ಹಲೋ ಸ್ನೇಹಿತರೇ, ಆದಾಯ ತೆರಿಗೆ ಕಾಯ್ದೆ 1961, ಅಡಿಯಲ್ಲಿ ಸರ್ಕಾರ ಹಿರಿಯ ನಾಗರಿಕರಿಗೆ ಹಲವು ಆದಾಯ ತೆರಿಗೆಯ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ವಯಸ್ಸಾದ ಮತ್ತು ನಿವೃತ್ತಿ ಪಡೆದಂತಹ ವ್ಯಕ್ತಿಗಳು ಹೆಚ್ಚಿನ ಅನುಕೂಲತೆಯನ್ನು ಪಡೆದುಕೊಳ್ಳುತ್ತಿದ್ದರು ಹಾಗೂ ಸರ್ಕಾರವು ಹಿರಿಯ ನಾಗರಿಕರ ಜೀವಮಾನದ ಹೂಡಿಕೆಯ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಹಾಕುತ್ತಿರಲಿಲ್ಲ. ಹೀಗಿರುವಾಗ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 7 ತೆರಿಗೆ ಪ್ರಯೋಜನಗಳನ್ನು ಭಾರತ ಸರ್ಕಾರವು ಒದಗಿಸಿಕೊಡುತ್ತಿದೆ.
ತೆರಿಗೆ ವಿನಾಯಿತಿಯ ಮಿತಿ:
ಹೊಸ ನಿರ್ಧಾರದಿಂದಾಗಿ 60 ವರ್ಷಕ್ಕಿಂತ ಮೇಲ್ಪಟ್ಟಂತಹ ಹಿರಿಯ ನಾಗರಿಕರಿಗೆ ಹೆಚ್ಚುವರಿ ತೆರಿಗೆ ವಿನಾಯಿತಿಯನ್ನು ದೊರಕಲಿದೆ ಇದರಿಂದ ಮೂರು ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಮತ್ತು ಸೂಪರ್ ಸೀನಿಯರ್ ಸಿಟಿಜನ್ ವರ್ಗದಲ್ಲಿ ಬರುವಂತಹ ಹಿರಿಯರ ಐದು ಲಕ್ಷದವರೆಗಿನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸುವಂತಿಲ್ಲ.
2. ಐಟಿಆರ್ ಸಲ್ಲಿಸುವುದರಿಂದ ವಿನಾಯಿತಿ:
ಆದಾಯ ತೆರಿಗೆ ಕಾಯ್ದೆ ಅಡಿ, ತೆರಿಗೆ ಪಾವತಿಯಲ್ಲಿ ಹಿರಿಯ ನಾಗರಿಕರಿಗೆ ಸಾಕಷ್ಟು ವಿನಾಯಿತಿಯಿದ್ದು ಅದರಲ್ಲಿ ಮುಖ್ಯವಾಗಿ 75 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ನಾಗರಿಕರು ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ.
3. ಪ್ರಮಾಣಿತ ಕಡಿತದ ಮೇಲೆ ಪ್ರಯೋಜನಗಳು:
ಪಿಂಚಣಿ ಪಡೆಯುವ ತೆರಿಗೆದಾರರಿಗೆ ಸರ್ಕಾರ 50,000ಗಳ ಪ್ರಮಾಣಿತ ಕಡಿತವನ್ನು ನೀಡಲು ಮುಂದಾಗಿದೆ ಹಾಗೂ ವ್ಯಕ್ತಿಯ ಪರವಾಗಿ, ಕುಟುಂಬಸ್ಥರು ಪಿಂಚಣಿ ಪಡೆಯುತ್ತಿದ್ದಲ್ಲಿ ಅವರಿಗೆ 15,000 ರೂಪಾಯಿ ಹಣವನ್ನು ನೀಡಲಾಗುತ್ತದೆ.
ಬೆಳ್ಳಂಬೆಳಿಗ್ಗೆ ಬಂತು ಶಾಕಿಂಗ್ ನ್ಯೂಸ್.!! ಇನ್ಮುಂದೆ ಇಂತವರಿಗಿಲ್ಲ ಬಿಪಿಎಲ್ ಕಾರ್ಡ್
4. ಬಡ್ಡಿ ಆದಾಯದ ಮೇಲೆ ವಿನಾಯಿತಿ:
ಆದಾಯ ತೆರಿಗೆ ಕಾಯ್ದೆಯಡಿ ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲೆ ಹೆಚ್ಚಿನ ವಿನಾಯಿತಿ ನೀಡುತ್ತಿದ್ದು, ಇದರಿಂದಾಗಿ ಹಿರಿಯ ನಾಗರಿಕರು ವಾರ್ಷಿಕವಾಗಿ ಬಡ್ಡಿ ಆದಾಯದ ಮೇಲೆ ರೂಪಾಯಿ 50,000ಗಳವರೆಗೂ ಪ್ರಯೋಜನ ಪಡೆಯಬಹುದು.
5. ಆರೋಗ್ಯ ವಿಮೆ ಮೇಲಿನ ರಿಯಾಯಿತಿ:
ಸರ್ಕಾರ ನೀಡುತ್ತಿರುವ ವಿನಾಯಿತಿಗಳಲ್ಲಿ ಹಿರಿಯ ನಾಗರಿಕರ ಆರೋಗ್ಯದ ಕಡೆಗೂ ಹೆಚ್ಚಿನ ಗಮನಹರಿಸಿದ್ದು, ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80 ಸಿ ಅಡಿಯಲ್ಲಿ ಬರೋಬ್ಬರಿ ಐವತ್ತು ಸಾವಿರ ರೂಪಾಯಿವರೆಗೆ ಆರೋಗ್ಯ ವಿಮೆಗಾಗಿ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತಿದೆ.
6. ಗಂಭೀರ ಅನಾರೋಗ್ಯದ ಚಿಕಿತ್ಸೆಗಾಗಿ ಒಂದು ಲಕ್ಷ ವಿನಾಯಿತಿ:
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80DD ಯಲ್ಲಿ ವಿನಾಯಿತಿಗಳಲ್ಲಿ ಹಿರಿಯ ನಾಗರಿಕರ ಗಂಭೀರವಾದ ಅನಾರೋಗ್ಯದ ಚಿಕಿತ್ಸೆಗೆ ಬೇಕಾಗುವಂತಹ ೧ ಲಕ್ಷ ಹಣವನ್ನು ಕಡಿತಗೊಳಿಸಲಾಗುತ್ತದೆ ಎಂಬುದನ್ನು ನಮೂದಿಸಲಾಗಿದೆ.
7. ಮುಂಗಡ ತೆರಿಗೆ ಪಾವತಿ ಕಡ್ಡಾಯವಿಲ್ಲ:
ಯಾವುದೇ ಮೂಲ ಆದಾಯವಿಲ್ಲದೆ ಅಥವಾ ವ್ಯಾಪಾರ ವೃತ್ತಿಯಲ್ಲಿ ತೊಡಗಿಕೊಂಡಿರದ ಹಿರಿಯ ನಾಗರಿಕರು ಇನ್ನು ಮುಂದೆ ಮುಂಗಡವಾಗಿ ತೆರಿಗೆ ಪಾವತಿ ಮಾಡುವ ಅಗತ್ಯವಿರುವುದಿಲ್ಲ.
ಇತರೆ ವಿಷಯಗಳು:
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್.! ಬಂದೇ ಬಿಡ್ತು ಒಂದು ರಾಷ್ಟ್ರ-ಒಂದು ಪಡಿತರ ಚೀಟಿ
ಗೃಹಲಕ್ಷ್ಮಿಯರೇ ಹುಷಾರ್.!! ಇನ್ಮುಂದೆ ಹಣ ಬೇಕು ಅಂದ್ರೆ ಈ ಕೆಲಸ ಕಡ್ಡಾಯ