ಮದುವೆಯಾಗುವವರಿಗೆ ಸರ್ಕಾರದಿಂದ ಬಂಪರ್‌ ಸುದ್ದಿ! 2.50 ಲಕ್ಷ ರೂ. ಪ್ರೋತ್ಸಾಹ ಧನ

ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದ ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆಯಡಿ ಹೊಸದಾಗಿ ಮದುವೆಯಾಗುವವರಿಗೆ 2.50 ಲಕ್ಷ ರೂ.ಪ್ರೋತ್ಸಾಹ ಧನ ನೀಡಲಾಗುತ್ತದೆ. ಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆಯಡಿ ಅರ್ಜಿ ಸಲ್ಲಿಸಿ ದಲಿತರನ್ನು ಒಳಗೊಂಡ ಜೋಡಿಗಳ ಅಂತರ್ಜಾತಿ ವಿವಾಹಕ್ಕೆ ಈ ಯೋಜನೆಯಡಿ ಪ್ರೋತ್ಸಾಹ ಧನವನ್ನು ಡಾ.ಅಂಬೇಡ್ಕರ್ ಫೌಂಡೇಶನ್ ವತಿಯಿಂದ ನೀಡಲಾಗುತ್ತದೆ.

Marriage Incentive Scheme
Marriage Incentive Scheme

ಕಾನೂನುಬದ್ಧ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ಪ್ರತಿ ಮದುವೆಗೆ ರೂ. 2.50 ಲಕ್ಷ. ನಾನ್ ಜುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಪ್ರಿ-ಸ್ಟ್ಯಾಂಪ್ಡ್ ರಸೀದಿಯನ್ನು ಪಡೆದ ಮೇಲೆ ರೂ. 1.50 ಲಕ್ಷವನ್ನು ಅರ್ಹ ದಂಪತಿಗಳಿಗೆ RTGS/NEFT ಮೂಲಕ ದಂಪತಿಗಳ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ತದನಂತರ ಉಳಿದ ಮೊತ್ತವನ್ನು 3 ವರ್ಷಗಳ ಅವಧಿಗೆ ಫೌಂಡೇಶನ್‌ನಲ್ಲಿ ಸ್ಥಿರ ಠೇವಣಿಯಲ್ಲಿ ಇರಿಸಲಾಗುತ್ತದೆ. ಈ ಮೊತ್ತವನ್ನು ಫೌಂಡೇಶನ್‌ನಿಂದ 3 ವರ್ಷಗಳ ಪ್ರೋತ್ಸಾಹಧನ ಮಂಜೂರಾದ ಮೇಲೆ ಅದರ ಮೇಲೆ ಬರುವ ಬಡ್ಡಿಯೊಂದಿಗೆ ದಂಪತಿಗಳಿಗೆ 3 ವರ್ಷದ ನಂತರ ವರ್ಗಾವಣೆ ಮಾಡಲಾಗುತ್ತದೆ.

ಉದ್ಯೋಗಿಗಳಿಗೆ ಬಂಪರ್ ಆಫರ್:‌ ಸೆಪ್ಟೆಂಬರ್‌ನಲ್ಲಿ ನೌಕರರ ಸಂಬಳ ಹೆಚ್ಚಳ ಘೋಷಣೆ!

ಅರ್ಹತಾ ಮಾನದಂಡಗಳೇನು?

  • ಈ ಯೋಜನೆಯಡಿ ಪ್ರಯೋಜನ ಪಡೆಯಲು ಅಂತರ್-ಜಾತಿ ವಿವಾಹವಾಗಿರಬೇಕು ಅಂದರೆ ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು ಅಥವಾ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
  • ಮದುವೆಯು ಕಾನೂನಿನ ಪ್ರಕಾರ ಮಾನ್ಯವಾಗಿರಬೇಕು ಮತ್ತು ಹಿಂದೂ ವಿವಾಹ ಕಾಯಿದೆ, 1955 ರ ಅಡಿಯಲ್ಲಿ ಕ್ರಮಬದ್ಧವಾಗಿ ನೋಂದಣಿ ಅಗಿರಬೇಕಾಗುತ್ತದೆ.
  • ಎರಡನೇ ಮದುವೆಯಾದವರಿಗೆ ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ಅರ್ಹರಿರುವುದಿಲ್ಲ.
  • ಮದುವೆಯಾದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಿದರೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
  • ಮದುವೆಯಾಗುವ ಜೋಡಿಯಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
  • ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ಅರ್ಜಿ ನಮೂನೆ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಹಿಂದೂ ವಿವಾಹ ಕಾಯಿದೆ 1955 ರ ಅಡಿಯಲ್ಲಿ ಮದುವೆಯ ಪ್ರಮಾಣಪತ್ರ.
  • ಹಿಂದೂ ವಿವಾಹ ಕಾಯ್ದೆ 1955 ರ ಹೊರತಾಗಿ ಧರ್ಮದ ಪ್ರಮಾಣಪತ್ರ.
  • ಸಂಸದ/ಶಾಸಕರಿಂದ ಶಿಫಾರಸು ಪ್ರಮಾಣ ಪತ್ರ.
  • ಅರ್ಜಿದಾರರ ಅಧಾರ್ ಕಾರ್ಡ್ ಪ್ರತಿ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಪೋಟೋ

ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ದಪಡಿಕೊಂಡು ಅರ್ಹ ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಂಡು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಇತರೆ ವಿಷಯಗಳು:

ಈ ವರ್ಗದರಿಗೆ ಸಂತಸದ ಸುದ್ದಿ.!! ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಗ್ರಾಮೀಣ ಭಾಗದ ಮಕ್ಕಳಿಗೆ ಗುಡ್‌ ನ್ಯೂಸ್.!!‌ ಈ ಸ್ಕೀಮ್‌ ನಿಂದ ನಿಮ್ಮ ಕೈ ಸೇರಲಿದೆ 6000 ರೂ.

Leave a Reply

Your email address will not be published. Required fields are marked *