ಪ್ಯಾನ್‌ ಕಾರ್ಡ್‌ ಇದ್ದವರೆ ಹುಷಾರ್.!!‌ ಸರ್ಕಾರದಿಂದ ಬಂತು ಖಡಕ್‌ ವಾರ್ನಿಂಗ್

ಹಲೋ ಸ್ನೇಹಿತರೇ, ಭಾರತ ಸರ್ಕಾರವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆಯು ಈಗಾಗಲೇ ಅವಧಿ ಮೀರಿದೆ. ರೂ.1,000 ದಂಡದೊಂದಿಗೆ ಪ್ಯಾನ್ ಮತ್ತು ಆಧಾರ್ ನ್ನು ಲಿಂಕ್ ಮಾಡುವ ಆಯ್ಕೆ ಇದೆ. ಇದಕ್ಕಾಗಿ ಕೊನೆಯ ದಿನಾಂಕವನ್ನು ಮೇ 31, 2024 ಎಂದು ನಿಗದಿಪಡಿಸಲಾಗಿದೆ.

Pan Aadhaar Link

ಈ ಗಡುವಿನ ನಂತರ, ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸದೇ ಇರಬಹುದು. ಹೆಚ್ಚುವರಿ ತೆರಿಗೆ (ಟಿಡಿಎಸ್) ಪಾವತಿಸಬೇಕಾಗಬಹುದು. ಆದಾಯ ತೆರಿಗೆ ಇಲಾಖೆ ಮಂಗಳವಾರ ತೆರಿಗೆದಾರರಿಗೆ ಈ ಕುರಿತು ನೆನಪಿಸಿದೆ.

ಮೇ ಕೊನೆಯೊಳಗೆ ನಿಮ್ಮ ಪ್ಯಾನ್ ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ರೆ, ಪ್ಯಾನ್ ನಿಷ್ಕ್ರಿಯವಾಗುತ್ತದೆ. ಆಗ ಮಾತ್ರ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 206AA, 206CC ಅಡಿಯಲ್ಲಿ ಹೆಚ್ಚಿನ ತೆರಿಗೆ ಕಡಿತ/ತೆರಿಗೆ ಸಂಗ್ರಹವು ಮಾರ್ಚ್ 31, 2024 ರ ಮೊದಲು ಮಾಡಿದ ವಹಿವಾಟುಗಳ ಮೇಲೆ ನಡೆಯುವುದಿಲ್ಲ. ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ

ಪ್ಯಾನ್-ಆಧಾರ್ ಲಿಂಕ್ ಎಂದರೇನು?

ಪ್ಯಾನ್ ಕಾರ್ಡ್ ಭಾರತದಲ್ಲಿ ತೆರಿಗೆದಾರರಿಗೆ ಐಟಿ ಇಲಾಖೆಯಿಂದ ನೀಡಲಾದ 10 ಅಂಕೆಗಳ ಸಂಖ್ಯೆಯಾಗಿದೆ. ಆಧಾರ್ ಭಾರತೀಯ ನಿವಾಸಿಗಳಿಗೆ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡುವ ವಿಶಿಷ್ಟ 12-ಅಂಕಿಯ ಗುರುತಿನ ಸಂಖ್ಯೆಯಾಗಿದೆ.

ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡುವುದರಿಂದ ತೆರಿಗೆ ಸಲ್ಲಿಸುವಿಕೆಯನ್ನು ಸುಲಭಗೊಳಿಸುತ್ತದೆ, ನಕಲಿ ಪ್ಯಾನ್ ಕಾರ್ಡ್‌ಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಸುಧಾರಿಸುತ್ತದೆ.

ಪ್ಯಾನ್-ಆಧಾರ್ ಲಿಂಕ್ ಮಾಡುವುದು ಏಕೆ ಮುಖ್ಯ?

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಪ್ಯಾನ್-ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಕೊನೆಯ ದಿನಾಂಕದೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದವರು ದಂಡವನ್ನು ಪಾವತಿಸಬೇಕಾಗುತ್ತದೆ..

ಮುಂದಿನ ತಿಂಗಳು 12 ದಿನಗಳವರೆಗೆ ಬ್ಯಾಂಕ್ ಬಂದ್!

ಇದಲ್ಲದೆ, ಅವರ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ನಿಷ್ಕ್ರಿಯ ಪ್ಯಾನ್ ಕಾರ್ಡ್ ಐಟಿಆರ್ ಸಲ್ಲಿಸುವಲ್ಲಿ ತೊಂದರೆ ಉಂಟುಮಾಡುತ್ತದೆ. ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲಿ ತೊಂದರೆಗಳು ಉಂಟಾಗುತ್ತವೆ. ಹೂಡಿಕೆಯಿಂದ ಲಾಭ ಹಾಗೂ ಬಡ್ಡಿಯಂತಹ ಆದಾಯದ ಮೇಲೆ ಹೆಚ್ಚಿನಾದ TDS ಅನ್ನು ಕಡಿತಗೊಳಿಸಲಾಗುತ್ತದೆ.

* ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ?

ಆನ್ಲೈನ್ 

ಐಟಿ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ https://www.incometax.gov.in/iec/foportal/ ವೆಬ್‌ಪುಟದ ‘ಕ್ವಿಕ್ ಲಿಂಕ್‌ಗಳು’ ವಿಭಾಗದಲ್ಲಿ ‘ಲಿಂಕ್ ಆಧಾರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು ಮುಂತಾದ ಇತರ ಅಗತ್ಯ ವಿವರಗಳನ್ನು ನಮೂದಿಸಬೇಕು. ಅಷ್ಟೆ, ಲಿಂಕ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ

SMS

ಮೊಬೈಲ್ ಸಾಧನದಲ್ಲಿ 567678 ಅಥವಾ 56161 ಗೆ ಸಂದೇಶ ಕಳುಹಿಸಿ. SMS ಸ್ವರೂಪವನ್ನು ನೋಡಿದ್ರೆ UIDPAN (10 ಅಂಕಿಯ ಪ್ಯಾನ್ ಕಾರ್ಡ್ ಸಂಖ್ಯೆ), 12 ಅಂಕಿಗಳ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಸ್ಪೇಸ್ ನೀಡಬೇಕು. ಉದಾಹರಣೆ: UIDPAN 1234567890 123456789012. ಹಾಗಾಗಿಯೇ ಮಾಡಿದ ಅನಂತರ, ಪ್ಯಾನ್-ಆಧಾರ್ ಲಿಂಕ್ ಸ್ಥಿತಿಯನ್ನು ತಿಳಿಸುವ SMS ನ್ನು ನೀವು ಸ್ವೀಕರಿಸುತ್ತೀರಿ. ಹುಟ್ಟಿದ ದಿನಾಂಕವನ್ನು ಹೊಂದಾಣಿಕೆಯಾದರೆ ಮಾತ್ರ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಲಾಗುತ್ತದೆ.

ಆಫ್‌ಲೈನ್

ತೆರಿಗೆದಾರರು ಪ್ಯಾನ್ ಸೇವಾ ಪೂರೈಕೆದಾರರು ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದು.

ಈಗಾಗಲೇ ಲಿಂಕ್ ಆಗಿದೆಯೇ ಎಂದು ತಿಳಿಯುವುದು ಹೇಗೆ?

ಮೊದಲು ಐಟಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://www.incometax.gov.in/iec/foportal/ ಗೆ ಹೋಗಿ . ‘ಕ್ವಿಕ್ ಲಿಂಕ್ಸ್’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ‘ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಆರಿಸಿ. ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ. ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಮೇಲೆ ಟ್ಯಾಪ್ ಮಾಡಿ. ಅದು ಆಧಾರ್-ಪ್ಯಾನ್ ಸ್ಟೇಟಸ್ ಪೇಜ್‌ನಲ್ಲಿ ಕಾಣಿಸುತ್ತದೆ.

ಇತರೆ ವಿಷಯಗಳು:

ಈ ಉದ್ಯೋಗಿಗಳ ಅಧಿಕಾರಾವಧಿ 1 ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ! ಜೂನ್‌ನಲ್ಲಿ 7ನೇ ವೇತನ ಆಯೋಗ ಜಾರಿ ಸಾಧ್ಯತೆ

Leave a Reply

Your email address will not be published. Required fields are marked *