ಹಲೋ ಸ್ನೇಹಿತರೇ, ಒಂದು ವೇಳೆ ಯಾರಿಗಾದರೂ ಹಣದ ಅಗತ್ಯತೆ ಇದ್ರೆ ಅವರು ಬ್ಯಾಂಕಿನಲ್ಲಿ ತಮ್ಮ ಹೆಸರಿನಲ್ಲಿ ಇರುವಂತಹ ಪ್ರಾಪರ್ಟಿಗಳನ್ನು loan against property ವಿಧಾನದ ಮೂಲಕ ಅಡವಿದುವ ಮೂಲಕ ಸಾಲವನ್ನು ಪಡೆದುಕೊಳ್ಳುತ್ತಾರೆ. ಇನ್ನು ಇದರ ಬಡ್ಡಿದರ ಬ್ಯಾಂಕಿನಲ್ಲಿ ಪ್ರಾರಂಭ ಆಗೋದು 9.5% ರಲ್ಲಿ. ಕೆಲವು ಬ್ಯಾಂಕಿನವರು ಹೆಚ್ಚಿನ ಬಡ್ಡಿದರವನ್ನು ಈ ರೀತಿಯ ಸಾಲದ ಮೇಲೆ ವಿಧಿಸಿದರೆ ಇನ್ನು ಕೆಲವು ಬ್ಯಾಂಕಿನವರು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಆಫರ್ ಮಾಡುತ್ತಾರೆ.
ಈ ಕೆಳಗಿನ ಕೆಲವೊಂದು ಪ್ರಮುಖ ಬ್ಯಾಂಕುಗಳ ಬಗ್ಗೆ ನಿಮಗೆ ಹೇಳುವುದಕ್ಕೆ ಹೊರಟಿದ್ದು ಪ್ರಾಪರ್ಟಿಯ ಮೇಲಿನ ಲೋನ್ ಮೇಲೆ ಕಡಿಮೆ ಬಡ್ಡಿ ದರವನ್ನು ನೀಡುವಂತಹ ಬ್ಯಾಂಕುಗಳು ಯಾವುವು ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ನೀವು ಅಥವಾ ನಿಮಗೆ ತಿಳಿದಿರುವವರು ಯಾರಾದರೂ ಈ ರೀತಿಯ ಸಾಲವನ್ನು ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವವರಿದ್ರೆ ಅವರಿಗೆ ಈ ಮಾಹಿತಿ ಉಪಯುಕ್ತಕಾರಿಯಾಗಲಿದೆ.
ಪ್ರಾಪರ್ಟಿ ಮೇಲೆ ಸಾಲವನ್ನು ಪಡೆದುಕೊಳ್ಳುವಾಗ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕುಗಳು
ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ 9.50% ರಿಂದ ಬಡ್ಡಿ ಪ್ರಾರಂಭವಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ನೀವು ತಿಂಗಳಿಗೆ 24,323 ರೂಪಾಯಿಗಳ ಇಎಂಐ ಕಟ್ಟಬೇಕು. ಸ್ವಂತ ಮನೆ ಆಸ್ತಿ ಇದ್ದವರಿಗೆ ಗುಡ್ ನ್ಯೂಸ್.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 10.10 ಪ್ರತಿಶತ ಬಡ್ಡಿ ದರದಲ್ಲಿ ಲೋನ್ ಪ್ರಾರಂಭವಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿ ಲೋನ್ ಪಡೆದುಕೊಂಡಿರುವ ತಿಂಗಳಿಗೆ 24,771 ರೂಪಾಯಿಗಳನ್ನು ಕಟ್ಟಬೇಕು.
- ಆಕ್ಸಿಸ್ ಬ್ಯಾಂಕ್ ನಲ್ಲಿ ಈ ರೀತಿಯ ಲೋನ್ ಗೆ 10.50% ಬಡ್ಡಿ ಚಾರ್ಜ್ ಮಾಡಲಾಗುತ್ತದೆ. ಏಳು ವರ್ಷಗಳಿಗೆ 15 ಲಕ್ಷ ರೂಪಾಯಿಗಳ ಲೋನ್ ಮೇಲೆ 25,072 ರೂಪಾಯಿಗಳ ಇಎಂಐ ಕಟ್ಟಬೇಕು.
ಆಭರಣ ಖರೀದಿಗೆ ಶುಭ ಘಳಿಗೆ.!! ಕೊಂಚ ಇಳಿಕೆ ಕಂಡ ಬಂಗಾರ
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೂಡ 10.55 ಪ್ರತಿಶತ ಬಡ್ಡಿ ದರವನ್ನು ಚಾರ್ಜ್ ಮಾಡಲಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಸಾಲಕ್ಕೆ ನೀವು ತಿಂಗಳಿಗೆ 25109 ರೂಪಾಯಿಗಳನ್ನು ಕಟ್ಟಬೇಕಾಗುತ್ತೆ.
- ಬ್ಯಾಂಕ್ ಆಫ್ ಬರೋಡದಲ್ಲಿ 10.85% ಬಡ್ಡಿ ದರದಿಂದ ಪ್ರಾರಂಭವಾಗುತ್ತದೆ. ಇಲ್ಲಿ ಪ್ರತಿ ತಿಂಗಳಿಗೆ ನೀವು 25, 336 ರೂಪಾಯಿಗಳನ್ನು ಕಟ್ಟಬೇಕಾಗುತ್ತೆ.
- ಕೆನರಾ ಬ್ಯಾಂಕ್ ನಲ್ಲಿ 11.05 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಇಲ್ಲಿ ನೀವು ಪಡೆದುಕೊಳ್ಳುವ ಸಾಲಕ್ಕೆ 25488 ರೂಪಾಯಿ ಕಂತನ್ನು ಕಟ್ಟಿಕೊಂಡು ಹೋಗಬೇಕಾಗುತ್ತದೆ.
- ಐಸಿಐಸಿಐ ಬ್ಯಾಂಕ್ ನಲ್ಲಿ 11.35 ಪ್ರತಿಶತ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಏಳು ವರ್ಷಗಳ ಅವಧಿಗೆ 15 ಲಕ್ಷ ರೂಪಾಯಿಗಳ ಸಾಲಕ್ಕೆ ಪ್ರತಿ ತಿಂಗಳು ನೀವು 25717 ಕಟ್ಟಬೇಕಾಗುತ್ತೆ.
- ಪ್ರಾಪರ್ಟಿ ಲೋನ್ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ 11.40 ಪ್ರತಿಶತ ಚಾರ್ಜ್ ಮಾಡುತ್ತದೆ. ಇಲ್ಲಿ ನೀವು 25756 ರೂಪಾಯಿಗಳ ಕಂತನ್ನು ಕಟ್ಟಬೇಕು.
ಈ ಮೇಲಿನ ಬಡ್ಡಿ ದರಗಳನ್ನು ಮೇಂಟಕ್ಕೆ ಸರಿಹೊಂದುವ ರೀತಿಯಲ್ಲಿ ಬ್ಯಾಂಕುಗಳು ಜಾರಿಗೆ ತಂದಿರುವಂತಹ ನಿಯಮಗಳ ಅನುಸಾರವಾಗಿ ಕಲೆ ಹಾಕಲಾಗಿದೆ. ಒಂದು ವೇಳೆ ನೀವು ಕೂಡ ಇಂತಹ ಬ್ಯಾಂಕುಗಳಲ್ಲಿ ಪ್ರಾಪರ್ಟಿ ಮೇಲೆ ಲೋನ್ ಪಡೆದುಕೊಳ್ಳುವ ಇಚ್ಛೆಯನ್ನು ಹೊಂದಿದ್ದರೆ ಈ ಮಾಹಿತಿ ಖಂಡಿತವಾಗಿ ನಿಮಗೆ ಲಾಭದಾಯಕವಾಗಿದೆ.
ಇತರೆ ವಿಷಯಗಳು:
ಪೋಸ್ಟ್ ಆಫೀಸ್ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್ ಸೆಟಲ್
ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.!! ಇಂದಿನ ಬೆಲೆ ಏಷ್ಟು ಗೊತ್ತಾ??