ಹಲೋ ಸ್ನೇಹಿತರೇ, ಸರ್ಕಾರವು ನಮ್ಮ ಜನರಿಗೆ ಅನುಕೂಲ ಆಗಲಿ ಎಂದು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಹೆಚ್ಚಿನ ಪ್ರಯೋಜನಗಳು ಸಿಗುತ್ತಲೇ ಇರುತ್ತದೆ. ಇದೀಗ ಸರ್ಕಾರವು ಜನರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ಜನರಿಗೆ ₹11,000 ರೂಪಾಯಿಗಳು ಸಿಗಲಿದೆ.
ಹೌದು, ಜನರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎಂದೇ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಬಡಜನರು ತಮ್ಮ ಬದುಕಿಗೆ ಸೌಲಭ್ಯಗಳನ್ನು ಒದಗಿಸಿಕೊಳ್ಳುವುದು ಕಷ್ಟ.
ಆರೋಗ್ಯದ ವಿಚಾರದಲ್ಲಿ ಕೂಡ ಅವರು ಸರಿಯಾಗಿ ಏನನ್ನು ಮಾಡಿಕೊಳ್ಳಲು ಸಾಧ್ಯ ಆಗುವುದಿಲ್ಲ. ಅಂಥವರಿಗೆ ಈಗ ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರವು 11,000 ರೂಪಾಯಿ ನೀಡುವಂಥ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಬಗ್ಗೆ ಇಂದು ಸಂಪೂರ್ಣ ಮಾಹಿತಿ ತಿಳಿಯೋಣ..
ಮಾತೃ ವಂದನಾ ಯೋಜನೆ:
ಇದು ಕೇಂದ್ರ ಸರ್ಕಾರದಿಂದ ಜಾರಿಗೆ ಬಂದಿರುವ ಯೋಜನೆ ಆಗಿದ್ದು, ಈ ಯೋಜನೆಯ ಮೂಲಕ ಗರ್ಭಿಣಿ ಮಹಿಳೆಯರು ಮತ್ತು ಅವರ ಪುಟ್ಟ ಮಕ್ಕಳನ್ನು ಆರೈಕೆ ಮಾಡಲು ಸರ್ಕಾರದಿಂದ ಸಹಾಯ ಸಿಗುತ್ತದೆ.
ನಮ್ಮ ದೇಶದಲ್ಲಿ ಲಕ್ಷಗಟ್ಟಲೇ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ. ಗರ್ಭಿಣಿಯ ಆರೋಗ್ಯ ಮತ್ತು ಮಗುವಾದ ನಂತರ ಬಾಣಂತಿ ಮತ್ತು ಮಗುವಿನ ಆರೋಗ್ಯವನ್ನು ನೋಡಿಕೊಳ್ಳಲು ಈ ಯೋಜನೆ ಇಂದ ಸಹಾಯ ಆಗುತ್ತದೆ.
ಈ ಯೋಜನೆಯಲ್ಲಿ ಫಲದ ಹಣವು 11,000 ರೂಪಾಯಿ ಆಗಿರಲಿದೆ. ಮೊದಲ ಮಗುವಿನ ಗರ್ಭಾವಸ್ಥೆಯಲ್ಲಿ ಇದ್ದಾಗ ₹5000 ರೂಪಾಯಿಗಳು ಎರಡು ಕಂತುಗಳಲ್ಲಿ ಲಭಿಸಲಿದೆ. ಇನ್ನು 2ನೇ ಮಗುವಾದರೆ, ಅದು ಹೆಣ್ಣು ಮಗು ಆಗಿದ್ದರೆ ಒಂದೇ ಸಾರಿಗೆ ₹6000 ರೂಪಾಯಿಗಳು ಮಹಿಳೆಯ ಬ್ಯಾಂಕ್ ಖಾತೆಗೆ ಬರಲಿದೆ.
ಕರೆಂಟ್ ಬಿಲ್ ಕಟ್ಟುವವರಿಗೆ ಸಂತಸದ ಸುದ್ದಿ.!! ಇನ್ಮುಂದೆ ನಿಮ್ಮ ಮನೆ ಸೇರಲಿದೆ 78000 ರೂ; ಇಂದೇ ಅಪ್ಲೇ ಮಾಡಿ
ಬೇಕಾಗುವ ದಾಖಲೆಗಳು:
- ತಾಯಿಯ ಆಧಾರ್ ಕಾರ್ಡ್
- ಪಾಸ್ ಪೋರ್ಟ್ ಸೈಜ್ ಫೋಟೋ
- ಪ್ಯಾನ್ ಕಾರ್ಡ್
- ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್
- ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್
- ಬರ್ತ್ ಸರ್ಟಿಫಿಕೇಟ್
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಈ ಯೋಜನೆಯ ಸೌಲಭ್ಯ ಪಡೆಯಲು ಗರ್ಭಿಣಿಯರು ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಆದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಬಹುದು.
ಆಫ್ಲೈನ್ ಮೂಲಕ ಆದರೆ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಗರ್ಭಿಣಿ ಮಹಿಳೆಯರು ತಪ್ಪದೆ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ.
ಇತರೆ ವಿಷಯಗಳು:
ಜನರನ್ನು ಕಂಗೆಡಿಸುತ್ತಿದೆ ಟೊಮೊಟೋ ಬೆಲೆ.!! ಇಂದಿನ ಬೆಲೆ ಎಷ್ಟು ಗೊತ್ತಾ??
ರೇಷನ್ ಕಾರ್ಡ್ ಉಳ್ಳವರಿಗೆ ಬಿಗ್ ಶಾಕ್.!!! ಇನ್ಮುಂದೆ ಈ 5 ನಿಯಮ ಪಾಲನೆ ಕಡ್ಡಾಯ