ಹಲೋ ಸ್ನೇಹಿತರೆ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಈಗಾಗಲೇ 10 ಕೋಟಿ ನಾಗರಿಕರಿಗೆ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ರೂಪದಲ್ಲಿ ಎಲ್ಪಿಜಿ ಗ್ಯಾಸ್ ಅನ್ನು ನೀಡುವಂತಹ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಇದರಡಿ ನಿಮಗೆ 300 ರೂಪಾಯಿಗಳ ಸಬ್ಸಿಡಿ ದೊರಕುತ್ತದೆ ಅದರಿಂದಾಗಿ ಇದೀಗ ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 603 ರೂಪಾಯಿಗಳಲ್ಲಿ ಖರೀದಿ ಮಾಡಬಹುದಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈಗಾಗಲೇ 10 ಕೋಟಿಗಿಂತಲೂ ಹೆಚ್ಚು ಬಡ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಎಲ್ಪಿಜಿ ಗ್ಯಾಸ್ ಅನ್ನು ನೀಡಲಾಗುತ್ತಿದ್ದೂ ಈ ಮೂಲಕ ಬಡವರ್ಗದ ಜನರ ಕಷ್ಟಕ್ಕೆ ಸಹಾಯ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ.
2016 ರಿಂದ ಪ್ರಾರಂಭವಾಗಿರುವ ಈ ಯೋಜನೆಯನ್ನು 2024ರ ಮಾರ್ಚ್ 31ರವರೆಗೆ ನಿಗದಿಪಡಿಸಲಾಗಿತ್ತು ಆದರೆ ಈಗ ಮುಂದಿನ ವರ್ಷದ ಮಾರ್ಚ್ ತಿಂಗಳವರೆಗೂ ಮುಂದುವರಿಸುವಂತಹ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.
ಇದನ್ನು ಓದಿ:ಶಾಲಾ ಶುಲ್ಕ ಶೇ. 15 ರಿಂದ 20 ರಷ್ಟು ಏರಿಕೆ! ಶಿಕ್ಷಣ ಇಲಾಖೆ ಖಡಕ್ ಸೂಚನೆ
ಕುಟುಂಬಗಳಿಗೆ ಈ ಯೋಜನೆ ಅಡಿಯಲ್ಲಿ 12 ಗ್ಯಾಸ್ ಸಿಲಿಂಡರ್ ನೀಡಲಾಗುತ್ತದೆ ಹಾಗೂ ಪ್ರತಿ ಗ್ಯಾಸ್ ಸಿಲಿಂಡರ್ ಮೇಲೆ 300 ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗುತ್ತದೆ. 2022 ರಲ್ಲಿ ಗ್ಯಾಸ್ ಸಿಲೆಂಡರ್ ಮೇಲೆ 200 ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತಿತ್ತು ಆದರೆ ಈಗ ಅದನ್ನು ಹೆಚ್ಚಿಸಿ 300 ರೂಪಾಯಿಗಳಿಗೆ ಏರಿಸಲಾಗಿದೆ.
ಬಡ ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಡುಗೆ ಕೆಲಸ ಮಾಡಲು ಸುಲಭವಾಗುವಂತೆ ಗ್ಯಾಸ್ ಕನೆಕ್ಷನ್ ಅತ್ಯಂತ ಕಡಿಮೆ ಬೆಲೆಗೆ ಉಜ್ವಲ ಯೋಜನೆ ಅಡಿಯಲ್ಲಿ ನೀಡುವ ಕೆಲಸವನ್ನು ನರೇಂದ್ರ ಮೋದಿ ರವರ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ.
ಈ ಕಾರಣಕ್ಕಾಗಿ ಎಲ್ ಪಿಜಿ ಸಿಲಿಂಡರ್ ಅನ್ನು ನೀವು ಕೇವಲ 603 ರೂಗೆ ಖರೀದಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಈ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಕಲ್ಪಿಸಿದೆ. ಒಂದು ವೇಳೆ ನೀವು ಕೂಡ ಈ ನಿಯಮಗಳ ಅಡಿಯಲ್ಲಿ ಇದ್ದರೆ ಆದರೆ ನೀವು ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಗ್ಯಾಸ್ ಕನೆಕ್ಷನ್ ಸೌಲಭ್ಯ ವನ್ನು ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ರೈಲು ಪ್ರಯಾಣಿಕರಿಗೆ ಬಿಗ್ ನ್ಯೂಸ್! ರೈಲು ವೇಳಾಪಟ್ಟಿಯಲ್ಲಿ ಸಂಪೂರ್ಣ ಬದಲಾವಣೆ
ಮಹಿಳೆಯರಿಗೆ 15 ಸಾವಿರದ ಟೂಲ್ ಕಿಟ್ ವಿತರಣಾ ಯೋಜನೆ!! ಇನ್ನೂ ಪ್ರಯೋಜನ ಸಿಗದವರು ಇಂದೇ ಅಪ್ಲೇ ಮಾಡಿ