ಜನಸಾಮಾನ್ಯರಿಗೆ ಬಿತ್ತು ಮತ್ತೊಂದು ಬರೆ.! ಪೆಟ್ರೋಲ್‌ & ಡೀಸೆಲ್ ದರ ಭಾರೀ ಏರಿಕೆ

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆಯನ್ನು ಪೆಟ್ರೋಲ್ ಮೇಲೆ ಶೇ.25.92ರಿಂದ ಶೇ.29.84ಕ್ಕೆ & ಡೀಸೆಲ್ ಮೇಲೆ ಶೇ.14.3ರಿಂದ ಶೇ.18.4ಕ್ಕೆ ಏರಿಸಲಾಗಿದೆ.

petrol diesel news

ರಾಜ್ಯದ ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ.

ಪೆಟ್ರೋಲ್ & ಡೀಸೆಲ್‌ನ ಮೇಲಿನ ಸೆಸ್ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ಸರ್ಕಾರವು ಶನಿವಾರ(ಜೂನ್‌ 15) ಆದೇಶ ಹೊರಡಿಸಲಾಗಿದೆ. ಅದರಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಸರಾಸರಿ 3 ರೂ. & ಡೀಸೆಲ್ ಬೆಲೆಯಲ್ಲಿ 3.5 ರೂ. ಹೆಚ್ಚಳ ಮಾಡಲಾಗಿದೆ.

ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ, ಕರ್ನಾಟಕ ಮಾರಾಟ ತೆರಿಗೆಯನ್ನು ಪೆಟ್ರೋಲ್ ಮೇಲೆ ಶೇ.25.92ರಿಂದ ಶೇ.29.84ಕ್ಕೆ & ಡೀಸೆಲ್ ಮೇಲೆ ಶೇ.14.3ರಿಂದ ಶೇ.18.4ಕ್ಕೆ ಹೆಚ್ಚಿಸಲಾಗಿದೆ.

ಈ ಸರ್ಕಾರಿ ಯೋಜನೆಯಲ್ಲಿ ನಿಮಗೆ ದುಪ್ಪಟ್ಟು ಲಾಭ! 10 ಲಕ್ಷ ಆಗುತ್ತೆ 20 ಲಕ್ಷ

ಇದು ತಕ್ಷಣವೇ ಜಾರಿಗೆ ಬರಲಿದೆ ಎಂದು ರಾಜ್ಯ ಹಣಕಾಸು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಇದೀಗ ಪೆಟ್ರೋಲ್‌ ದರ 103.84 ರೂ. ಡೀಸಲ್‌ ದರ 89.43 ರೂ.ಗೆ ತಲುಪಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದರ ಏರಿಕೆಗೆ ಮುನ್ನ ಪ್ರತಿ ಲೀಟರ್ ಪೆಟ್ರೋಲ್ 99.84 ರೂ.ನಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ 85.93 ರೂ.ನಂತೆ ಮಾರಾಟವಾಗುತ್ತಿತ್ತು. ಇದೀಗ ಪೆಟ್ರೋಲ್‌ ದರಲ್ಲಿ 3 ರೂ. ಏರಿಕೆ ಮಾಡಿದ್ದರೆ, ಡೀಸೆಲ್‌ ದರದಲ್ಲಿ 3.5 ರೂ. ಹೆಚ್ಚಿಸಲಾಗಿದೆ. 

ಇತರೆ ವಿಷಯಗಳು:

ಹೆಂಗಸರಿಗೆ ಕೇಂದ್ರದ ಲಾಟ್ರಿ.!! ಈ ದಾಖಲೆ ಇದ್ದವರ ಮನೆ ಸೇರಲಿದೆ ಉಚಿತ ಹೊಲಿಗೆ ಯಂತ್ರ

ಉಚಿತ ಗ್ಯಾಸ್ ಸೌಲಭ್ಯ ಪಡೆಯಲು ಮರು ಅವಕಾಶ! ಈ ರೀತಿಯಾಗಿ ಅಪ್ಲೇ ಮಾಡಿ

Leave a Reply

Your email address will not be published. Required fields are marked *