರ್ಥಿವೇತನ ಯೋಜನೆ
ರಾಜ್ಯ ಸರ್ಕಾರ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲಿಕಾ ಭಾಗ್ಯ ಯೋಜನೆಯ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅವರ ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲು ಹಣದ ನೆರವು ಸಿಗುತ್ತದೆ.
ನೀವು ಕಲಿಕಾ ಭಾಗ್ಯ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕಾದರೆ ಮೊದಲು ನೀವು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬದ ಸದಸ್ಯರಾಗಿರಬೇಕಾಗುತ್ತದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬದ ಸದಸ್ಯರು ಮಾತ್ರ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ: ಈ ಲಿಂಕ್ ಮಾಡಿಸದಿದ್ರೆ ಜೂ. 1 ರಿಂದ ‘LPG’ ಗ್ಯಾಸ್ ಸಂಪರ್ಕ ರದ್ದು
ಸರ್ಕಾರದ ಕರ್ನಾಟಕ ಲೇಬರ್ ಕಾರ್ಡ್ ಯೋಜನೆ 2024 ರ ಲಾಭ ಪಡೆಯಲು ಅರ್ಹ ವಿದ್ಯಾರ್ಥಿಗಳು SSP ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿದ ನಂತರ ನೀವು ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಅರ್ಜಿ ಪ್ರಕ್ರಿಯೆಯನ್ನು ಮುಗಿಸಿದ ನಂತರ ನಿಮಗೆ ವಿದ್ಯಾರ್ಥಿವೇತನವು ಕೆಲವೇ ದಿನಗಳಲ್ಲಿ ಖಾತೆಗೆ ಬಂದು ತಲಪುತ್ತದೆ.
ಅರ್ಜಿ ಸಲ್ಲಿಕೆಗೆ ಈ ಕೆಳಗೆ ನೀಡಿರುವ ಎಲ್ಲ ದಾಖಲೆಗಳು ನಿಮ್ಮ ಹತ್ತಿರ ಅಗತ್ಯವಾಗಿ ಬೇಕಾಗುತ್ತದೆ. ಇಲ್ಲವಾದಲ್ಲಿ ನೀವು ಸಲ್ಲಿಸಿದ ಅರ್ಜಿ ನಿಷ್ಕ್ರಿಯಗೊಳಿಸಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಶಾಲೆಯ ಅಥವಾ ಕಾಲೇಜಿನಿಂದ ಪಡೆದಿರುವ ನೋಂದಣಿ ಪತ್ರ
- ವ್ಯಾಸಾಂಗ ಪ್ರಮಾಣ ಪತ್ರ
- ಉದ್ಯೋಗ ದೃಡೀಕರಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಅರ್ಜಿದಾರನ ಆಧಾರ್ ಕಾರ್ಡ್
- ಲೇಬರ್ ಕಾರ್ಡ್ ನೋಂದಣಿದಾರರ ಆಧಾರ್ ಕಾರ್ಡ್
- ಲೇಬರ್ ಕಾರ್ಡ್
ವಿಧ್ಯಾರ್ಥಿಗಳು ನಿಗದಿತ ದಿನಾಂಕವಾದ 31-05-2024 ರ ಒಳಗಡೆ ಅರ್ಜಿ ಸಲ್ಲಿಕೆಯನ್ನು ಮಾಡಬೇಕಾಗುತ್ತದೆ.
ಇತರೆ ವಿಷಯಗಳು:
ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್! ಗೃಹಲಕ್ಷ್ಮೀ ಹಣ ಬಾರದಿದ್ರೇ ಹೀಗೆ ಮಾಡಲು ಸೂಚನೆ
ಒಂದೇ ಮೊಬೈಲ್ ಸಂಖ್ಯೆಗೆ ಎಷ್ಟು ಆಧಾರ್ ಲಿಂಕ್ ಮಾಡಬಹುದು ಇಲ್ಲಿದೆ ಹೊಸ ಅಪ್ಡೇಟ್!