ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನವು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, 300-ಕ್ಕೂ ಹೆಚ್ಚು ರಾಜ್ಯ ವಿಶ್ವವಿದ್ಯಾಲಯಗಳು ಹಾಗೂ ಅದರ ಸಂಯೋಜಿತ ಕಾಲೇಜುಗಳೊಂದಿಗೆ ಕೆಲಸ ಮಾಡುವ ಗುರಿಯನ್ನು ಹೊಂದಿದೆ. 2013 ರಲ್ಲಿ ಪ್ರಾರಂಭವಾದ PM-USHA ಅರ್ಹ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯತಂತ್ರದ ಹಣವನ್ನು ನೀಡುವ ಗುರಿಯನ್ನು ಹೊಂದಿದೆ.
12ನೇ ತರಗತಿ / ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ & 3 ವರ್ಷಗಳ ಸ್ನಾತಕ ಪದವಿ ಅಧ್ಯಯನ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಎಂ ಉಷಾ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಈ ಸ್ಕಾಲರ್ಶಿಪ್ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಕರೆದಿದೆ.
ಸ್ಕಾಲರ್ಶಿಪ್ ಹೆಸರು
PM ಉಷಾ ವಿದ್ಯಾರ್ಥಿವೇತನ
ವಿದ್ಯಾರ್ಥಿವೇತನ ಸೌಲಭ್ಯ
Rs.12,000-20,000 ಆರ್ಥಿಕ ನೆರವು
ಕೊನೆಯ ದಿನಾಂಕ
ಆಗಸ್ಟ್ 31, 2024
ವೆಬ್ ವಿಳಾಸ
www.scholarship.gov.in
ಅರ್ಹತೆ
ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವವರು. ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದವರು.
ಆರ್ಥಿಕ ನೆರವು ನೀಡುವ ಸಂಸ್ಥೆ
PM ಉಷಾ ಹೆಸರಿನಲ್ಲಿ 2024-25 ನೇ ಸಾಲಿನಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಈಗ ನಿಗದಿತವಾದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧಿಕೃತವಾದ ಸ್ಕಾಲರ್ಶಿಪ್ ಪೋರ್ಟಲ್ www.scholarship.gov.in ನ ಮೂಲಕವೇ ನ್ಯಾಷನಲ್ ಇ ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು, ಫ್ರೆಶ್ ಬ್ಯಾಚ್ ಮತ್ತು ನವೀಕೃತ ಬ್ಯಾಚ್ನ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 31, 2024 ರವರೆಗೆ ಅವಕಾಶವನ್ನು ನೀಡಲಾಗಿದೆ.
ಮದುವೆಯಾಗುವವರಿಗೆ ಸಿಕ್ತು ಗುಡ್ನ್ಯೂಸ್.!! ಕೇಂದ್ರ ಸರ್ಕಾರದಿಂದ 2.50 ಲಕ್ಷ ಪ್ರೋತ್ಸಾಹ ಧನ
ಪಿಎಂ ಉಷಾ ಸ್ಕಾಲರ್ಶಿಪ್ ಸೌಲಭ್ಯಗಳೇನು?
PM ಉಷಾ ಸ್ಕಾಲರ್ಶಿಪ್ಗೆ ಅರ್ಜಿಯನ್ನು ಸಲ್ಲಿಸಿದ ವಿದ್ಯಾರ್ಥಿಯ ಆಯ್ಕೆಯಾದಲ್ಲಿ ಮೊದಲನೇಯ ವರ್ಷ ತಲಾ 12 ರೂಪಾಯಿ ಪಡೆಯಲಿದ್ದು, ಮತ್ತು ಕೊನೆಯ ಎರಡು ಮತ್ತು ಮೂರನೆಯ ವರ್ಷಗಳು ತಲಾ 20 ಸಾವಿರ ರೂಪಾಯಿಯನ್ನು ಆರ್ಥಿಕ ನೆರವು ನೀಡಲಿದ್ದಾರೆ.
ಹೆಚ್ಚಿನ ಮಾಹಿತಿ ರೂ.080-23311330.
ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- PM ಉಷಾ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಲು ವೆಬ್ ವಿಳಾಸ https://scholarships.gov.in/ ಕ್ಕೆ ಭೇಟಿ ನೀಡಿ.
- ತೆರೆದ ವೆಬ್ಸೈಟ್ನಲ್ಲಿ ‘Students’ ಎಂದಿರುವಲ್ಲಿ ಕ್ಲಿಕ್ ಅನ್ನು ಮಾಡಿ.
- ನಂತರ ಮತ್ತೊಂದು ವೆಬ್ಪೇಜ್ ತೆರೆಯುತ್ತದೆ.
- ಈ ವೆಬ್ಪೇಜ್ನಲ್ಲಿ ‘Apply For Scholarship >> Login’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ಮತ್ತೊಂದು ವೆಬ್ಪುಟ ತೆರೆಯುತ್ತದೆ. ಇಲ್ಲಿ ‘Register’ ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ನೀಡಲಾಗಿರುವ ಸೂಚನೆಗಳನ್ನು ಓದಿಕೊಂಡು, ಕೇಳಲಾದ ಮಾಹಿತಿಗಳನ್ನು ನೀಡಿ ನಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ದ್ವಿತೀಯ ಪಿಯುಸಿ ಅಂಕಪಟ್ಟಿ, ಅಂಕಗಳು
- ಎಸ್ಎಸ್ಎಲ್ಸಿ ಅಂಕಪಟ್ಟಿ
- ಪದವಿ ವ್ಯಾಸಂಗಕ್ಕೆ ಸೇರಿದ ದಾಖಲೆ, ಮಾಹಿತಿ.
- ಇಮೇಲ್ ವಿಳಾಸ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
- ಇತರೆ ಮಾಹಿತಿಗಳು, ದಾಖಲೆಗಳು.
ಇತರೆ ವಿಷಯಗಳು :
ಯಜಮಾನಿಯರಿಗೆ ಬ್ರೇಕಿಂಗ್ ಅಪ್ಡೇಟ್.!! ಈ ವಾರ ಖಾತೆ ಸೇರಲಿದೆ 2 ತಿಂಗಳ ‘ಗೃಹಲಕ್ಷ್ಮಿ’ ಹಣ
ಸಾರ್ವಜನಿಕರೇ ಎಚ್ಚರ.!! `ಆಧಾರ್ ಕಾರ್ಡ್’ ಗೆ ಸಂಬಂಧಿಸಿದ ಈ ಕೆಲಸವನ್ನು ತಪ್ಪದೇ ಮಾಡಿ!