ಕಾರ್ಮಿಕರಿಗೆ ಮತ್ತೊಂದು ಪೆನ್ಶನ್ ಸ್ಕೀಮ್!‌ ಪ್ರತಿ ತಿಂಗಳಿಗೆ ಸಿಗತ್ತೆ ₹3000 ಪಿಂಚಣಿ

ಹಲೋ ಸ್ನೇಹಿತರೇ, ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಜನರ ಬದುಕಿಗೆ ಯಾವುದೇ ಗ್ಯಾರೆಂಟಿ ಇಲ್ಲ. ಅವರು ಅಂದು ದುಡಿದು ಅಂದಿನ ಬದುಕನ್ನು ಸಾಗಿಸಬೇಕು. ಅದರಲ್ಲೂ ನಿವೃತ್ತಿ ಹೊಂದಿದ ನಂತರದ ಸಮಯದಲ್ಲಿ ಬದುಕು ಸಾಗಿಸುವುದೇ ಕಷ್ಟಕರವಾಗಿ ಬಿಡುತ್ತದೆ. ಸರ್ಕಾರಿ ಕೆಲಸ ಮಾಡುವವರಿಗೇನೋ ನಿವೃತ್ತಿ ಬಳಿಕ ಸರ್ಕಾರದಿಂದಲೇ ಪಿಂಚಣಿ ಸಿಗುತ್ತದೆ. ಆದರೆ ಮಧ್ಯಮವರ್ಗಕ್ಕೆ, ಕಾರ್ಮಿಕ ವರ್ಗಕ್ಕೆ ಸೇರಿದ ಜನರ ಕಥೆ ಹಾಗಿರುವುದಿಲ್ಲ. ಅವರಿಗೆ ಸರ್ಕಾರದಿಂದ ಯಾವುದೇ ಪಿಂಚಣಿ ಸೌಲಭ್ಯ ಸಿಗುವುದಿಲ್ಲ.

pm shram yogi mandhan yojana

ಆದರೆ ಅಸಂಘಟಿತ ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಂದು ಸಂತೋಷದ ಸುದ್ದಿ ಇದೆ, ಅವರಿಗಾಗಿ ಕೇಂದ್ರ ಸರ್ಕಾರದಿಂದ ಒಂದು ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆ ಯೋಜನೆಯಲ್ಲಿ ಅತೀ ಕಡಿಮೆ ಹಣವನ್ನು ಉಳಿತಾಯ ಮಾಡುತ್ತಾ ಬಂದರೆ, 60 ವರ್ಷಗಳ ನಂತರ ಅವರು ಪ್ರತಿ ತಿಂಗಳು ಪೆನ್ಶನ್ ರೂಪದಲ್ಲಿ ಹಣ ಪಡೆಯಬಹುದು. ಈ ಯೋಜನೆಯ ಹೆಸರು ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆ ಆಗಿದೆ.

ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆ:

ಪಿಎಮ್ ಶ್ರಮಯೋಗಿ ಮನ್ ಧನ್ ಯೋಜನೆಯಲ್ಲಿ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದವರು ಹೂಡಿಕೆ ಮಾಡುತ್ತಾ ಬರಬಹುದು. ಈ ಮೂಲಕ 60 ವರ್ಷಗಳಾದ ಮೇಲೆ ನೆಮ್ಮದಿಯಿಂದ ಜೀವನ ಸಾಗಿಸಬಹುದು. ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ? ಯಾವ ವಯಸ್ಸಿನಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಯಾರೆಲ್ಲಾ ಈ ಯೋಜನೆಯ ಸೌಲಭ್ಯ ಪಡೆಯಬಹುದು? ಎಲ್ಲವನ್ನು ತಿಳಿಸುತ್ತೇವೆ ನೋಡಿ.

ಪಿಎಂ SYM ಯೋಜನೆಯ ಪ್ರಯೋಜನೆಗಳು:

18 ವರ್ಷ ತುಂಬಿದ ವ್ಯಕ್ತಿ ಅಸಂಘಟಿತ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದರೆ, ಆ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. 18ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡುತ್ತಾನೆ ಎಂದರೆ, 60 ವರ್ಷಗಳಾಗುವ ವರೆಗು ಪ್ರತಿ ತಿಂಗಳು 55 ರೂಪಾಯಿಗಳನ್ನು ಪಾವತಿ ಮಾಡುತ್ತಾ ಬರಬೇಕು.

ರಾಜ್ಯದ ಜನತೆಗೆ ಬ್ರೇಕಿಂಗ್‌ ನ್ಯೂಸ್.!!‌ ಮತ್ತೆ ಏರಿಕೆ ಕಂಡ ನೀರಿನ ದರ

ಇತ್ತ ಸರ್ಕಾರ ಅವರ ಹೆಸರಿನಲ್ಲಿ ಪ್ರತಿ ತಿಂಗಳು ಕೂಡ ಅವರು ಹೂಡಿಕೆ ಮಾಡಿದಷ್ಟೇ ಮೊತ್ತವನ್ನು ಇಡುತ್ತದೆ. ಅಂದರೆ ತಿಂಗಳಿಗೆ 110 ರೂಪಾಯಿ ಆ ವ್ಯಕ್ತಿಯ ಹೆಸರಿನಲ್ಲಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 19ನೇ ವಯಸ್ಸಿನಲ್ಲಿ ಹೂಡಿಕೆ ಶುರು ಮಾಡಿದರೆ ಪ್ರತಿ ತಿಂಗಳು 58 ರೂಪಾಯಿ ಠೇವಣಿ ಇಡುತ್ತಾ ಬರಬೇಕು. 20ನೇ ವಯಸ್ಸಿನಲ್ಲಾದರೆ 61 ರೂಪಾಯಿ, ಹೀಗೆ ಹೆಚ್ಚು ವಯಸ್ಸಿನವರು ಹೆಚ್ಚು ಠೇವಣಿ ಇಡಬೇಕಾಗುತ್ತದೆ.

ಹೀಗೆ 40 ವರ್ಷದವರೆಗು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 30 ವರ್ಷದ ವ್ಯಕ್ತಿ ಹೂಡಿಕೆ ಶುರು ಮಾಡಿದರೆ, 30 ವರ್ಷಗಳ ಅವಧಿಯಲ್ಲಿ 37,800 ರೂಪಾಯಿ ಹೂಡಿಕೆ ಮಾಡಿರುತ್ತಾನೆ. ಇನ್ನು ಸರ್ಕಾರ ಕೂಡ ಆತನ ಅಕೌಂಟ್ ಗೆ ಅಷ್ಟೇ ಹಣ ನೀಡಲಿದೆ. ಈ ರೀತಿಯಾಗಿ ಪ್ರತಿ ತಿಂಗಳು 3000 ರೂಪಾಯಿಗಳನ್ನು ಪೆನ್ಶನ್ ರೂಪದಲ್ಲಿ ನೀಡಲಾಗುತ್ತದೆ.

ಪಿಎಮ್ SYM ಯೋಜನೆಗೆ ಅರ್ಹತೆ

  • 18 ರಿಂದ 40 ವರ್ಷಗಳ ಒಳಗಿರುವವರು ಅರ್ಜಿ ಸಲ್ಲಿಸಬಹುದು
  • ಇವರ ಆದಾಯ ತಿಂಗಳಿಗೆ ₹15,000 ಕ್ಕಿಂತ ಕಡಿಮೆ ಇರಬೇಕು
  • ಇವರು ಟ್ಯಾಕ್ಸ್ ಕಟ್ಟುವ ಹಾಗಿರಬಾರದು
  • ಇವರಿಗೆ ESI/PF/NPS ಯೋಜನೆಯ ಸೌಲಭ್ಯ ಇವರಿಗೆ ಇರಬಾರದು, ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿರಬಾರದು
  • 60 ವರ್ಷ ತುಂಬುವವರೆಗೂ ಪ್ರತಿ ತಿಂಗಳು ಠೇವಣಿ ಮೊತ್ತ ಪಾವತಿ ಮಾಡಬೇಕು
  • 60 ವರ್ಷಕ್ಕಿಂತ ಮೊದಲೇ ಈ ಯೋಜನೆಯನ್ನು ಹಿಂಪಡೆದರೇ, ನೀವು ಠೇವಣಿ ಇಟ್ಟಿರುವ ಮೊತ್ತಕ್ಕೆ ಮಾತ್ರ ಬಡ್ಡಿ ಸಿಗುತ್ತದೆ.

ಇತರೆ ವಿಷಯಗಳು:

ಕೃಷಿ ಸುದ್ದಿ.!! ಹಸು ಎಮ್ಮೆ ಸಾಕಿದವರು ಈ ರೀತಿ ಮಾಡಿ; ಕೈ ತುಂಬಾ ಹಣ ಪಡೆಯಿರಿ

ಅನ್ನದಾತರಿಗೆ ಸಂತಸ ತಂದ ಬ್ಯಾಂಕ್‌ ಸುದ್ದಿ.!! ಕೊನೆಗೂ ಕೇಂದ್ರದಿಂದ ಸಿಕ್ತು ಮನ್ನಣೆ

Leave a Reply

Your email address will not be published. Required fields are marked *