ಹಲೋ ಸ್ನೇಹಿತರೇ, ದೂರ ಪ್ರಯಾಣಕ್ಕೆ ಹೆಚ್ಚಿನವರಿಗೆ ಬೈಕ್ ಮೊದಲ ಆದ್ಯತೆಯಾಗಿರುತ್ತದೆ. ಜಾಲಿರೈಡ್ ಎಂಜಾಯ್ ಮಾಡುತ್ತಿದ್ದವರಿಗೆ ಇನ್ಮುಂದೆ ಅದಕ್ಕೆ ಅವಕಾಶವಿಲ್ಲ. ಬೈಕ್‌ನ ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡುವವರಿಗೆ ಇನ್ಮುಂದೆ ಸರಕಾರದ ಹೊಸ ನಿಯಮವನ್ನು ಪಾಲನೆ ಮಾಡಬೇಕು.
ಒಂದೊಮ್ಮೆ ಯಾಮಾರಿದ್ರೆ ನೀವು ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಬೈಕ್‌ನ ಹಿಂಬದಿಯಲ್ಲಿ ಕುಳಿತ ಪ್ರಯಾಣಿಕರು ಸವಾರರ ಜೊತೆಗೆ ಮಾತನಾಡುತ್ತಾ ಪ್ರಯಾಣಿಸೋದು ಸರ್ವೇ ಸಾಮಾನ್ಯ. ಆದ್ರೆ ಇನ್ಮುಂದೆ ಬೈಕ್ ಹಿಂಬದಿ ಪ್ರಯಾಣಿಕರು ಸವಾರರ ಜೊತೆಗೆ ಯಾವುದೇ ಕಾರಣಕ್ಕೂ ಮಾತನಾಡುವಂತಿಲ್ಲ. ಬೈಕ್‌ನಲ್ಲಿ ತೆರಳುವ ವೇಳೆಯಲ್ಲಿ ಹಿಂಬದಿಯ ಸವಾರರ, ಬೈಕ್ ಸವಾರನ ಜೊತೆಗೆ ಮಾತಾಡಿದ್ದು ಕಂಡು ಬಂದ್ರೆ ದಂಡ ಬೀಳವುದು ಖಚಿತವಾಗಿದೆ.
ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಹಿಂಬದಿ ಸವಾರರು ಬೈಕ್‌ನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಬೈಕ್ ಸವಾರನ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಜೊತೆಗೆ ಬೈಕ್‌ಗಳಲ್ಲಿ ಜಾಲಿ ರೈಡ್ ಮಾಡುವ ವೇಳೆಯಲ್ಲಿ ಸಂಭವಿಸುವ ಪ್ರಕರಣಗಳ ಸಂಖ್ಯೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಇದೇ ಕಾರಣದಿಂದಲೇ ಇಂತಹದ್ದೊಂದು ಹೊಸ ರೂಲ್ಸ್ ಅನ್ನು ಜಾರಿಯಾಗಿದೆ.
ರಾಜ್ಯದ ರೈತರ ಜಮೀನುಗಳಿಗೆ ಹೊಸ ತಂತ್ರಾಂಶ ಜಾರಿ!
ಸದ್ಯ ಕೇರಳದಲ್ಲಿ ಈ ಆದೇಶ ಜಾರಿಯಾಗಿದ್ದು, ಕೇರಳದ ಮೋಟಾರು ವಾಹನಗಳ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ಕೇರಳದ RTO ಇಲಾಖೆ ತಮ್ಮ ಹೊಸ ಆದೇಶ ಯಾವ ಕಾರಣಕ್ಕೆ ಜಾರಿ ಮಾಡಲಾಗಿದೆ ಎನ್ನವುದಕ್ಕೆ ಸ್ಪಷ್ಟನೆ ಕೊಟ್ಟಿದೆ. ಬೈಕ್‌ನ ಹಿಂಬದಿ ಸವಾರರು ಬೈಕ್ ಪ್ರಯಾಣದ ವೇಳೆಯಲ್ಲಿ ಸವಾರನ ಜೊತೆಗೆ ಮಾತನಾಡಿದ್ರೆ ದಂಡವು ಬೀಳುತ್ತೆ.
ರಸ್ತೆ ಅಪಘಾತಗಳ ಪೈಕಿ ದ್ವಿಚಕ್ರ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೆ ಬಲಿಯಾಗುತ್ತಿವೆ. ಇಂತಹ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಕೇರಳದಲ್ಲಿ ಇಂತಹದ್ದೊಂದು ಹೊಸದಾದ ಕ್ರಮ ಜಾರಿಗೆ ಬಂದಿದೆ. ಆದ್ರೆ ಕೇರಳ ಪೊಲೀಸರು ಈ ಹೊಸ ಆದೇಶವನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಯನ್ನು ಮಾಡ್ತಾರೆ ಅನ್ನೋದನ್ನು ಕಾಡು ನೋಡಬೇಕಾಗಿದೆ.
ಇನ್ಮುಂದೆ ಬೈಕಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಸವಾರನ ಜೊತೆಗೆ ಮಾತನಾಡದೆ ಮೌನವಾಗಿರಿ. ಕೇರಳದಲ್ಲಿ ಜಾರಿಯಾಗಿರುವ ಈ ಹೊಸ ರೂಲ್ಸ್ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಜಾರಿಯಾದ್ರೂ ಕೂಡ ಅಚ್ಚರಿಯಿಲ್ಲ. ಯಾವುದಕ್ಕೂ ನೀವು ಹುಷಾರಾಗಿರುವುದು ಒಳಿತು.
ಇತರೆ ವಿಷಯಗಳು:
ಬಜೆಟ್ 2024 ಅಪ್‌ಡೇಟ್: ಮೊಬೈಲ್ ಫೋನ್‌ಗಳು, ಚಿನ್ನ, ಬೆಳ್ಳಿ ಇನ್ಮುಂದೆ ಅಗ್ಗ
ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸುದ್ದಿ.!! ಈ ಸ್ಕೀಮ್ ನಿಂದ ನಿಮ್ಮದಾಗಲಿದೆ ಸ್ಮಾರ್ಟ್ ಪಿಂಚಣಿ