ಹಲೋ ಸ್ನೇಹಿತರೇ, ಇಂದು ಬಡವರ್ಗದ ಜನತೆಗಾಗಿ ಸರ್ಕಾರ ಹಲವು ರೀತಿಯ ಯೋಜನೆಯನ್ನು ರೂಪಿಸುತ್ತಿದೆ. ಹೌದು ರೈತರಿಗಾಗಿಯೇ ಮಹಿಳೆಯರಿಗಾಗಿಯೇ ಅದೇ ರೀತಿಯ ಕಾರ್ಮಿಕರಿಗಾಗಿ ಹಲವು ಯೋಜನೆಯನ್ನು ರೂಪಿಸುತ್ತಿದೆ. ಸರ್ಕಾರವು ದೇಶದ ಅನೇಕ ಶ್ರಮಿಕ ವರ್ಗಕ್ಕೆ ಸೌಲಭ್ಯಗಳನ್ನು ಒದಗಿಸಲೆಂದು ಇದಕ್ಕಾಗಿಯೇ ಕಾರ್ಮಿಕ ಕಾರ್ಡ್ ಅನ್ನು ಜಾರಿಗೊಳಿಸಿದೆ. ಇದರಿಂದ ಹಲವು ರೀತಿಯ ಸರ್ಕಾರದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ನೊಂದಣಿ ಮಾಡಿರಬೇಕು
ಕಟ್ಟಡ ಕಾರ್ಮಿಕರು ಆಗಿದ್ದಲ್ಲಿ ನೋಂದಾವಣೆ ಮಾಡಿದ ಕಾರ್ಮಿಕರಿಗೆ ಸರ್ಕಾರದಿಂದ ಹಲವು ರೀತಿಯ ಸೌಲಭ್ಯಗಳನ್ನು ಕೂಡ ನೀಡಲಾಗುತ್ತಿದೆ. ಇದರಲ್ಲಿಯೇ ಅನೇಕ ಸಾಲ ಸೌಲಭ್ಯದಿಂದ ಹಿಡಿದು ನಿಮ್ಮ ಮಕ್ಕಳ ಶೈಕ್ಷಣಿಕ ವೆಚ್ಚ ಮತ್ತು ಆರೋಗ್ಯ ಸೌಲಭ್ಯ, ಪಿಂಚಣಿವರೆಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಆದ್ರೆ ಇದರ ಪ್ರಯೋಜನ ಪಡೆದುಕೊಳ್ಳಲು ಇಂದು ಸುಳ್ಳು ದಾಖಲೆ ನೀಡಿ ಕಾರ್ಡ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಕ್ರಮ ಕಾರ್ಡ್
ಆರ್ಥಿಕವಾಗಿ ಸಧೃಡ ವಾಗಿ ಇದ್ದರೂ ಅಸಂಘಟಿತ ಕಾರ್ಮಿಕರಲ್ಲದವರೂ ಕೂಡ ಕಾರ್ಮಿಕ ಕಾರ್ಡ್ ಪಡೆದು ಸರಕಾರದ ಸೌಲಭ್ಯ ಗಳನ್ನು ಪಡೆದು ಕೊಳ್ಳುತ್ತಿದ್ದಾರೆ.ಇದರಿಂದ ಅರ್ಹರಿಗೆ ಸಿಗಬೇಕಾದ ಸೌಲಭ್ಯ ಗಳು ಸಿಗ್ತಾ ಇಲ್ಲ. ಅಕ್ರಮವಾಗಿ ಕಾರ್ಡ್ ಅನ್ನು ಮಾಡಿಸಿ ಸೌಲಭ್ಯವನ್ನು ಪಡೆದುಕೊಳ್ಳುವ ಮಾಹಿತಿಯನ್ನು ಬೆಳಕಿಗೆ ಬಂದಿದೆ. ಇದೀಗ ಅನರ್ಹರ ಕಾರ್ಡ್ ಪತ್ತೆಗಾಗಿ ಸರ್ಕಾರ ಅಭಿಯಾನವನ್ನು ಆರಂಭ ಮಾಡಿದೆ. ಅರ್ಜಿ ಸಲ್ಲಿಸಿದ ಫಲಾನುಭವಿಗಳಲ್ಲಿ ಅನೇಕ ಬೋಗಸ್ ಕಾರ್ಡ್‌ಗಳು ಇರುವುದು ಪತ್ತೆಯಾಗಿದ್ದು ಈಗಾಗಲೇ ಹಲವು ಕಾರ್ಮಿಕರ ಬೋಗಸ್ ಕಾರ್ಡ್ ರದ್ದಾಗಿವೆ.
ರಾಜ್ಯದಾದ್ಯಂತ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಈ ಬಗ್ಗೆ ಎಚ್ಚರಿಕೆ
ಈಗಾಗಲೇ ಕಾರ್ಮಿಕರಲ್ಲದೆ ಇದ್ದವರು ಕೂಡ ಈ ಕಾರ್ಡ್‌ಗಳನ್ನು ಹೊಂದಿದ್ದರೆ ಈ ಬಗ್ಗೆ ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ. ಬೋಗಸ್ ಕಾರ್ಡ್ ಅನ್ನು ಮಾಡಿಸಿ ಕೊಂಡವರು ಸ್ವ ಇಚ್ಛೆಯಿಂದ ಗುರುತಿನ ಚೀಟಿಯನ್ನು ಹಿಂದಿರುಗಿಸಿದರೆ ಒಪ್ಪಿಗೆ ಪತ್ರ ಪಡೆದು ಕಾನೂನು ಕ್ರಮ ಕೈಬಿಡಲಾಗುತ್ತದೆ. ಪರಿಶೀಲನೆಯ ವೇಳೆ ಗೊತ್ತದ್ದಲಿ ಕಾನೂನು ಕ್ರಮವನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ತಂಡ ರಚನೆ
ಕಾರ್ಮಿಕರ ನೋಂದಣಿಯಾದ ಸಂಖ್ಯೆಯಲ್ಲಿ ಹಲವು ಅನರ್ಹರು ಇರುವ ಶಂಕೆ ಇದ್ದ ಕಾರಣ ಅಧಿಕಾರಿಗಳ ತಂಡಗಳನ್ನು ರಚಿಸಿ ಜಿಲ್ಲಾದ್ಯಂತ ಪರಿಶೀಲಿಸ ಲಾಗುತ್ತಿದೆ.ಈಗಾಗಲೇ ಆಹಾರ ಇಲಾಖೆಯು ನಕಲಿ ಬಿಪಿಎಲ್ ಕಾರ್ಡ್ ರದ್ದು ಅದಂತೆಯೇ ಕಾರ್ಮಿಕ ಇಲಾಖೆ ಕೂಡ ನಕಲಿ ಕಾರ್ಮಿಕ ಕಾರ್ಡ್ ರದ್ದತಿ ಅಭಿಯಾನ ಶುರು ಮಾಡಿದೆ.
ಇವರಿಗೆ ಮಾತ್ರ ಅನ್ವಯ
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು ಒಂದು ವರ್ಷದ ಅವಧಿಯಲ್ಲಿ ಕನಿಷ್ಠ 90 ದಿನಗಳ ಕಾಲ ಯಾವುದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.ಸುಳ್ಳು ದಾಖಲೆ ನೀಡಿ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.
ಇತರೆ ವಿಷಯಗಳು:
ಇನ್ಮುಂದೆ ಟೆನ್ಷನ್ ಬೇಡ! ₹250 ರಿಂದ ಸಿಗತ್ತೆ ಗರಿಷ್ಠ1.5 ಲಕ್ಷ
ಕರ್ನಾಟಕದ ಗ್ರಾಮೀಣ ಬ್ಯಾಂಕುಗಳಲ್ಲಿ ಪದವೀಧರರಿಗೆ ಉದ್ಯೋಗಾವಕಾಶ!