ಹಲೋ ಸ್ನೇಹಿತರೇ, 2024-25 ನೇ ಶೈಕ್ಷಣಿಕ ಸಾಲಿಗೆ ʻNMMSʼ ವಿದ್ಯಾರ್ಥಿ ವೇತನಕ್ಕಾಗಿ, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP) ತೆರೆಯಲಾಗಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಸಾಲಿನಲ್ಲಿ ಎನ್‌ಎಮ್‌ಎಮ್‌ಎಸ್ ವಿದ್ಯಾರ್ಥಿ ವೇತನಕ್ಕಾಗಿ National Scholarship Portal ನಲ್ಲಿ ಅರ್ಹತೆಯನ್ನು ಹೊಂದಿರುವ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನಂತೆ ವೇಳಾಪಟ್ಟಿಯನ್ನು ನಿಗಧಿವಾಗಿ ಪಡಿಸಿರುವುದಾಗಿ ಮೇಲಿನ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ.
ಪ್ರಮುಖ ದಿನಾಂಕಗಳು
ಪೋರ್ಟಲ್ ಆರಂಭ – 30-6-2024 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಹಾಗೂ ನವೀಕರಿಸಲು ಅಂತಿಮವಾಗಿ ದಿನಾಂಕ- 31-8-2024
ಶಾಲಾ ಮತ್ತು ಕಾಲೇಜು ಹಂತದಲ್ಲಿ INO ಗಳಿಂದ ಅರ್ಜಿ ಪರಿಶೀಲನೆಗೆ ಅಂತಿಮವಾಗಿ ದಿನಾಂಕ- 15-9-2024
ಜಿಲ್ಲಾ ಹಂತದಲ್ಲಿ ಹಾಗೂ ಡಿಎನ್‌ಓ ಗಳಿಂದ ಅರ್ಜಿಯನ್ನು ಪರಿಶೀಲನೆಗೆ ಅಂತಿಮವಾಗಿ ದಿನಾಂಕ- 30-9-2024
ಅನುಸರಿಸಬೇಕಾದ ಪ್ರಮುಖ ಅಂಶಗಳು :
2024-2025ನೇ ಸಾಲಿನಲ್ಲಿ Fresh ಹಾಗೂ Renewal ವಿದ್ಯಾರ್ಥಿಗಳು (NSP) ಯಲ್ಲಿ ಅರ್ಜಿಯನ್ನು ಸಲ್ಲಿಸಲು One Time Registration ಕಡ್ಡಾಯವಾಗಿರುತ್ತದೆ.
One Time Registration (OTR) ಪ್ರತಿ ವಿದ್ಯಾರ್ಥಿಗೂ ನೀಡಲಾಗುವ ಒಂದು ಅನನ್ಯವಾದ ಸಂಖ್ಯೆಯಾಗಿದ್ದು, ಇದು ವಿದ್ಯಾರ್ಥಿಯ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ (NSP)ನಲ್ಲಿ ಅರ್ಜಿಯನ್ನು ಸಲ್ಲಿಸಲು ಅನ್ವಯವಾಗುತ್ತದೆ.
ಎನ್‌ಎಮ್‌ಎಮ್‌ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ Renewal ವಿದ್ಯಾರ್ಥಿಗಳಿಗೆ NSP ನಲ್ಲಿ ನೊಂದಾಯಿತ ಮೊಬೈಲ್ ಗೆ SMS ಮೂಲಕವಾಗಿ ಕಳುಹಿಸಲಾಗುತ್ತಿದೆ.
Fresh ವಿದ್ಯಾರ್ಥಿಗಳಿಗೆ ಎಸ್‌ಎಮ್‌ಎಸ್ ಮೂಲಕವಾಗಿ Reference ID ಅಥವಾ ಒಟಿಆರ್ ಸಂಖ್ಯೆಯನ್ನು ಕಳುಹಿಸಲಾಗುವುದಿಲ್ಲ. ಆದ್ದರಿಂದ NSP ನಲ್ಲಿ ಮೊದಲ ಸಲ ಅರ್ಜಿ ಸಲ್ಲಿಸುತ್ತಿರುವ National Scholarship Portal 2 Student Login ಲಭ್ಯವಿರುವ “Know your OTR” ಎಂಬ ಆಯ್ಕೆಯನ್ನು ಬಳಸಿ OTR ಅಥವಾ ರೆಫೆರನ್ಸ್ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಮದುವೆಯಾಗುವವರಿಗೆ ಸರ್ಕಾರದಿಂದ ಬಂಪರ್ ಸುದ್ದಿ! 2.50 ಲಕ್ಷ ರೂ. ಪ್ರೋತ್ಸಾಹ ಧನ
2024-25 ನೇ ಸಾಲಿನಲ್ಲಿ ಎನ್‌ಎಸ್‌ಪಿ ನಲ್ಲಿ ಅರ್ಜಿ ಸಲ್ಲಿಸಲು Face Authentication ಕಡ್ಡಾಯವಾಗಿದ್ದು, ಆಧಾರ್ ನಲ್ಲಿರುವ ಮಾಹಿತಿಗಳನ್ನು ಸರಿಪಡಿಸುವುದರೊಂದಿಗೆ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ update ಮಾಡಿಸುವುದು.
ಅಗತ್ಯ ದಾಖಲೆಗಳು
ಸಕ್ರಿಯ ಮೊಬೈಲ್ ಸಂಖ್ಯೆ.
ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ.
ವಿದ್ಯಾರ್ಥಿಯ ಆಧಾರ್ ಸಂಖ್ಯೆ.
ಅಗತ್ಯವಿರುವ ದಾಖಲೆಗಳು:
ಸಕ್ರಿಯ ಮೊಬೈಲ್ ಸಂಖ್ಯೆ
ಪೋಷಕರ ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ
ವಿದ್ಯಾರ್ಥಿಯು ಆಧಾರ್ ಸಂಖ್ಯೆಗಾಗಿ ಸಲ್ಲಿಸಿದ ಅರ್ಜಿಯ EID ಸಂಖ್ಯೆ.
ಪೋಷಕರ ಆಧಾರ್ ಸಂಖ್ಯೆ.
ಇತರೆ ವಿಷಯಗಳು:
ಉದ್ಯೋಗಿಗಳಿಗೆ ಬಂಪರ್ ಆಫರ್: ಸೆಪ್ಟೆಂಬರ್‌ನಲ್ಲಿ ನೌಕರರ ಸಂಬಳ ಹೆಚ್ಚಳ ಘೋಷಣೆ!
ಗ್ರಾಮೀಣ ಭಾಗದ ಮಕ್ಕಳಿಗೆ ಗುಡ್ ನ್ಯೂಸ್.!! ಈ ಸ್ಕೀಮ್ ನಿಂದ ನಿಮ್ಮ ಕೈ ಸೇರಲಿದೆ 6000 ರೂ.