ಜಾನುವಾರು ಶೆಡ್ ನಿರ್ಮಿಸಲು ರೂ. 57,000 ಸಹಾಯಧನ! ಈ ರೀತಿ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಗ್ರಾಮೀಣ ಭಾಗದಲ್ಲಿ ಕೃಷಿ ಜೊತೆ ಉಪಕಸುಬುಗಳ ಮೂಲಕ ಸ್ವ-ಉದ್ಯೋಗ ಆರಂಭಿಸಲು ಮತ್ತು ಈಗಾಗಲೇ ಹಸು/ಕುರಿ/ಕೋಳಿ/ಹಂದಿ ಸಾಕಾಣಿಕೆ ಮಾಡುತ್ತಿರುವವರಿಗೆ ಸೂಕ್ತ ವ್ಯವಸ್ಥಿತ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅರ್ಥಿಕವಾಗಿ ನೆರವನ್ನು ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪಡೆಯಬಹುದಾಗಿದೆ.

mgnrega pashu shed scheme

ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ಜಾನುವಾರು ಶೆಡ್’ನ ಸಹಾಯಧನದ ಮೊತ್ತವು ರೂ. 57,000 ರೂ ಅಗಿರುತ್ತದೆ. ಈ ಹಿಂದೆ ಈ ಸಹಾಯಧನದ ಮೊತ್ತ ರೂ. 43,000 ಅಗಿತ್ತು ಕಳೆದ ವರ್ಷ ಇದನ್ನು ಈ ಮೊತ್ತವನ್ನು 57,000 ರೂ. ಏರಿಕೆ ಮಾಡಲಾಗಿದೆ.

ಈ ಆದೇಶದನ್ವಯ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದವರಿಗೆ ಸಾಮಾನ್ಯ ವರ್ಗದವರಿಗೆ ಸಮಾನ ಸಹಾಯಧನ ನೀಡಲಾಗುತ್ತಿದೆ. ಎಲ್ಲಾ ವರ್ಗದವರಿಗೂ ಸಮಾನವಾಗಿ ಸಹಾಯಧನ ದೊರಕುವಂತೆ ಮಾಡಲಾಗಿದೆ. ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದವರು ಹಾಗೂ 4 ಅಥವಾ 4ಕ್ಕಿಂತ ಹೆಚ್ಚು ಜಾನುವಾರು ಸಾಕಿದ ಪ್ರತಿಯೊಬ್ಬರೂ ಜಾನುವಾರು ಶೆಡ್ ನಿರ್ಮಿಸಿಕೊಂಡು ರೂ. 57,000 ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ. 

ಅರ್ಜಿ ಎಲ್ಲಿ ಸಲ್ಲಿಸಬೇಕು?

ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳು ಇರುವ ಕುರಿತು ದೃಢೀಕರಣ ಪತ್ರ ಪಡೆದಿದ್ದು. ಈ ದಾಖಲೆಗಳಿರುವ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು. ಈ ಸ್ವೀಕೃತ ಅರ್ಜಿಯನ್ನು ಗ್ರಾಮ ಪಂಚಾಯತಿಯವರು ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಮೇಲಧಿಕಾರಿಗಳಿಂದ  ಅನುಮೋದನೆ ಪಡೆದ ನಂತರ ಕಾಮಗಾರಿ ಅನುಷ್ಠಾನಗೊಳ್ಳುತ್ತದೆ.  

ಶೆಡ್ ಅಳತೆ ಮತ್ತು ಸಹಾಯಧನ:

ನರೇಗಾ ಯೋಜನೆಯಡಿ ನಿರ್ಮಿಸಲಾಗುವ ಜಾನುವಾರು ಶೆಡ್ 10 ಅಡಿ ಅಗಲ, 18 ಅಡಿ ಉದ್ದ ಗೋಡೆ, 5 ಅಡಿ ಎತ್ತರದ ಗೋಡೆ ಹಾಗೂ ಗೋದಲಿ/ಮೇವುತೊಟ್ಟಿ ಒಳಗೊಂಡಿರಬೇಕು. ಜೊತೆಗೆ ಜಾನುವಾರುಗಳಿಗೆ ಗಾಳಿ ಆಡಲು ಜಾಗವಿರುವಂತೆ ಶೆಡ್ ಗೆ ಶೀಟ್ಗಳನ್ನು ಅಳವಡಿಸಬೇಕು. ಜಾನುವಾರು ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಸಿಗುವ ಒಟ್ಟು 57 ಸಾವಿರ ಸಹಾಯಧನದಲ್ಲಿ 10,556 ರೂ. ಕೂಲಿ ಹಾಗೂ 46,444 ರೂ. ಸಾಮಗ್ರಿ ಮೊತ್ತ ದೊರೆಯಲಿದೆ. 

ಇತರೆ ವಿಷಯಗಳು:

ಪ್ಯಾನ್‌ ಕಾರ್ಡ್‌ ಬಳಕೆದಾರಿಗೆ ಶಾಕಿಂಗ್‌ ನ್ಯೂಸ್.!!‌ ಇಂದೇ ಈ ಕೆಲಸ ಮಾಡುವುದು ಉತ್ತಮ

ಲಕ್ಷಾಂತರ ಜನರ ಭವಿಷ್ಯ ಬದಲಾಯಿಸಿದ ಯೋಜನೆ! ಆಧಾರ್‌ ಕಾರ್ಡ್‌ ಮೂಲಕ 5 ನಿಮಿಷಗಳಲ್ಲಿ ಸಿಗತ್ತೆ 10 ಲಕ್ಷ

Leave a Reply

Your email address will not be published. Required fields are marked *