ಹಲೋ ಸ್ನೇಹಿತರೆ, ರಾಜ್ಯ ಸರ್ಕಾರವು ಬಡಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಮತ್ತೆ 252 ಹೊಸ ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ದಿನೇಶ್ ಗುಂಡೂರಾವ್, ಜನಸಾಮಾನ್ಯರಿಗೆ ಸರಿಯಾದ ಸಮಯಕ್ಕೆ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ‘ನಮ್ಮ ಕ್ಲಿನಿಕ್’ ಗಳ ಪಾತ್ರ ಮಹತ್ವದ್ದಾಗಿದೆ.
ರಾಜ್ಯಾದ್ಯಂತ ಈಗಾಗಲೇ ಒಟ್ಟು 503 ನಮ್ಮ ಕ್ಲಿನಿಕ್ ಗಳು ಈಗಾಗಲೇ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿವೆ ಎಂದು ತಿಳಿಸಿದ್ದಾರೆ. ಬಡಜನತೆಗೆ ನೇರವಾಗಿ ಸೇವೆ ತಲುಪುವ ಈ ‘ನಮ್ಮ ಕ್ಲಿನಿಕ್’ಗಳ ಸಂಖ್ಯೆಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಹೊಸ ಹೆಜ್ಜೆಯೊಂದಿಗೆ ಈಗಿರುವ ಕ್ಲಿನಿಕ್ ಗಳ ಜೊತೆಗೆ ಇನ್ನೂ 252 ಹೊಸ ‘ನಮ್ಮ ಕ್ಲಿನಿಕ್’ಗಳನ್ನು ಆರಂಭಿಸಲಿದ್ದೇವೆ.
ಇದಕ್ಕಾಗಿ ಈಗಾಗಲೇ ಸ್ಥಳ ಮತ್ತಿತರೇ ಸೌಲಭ್ಯ ಗುರುತಿಸುವ ಕಾರ್ಯ ಭರದಿಂದ ಆರಂಭವಾಗಿದೆ. ಇದಲ್ಲದೇ ನಮ್ಮ ಕ್ಲಿನಿಕ್’ಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರ ಸಂಬಳವನ್ನು ಸಹ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಹಾಗು ಜನತೆಗೆ ಅನುಕೂಲವಾಗುವಂತೆ ನಮ್ಮ ಕ್ಲಿನಿಕ್’ಗಳ ಕಾರ್ಯನಿರ್ವಹಣಾ ಸಮಯದಲ್ಲಿ ಬದಲಾವಣೆ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಮಾಹಿತಿ ತಿಳಿಸಿದ್ದಾರೆ.
ಇತರೆ ವಿಷಯಗಳು:
ʻಜನ್ ಧನ್ ಖಾತೆʼದಾರರಿಗೆ 2.30 ಲಕ್ಷ ರೂ.ನ ಹೊಸ ವಿಮೆ ಸೌಲಭ್ಯ ಆರಂಭ!
ಬಜೆಟ್ ಭಾಷಣದಲ್ಲಿ ಚಿನ್ನ, ಬೆಳ್ಳಿ ಬೆಲೆ ಅಗ್ಗ ಘೋಷಣೆ!