ಹಲೋ ಸ್ನೇಹಿತರೆ, ಕರ್ನಾಟಕ ರಾಜ್ಯದ ಅಂಗನವಾಡಿಗಳಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಬಿಐಎಸ್ ಸೂಚಿತ ಗುಣಮಟ್ಟದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಸ ಮೆನುವನ್ನು ಸಿದ್ಧಪಡಿಸಿ ಅನುಷ್ಠಾನಕ್ಕೆ ತರಲಾಗಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ತಾಂತ್ರಿಕ ಸಮಿತಿ ಶಿಫಾರಸ್ಸಿನ ಅನ್ವಯದಂತೆ ನಿಗದಿತ ವಿಟಮಿನ್ಸ್ ಮಿನರಲ್ ಗಳನ್ನು ಒಳಗೊಂಡಿರುವ ಹಾಗೇ ಪ್ರತಿದಿನ ಸಾಮಾನ್ಯ ಮಗುವಿಗೆ 140 ಗ್ರಾಂ, ಅಪೌಷ್ಟಿಕತೆಯುಳ್ಳ ಮಗುವಿಗೆ 225 ಗ್ರಾಂ ಪೌಷ್ಟಿಕ ಆಹಾರ ನೀಡಲಾಗುವುದು.
ಪ್ರತೀ ದಿನ ಗೋಧಿ ಅನ್ನ -ಸಾಂಬಾರು, ಉಪ್ಪಿಟ್ಟು, ಮೊಟ್ಟೆ, ಲಡ್ಡು ಕೊಡಲಾಗುವುದು. ಮಧ್ಯಾಹ್ನದ ಬಿಸಿ ಊಟಕ್ಕೆ ಗರ್ಭಿಣಿಯರು, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಆಗಮಿಸುತ್ತಾರೆ. ಉದ್ಯೋಗಸ್ಥ ಮಹಿಳೆಯರು, ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರು, ಇತರೆ ಅನಿವಾರ್ಯ ಕಾರಣಗಳಿಂದ ಅಂಗನವಾಡಿಗಳಿಗೆ ಬರಲು ಸಾಧ್ಯವಾಗದ ಮಹಿಳೆಯರ ಮನೆಗೆ ಆಹಾರ ಪದಾರ್ಥ ತಲುಪಿಸಲಾಗುತ್ತದೆ.
ಇದನ್ನು ಓದಿ: ಬಜೆಟ್ ಘೋಷಣೆ ಜೊತೆ ಆಗಸ್ಟ್ 1 ರಿಂದ ಈ ನಿಯಮಗಳಲ್ಲಿ ಬದಲಾವಣೆ ಜಾರಿ!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 60 ಸಾವಿರ ಕ್ಕಿಂತ ಹೆಚ್ಚು ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕ ಆಹಾರವನ್ನು BIS ನಿಂದ ಪರವಾನಿಗೆ ಪಡೆದ ಮಹಿಳಾ ಗುಂಪುಗಳ ಸಹಯೋಗದೊಂದಿಗೆ ಐಸಿಡಿಎಸ್ ಯೋಜನೆಯಡಿ ಮಹಿಳಾ ಪೂರಕ ಉತ್ಪಾದನೆ ಮತ್ತು ತರಬೇತಿ ಕೇಂದ್ರಗಳ ಮೂಲಕ ಆಹಾರ ತಯಾರಿಸಿ ಪೂರೈಕೆ ಮಾಡಲಾಗುತ್ತಿದೆ.
ಮಧ್ಯಾಹ್ನದ ಊಟಕ್ಕೆ ಮೂರು ದಿನಗಳ ಕಾಲ ಗೋಧಿ ಉಪ್ಪಿಟ್ಟು, ಮೂರು ದಿನ ಅನ್ನ, ಸಾಂಬಾರ್, ವಾರಕ್ಕೆ ಎರಡು ದಿನ ಮೊಟ್ಟೆ, ಬೆಳಗ್ಗಿನ ಉಪಹಾರಕ್ಕೆ ವಾರದಲ್ಲಿ 5 ದಿನ ಮಿಲೆಟ್ ಲಡ್ಡು, ಮತ್ತು ಹಾಲು ಮೊದಲಾದವುಗಳನ್ನು ಮಹಿಳೆಯರಿಗೆ ಮಕ್ಕಳಿಗೆ ನೀಡಲಾಗುವುದು.
ಇತರೆ ವಿಷಯಗಳು:
ಕೇಂದ್ರ ನೌಕರರಿಗೆ ಹಣಕಾಸು ಸಚಿವರಿಂದ ‘ಖಾತರಿ’ ಯೋಜನೆ!
ಮನೆ ಖರೀದಿದಾರರಿಗೆ ಬಜೆಟ್ ವರದಾನ.!!! ಬಡ ಮತ್ತು ಮಧ್ಯಮ ವರ್ಗದವರಿಗೆ ಮತ್ತೊಮ್ಮೆ ಬಂಪರ್ ಆಫರ್