ಕೆಎಸ್‌ಆರ್‌ಟಿಸಿ ಬಸ್‌ ಹೊಸ ನಿರ್ಧಾರ.!!! ಸರ್ಕಾರದಿಂದ ಬಂತು ಖಡಕ್‌ ವಾರ್ನಿಂಗ್

ಹಲೋ ಸ್ನೇಹಿತರೇ, ಸದ್ಯ ಎಲ್ಲಾ ಕಡೆ ಗ್ಯಾರಂಟಿಗಳು ಬಂದ್ ಆಗುತ್ತವೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ ಇದ್ರೆ ಬೆನ್ನಲ್ಲೇ ಸಾವಿರಾರು ಪ್ರಯಾಣಿಕರಿಗೆ KSRTC ಹೊಸ ನಿಯಮವನ್ನು ಹಂಚಿಕೊಂಡಿದೆ. ಈಗಂತೂ ಎಲ್ಲ ಕಡೆಯು ಡಿಜಿಟಲ್ ಇಂಡಿಯಾ ಪರಿಕಲ್ಪನೆ ಬೇರು ಬಿಟ್ಟಿದೆ ಎನ್ನಬಹುದು. ಸಣ್ಣ ಪುಟ್ಟ ವಸ್ತುಗಳ ಖರೀದಿಯು ಮಾಡಿದರು ಗೂಗಲ್ ಪೇ ಮಾಡುತ್ತಿದ್ದವರಿಗೆ ರೈಲ್ವೇ, ಟಿಕೆಟ್ ಮತ್ತು ಬಸ್ ,ಫ್ಲೈಟ್ ಬುಕ್ಕಿಂಗ್ ಸಹ ಆನ್ಲೈನ್ ನಲ್ಲಿ ಮಾಡಬಹುದು.

Payment of ticket fares to go digital on KSRTC buses

ಹೀಗಾಗಿ ನಗದು ರಹಿತ ಆನ್ಲೈನ್ ವ್ಯವಹಾರ ಎಲ್ಲ ಕಡೆ ಸಾಮಾನ್ಯವಾಗಿಬಿಟ್ಟಿದೆ. ಇದೀಗ KSRTC ಬಸ್ ನಲ್ಲಿಯೂ ಹೊಸತೊಂದು ಪರಿಕಲ್ಪನೆ ಜಾರಿಯಾಗಲಿದ್ದು ಇದರಿಂದ ಪ್ರಯಾಣಿಕರಿಗೆ ಅನೇಕ ತರನಾದ ಪ್ರಯೋಜನೆ ಸಿಗುತ್ತದೆ ಎಂದು ಹೇಳಬಹುದು.

ಕೆಲವೊಂದು ಸರಕಾರಿ ಮತ್ತು ಖಾಸಗಿ ಬಸ್ ನಲ್ಲಿ ಇತ್ತೀಚೆಗಷ್ಟೇ ಡಿಜಿಟಲ್ ಪೇ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರುವುದನ್ನು ನಾವು ಕಂಡಿರುತ್ತೇವೆ. ಈಗ ಅದ್ರ ಬೆನ್ನಲ್ಲೆ ಬಸ್ ಪಾಸ್ ವ್ಯವಸ್ಥೆಯನ್ನು ಸುಗಮಗೊಳಿಸಲು ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಡಿಜಿಟಲ್ ಪೇ ಮತ್ತು ನೂತನ ಬಸ್ ಪಾಸ್ ಆ್ಯಪ್ ಅನ್ನು ಬಿಡುಗಡೆ ಆಗುತ್ತಿದೆ. ಇದರ ಸಹಾಯದಿಂದ ಬಸ್ ಪಾಸ್ ಅನ್ನು ಸುಲಭಕ್ಕೆ ನವೀಕರಣ ಮಾಡಬಹುದು ಅದ್ರ ಜೊತೆಗೆ ಬಸ್ ಪಾಸ್ ಮತ್ತು ಟಿಕೆಟ್ ಕಳೆದು ಹೋದರು ಚಿಂತಿಸುವ ಅಗತ್ಯ ಬೀಳದು ಈ ಆ್ಯಪ್ ನಿಮಗೆ ಶೀಘ್ರವಾಗಿ ಪರಿಹಾರ ನೀಡುತ್ತದೆ ಎನ್ನಬಹುದು. ಈ ಬಗ್ಗೆ KSRTC ನಿಗಮದಿಂದ ಕೆಲವು ಉಪಯುಕ್ತ ಮಾಹಿತಿ ಹಂಚಿಕೊಳ್ಳಲಾಗಿದ್ದು ಪೂರ್ತಿ ಮಾಹಿತಿ ಇಲ್ಲಿದೆ.

UPI ವ್ಯವಸ್ಥೆಗೆ ಬೆಂಬಲ
ಬಹುತೇಕ ಕಡೆ UPI ವ್ಯವಹಾರ ಸಾಗುತ್ತಿದ್ದಂತೆ ಸರಕಾರಿ ಬಸ್ ನಲ್ಲಿ ಕೂಡ ಡಿಜಿಟಲ್ ಪೇ ಗೆ ಅಧಿಕ ಬೆಂಬಲ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇತ್ತೀಚೆಗೆ ಒಂದು ವಿಚಾರವನ್ನು ಪ್ರಸ್ತಾಪಿಸಿದ್ದು ಜೂನ್ 25ರ ಬಳಿಕ ಕೆಎಸ್‌ಆರ್‌ಟಿಸಿ ಪ್ರಯಾಣಿಕರು ಡೆಬಿಟ್ ಹಾಗೂ ಕ್ರೆಡಿಟ್ ಹಾಗೂ UPI ಪೇಮೆಂಟ್ ಮಾಡಬಹುದು ಎಂದು ಸೂಚನೆಯನ್ನು ನೀಡಿದೆ. ಹಾಗಾಗಿಯೇ ಇನ್ಮುಂದೆ ಮುಂದೆ ಪ್ರಯಾಣಿಕರು ಚಿಲ್ಲರೆಯ ಹಣ ಇಲ್ಲ , ಹಣ ತರುವುದು ಮರೆತು ಬಿಟ್ಟೆವು ಎಂದು ಚಿಂತಿಸುವ ಅಗತ್ಯ ಇರಲಾರದು.

ಮುಂದು ಗೃಹಲಕ್ಷ್ಮಿ, ಅನ್ನಭಾಗ್ಯ ಹಣ ಬರಬೇಕಾದ್ರೆ ತಕ್ಷಣ ಈ ಕೆಲಸ ಮಾಡಿ!

ಸರ್ಕಾರದ 4 ಡಿಪೋದಲ್ಲಿ ಕೂಡ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನು ಪ್ರಾಯೋಗಿಕವಾಗಿ ಜಾರಿಗೆ ಬರಲಾಗುತ್ತಿದೆ. ಹಾಗಾಗಿಯೇ ಮೊದಲು ಬಸ್ ನ ನಿರ್ವಾಹಕರಿಗೆ ಈ ಬಗ್ಗೆ ತರಬೇತಿಯನ್ನು ನೀಡಿದ್ದ ಬಳಿಕ ಎಲ್ಲ ಸರಕಾರಿ ಬಸ್ ನಲ್ಲಿ ಜಾರಿಗೆ ಬರುವುದಾಗಿ ಸರಕಾರದ ಸಾರಿಗೆ ಇಲಾಖೆ ಈ ಬಗ್ಗೆ ಸುತ್ತೊಲೆ ಹೊರಡಿಸಿದೆ.

KSRTC ಯ MD ಆಗಿರುವ ಅನ್ಬು ಕುಮಾರ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಈಗಾಗಲೇ ಈ ಒಂದು ಪ್ರಕ್ರಿಯೆ ಪ್ರಾಯೋಗಿಕವಾಗಿ ಜಾರಿ ಆಗುತ್ತಿದೆ. ಹಾಗಾಗಿಯೇ ಮೊದಲ ಹಂತದಲ್ಲಿ 10,245 ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರವನ್ನು ಪ್ರತಿ ಸಾಧನಕ್ಕೆ ತಿಂಗಳಿಗೆ 645ರೂಪಾಯಿ ಹಾಗೆ ಬಾಡಿಗೆ ನೀಡಿ ಖರೀದಿಸುತ್ತಿದ್ದು ಇದು ಡಿಜಿಟಲ್ ವ್ಯವಸ್ಥೆ ಬೆಂಬಲಿಸಲಿದೆ. ಪ್ರಯಾಣಿಕರಿಗೆ ಚಿಲ್ಲರೆ ನೀಡುವ ಸಮಸ್ಯೆ ಕೂಡ ಇರಲಾರದು. ಈಗಾಗಲೇ 5ವರ್ಷಕ್ಕೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಖರೀದಿಗಾಗಿ ಒಪ್ಪಂದವು ಆಗಿದೆ.

ಈ ಒಂದು ETM ಒದಗಿಸುವ ಕಂಪೆನಿಯು ಬ್ಯಾಂಕೇಡ್ ಮತ್ತು ಇಂಟರ್ ಫೇಸ್ ಸಾಫ್ಟ್ ವೇರ್ ಅನ್ನು ಒದಗಿಸಲಿದೆ. ಹಾಗಾಗಿ ಟಿಕೆಟ್ ಅನ್ನು ಸುಲಭವಾಗಿ ಗೂಗಲ್ ಪೇ, ಫೋನ್ ಪೇ ಇತರ ಆ್ಯಪ್ ನ ಮೂಲಕ ಪಾವತಿ ಮಾಡಬಹುದು. ಆಗ ಟಿಕೆಟ್ ಅಗತ್ಯ ಇರಲಾರದು. ಟಿಕೆಟ್ ಕಳೆದು ಹೋಗಿದೆ ಎಂಬವ ಭಯ ಸಹ ಇರಲಾರದು. ಅದರಂತೆ ಬಸ್ ಪಾಸ್ ಅನ್ನು ಮಾಡಿದ್ದವರಿಗೆ ಸಹ ಸದ್ಯದಲ್ಲೆ ಹೊಸದಾದ ಆ್ಯಪ್ ಬಿಡುಗಡೆ ಆಗಲಿದ್ದು ಪಾಸ್ ಕಾರ್ಡ್ ಇಲ್ಲದೆ ಮೊಬೈಲ್ ನಲ್ಲೆ ಸ್ಕ್ಯಾನ್ ಮಾಡಿ ಸುಲಭವಾಗಿ ಪ್ರಯಾಣ ಮಾಡಬಹುದು. ಈ ಹೊಸ ಬಸ್ ಪಾಸ್ ನ ಆ್ಯಪ್ ಬಗ್ಗೆ ಸರ್ಕಾರವು ಮುಂದಿನ ದಿನದಲ್ಲಿ ಮಾಹಿತಿ ನೀಡುವುದಾಗಿ ಸಾರಿಗೆ ಇಲಾಖೆಯ ಪ್ರಕಟನೆ ತಿಳಿಸಿದೆ.

ಇತರೆ ವಿಷಯಗಳು:

ರಾಜ್ಯದಾದ್ಯಂತ ಭರ್ಜರಿ ಮಳೆ.!! ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ರೈಲ್ವೇ ಪ್ರಯಾಣಿಕರಿಗೆ ನ್ಯೂ ರೂಲ್ಸ್.!!‌ ಇನ್ನುಂದೆ ಈ ನಿಯಮ ಪಾಲನೆ ಕಡ್ಡಾಯ

Leave a Reply

Your email address will not be published. Required fields are marked *