ಹಲೋ ಸ್ನೇಹಿತರೇ, ಗೃಹ ಬಳಕೆಯ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಇಕೆವೈಸಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಯಾಕೆ ಕಡ್ಡಾಯ ಮಾಡಲಾಗಿದೆ ಮತ್ತು ಮಾಡಿಸದಿದ್ದರೆ ಏನಾಗುವುದು ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
ಸದ್ಯಕ್ಕೆ ಸಬ್ಸಿಡಿ ಸಿಲಿಂಡರ್ ಸ್ಥಗಿತಗೊಂಡಿದ್ದರೂ, ಮುಂದಿನ ದಿನಗಳಲ್ಲಿ ಮತ್ತೆ ಶುರುವಾಗಲಿದೆ. ಆಗ ಸಿಲಿಂಡರ್ ಬೇಕು ಅಂದರೆ E-kyc ಮಾಡಿಸಿಕೊಳ್ಳುವುದು ಕಡ್ಡಾಯ. ಈ ಬಗ್ಗೆ ಗ್ಯಾಸ್ ಏಜೆನ್ಸಿಗಳು ಕಾರ್ಯಪ್ರವೃತ್ತರಾಗಿದ್ದು ಗ್ರಾಹಕರ ಮನೆ ಬಾಗಿಲಿಗೆ ಹೋಗಿ E-kyc ಮಾಡಿ ಕೊಡುತ್ತಿದ್ದಾರೆ. ಗೃಹ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಿದೆ.
ಗೃಹ ಬಳಕೆಯ ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು E-kyc ಮಾಡಿಸುವುದು ಕಡ್ಡಾಯವಾಗಿದ್ದು, ಮನೆ ಬಾಗಿಲಲ್ಲೇ E-kyc ಪಡೆಯುವ ಕಾರ್ಯ ಪ್ರಗತಿಯಲ್ಲಿದೆ.
ಸಬ್ಸಿಡಿ ಸಿಲಿಂಡರ್ ಪಡೆಯಬೇಕೆಂದರೆ E-kyc ಕಡ್ಡಾಯವಾಗಿದೆ. ಸದ್ಯ ಸಬ್ಸಿಡಿ ಸ್ಥಗಿತಗೊಂಡಿದ್ದರೂ, ಮುಂದಿನ ದಿನಗಳಲ್ಲಿಅದರ ಲಾಭ ಸಿಗಲಿದೆ. ಇದಕ್ಕಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ)ದ ಸೂಚನೆ ಮೇರೆಗೆ ಗ್ಯಾಸ್ ಏಜೆನ್ಸಿಗಳು ಮೇ-ಜೂನ್ ತಿಂಗಳಲ್ಲೇ ಕಾರ್ಯಪ್ರವೃತ್ತವಾಗಿದ್ದು, ಈಗಾಗಲೇ ಶೇ.30-32ರಷ್ಟು ಸಂಪರ್ಕದಾರರಿಂದ ಇಕೆವೈಸಿ ಮಾಡಿಸಿದ್ದಾರೆ.
ಈಗ ಗ್ಯಾಸ್ ಹೊತ್ತು ತರುವವರೇ ಮನೆ ಬಾಗಿಲಲ್ಲಿ ಉಳಿದ ಗ್ರಾಹಕರ ಮಾಹಿತಿ ದಾಖಲಿಸುತ್ತಿದ್ದಾರೆ. ಗ್ಯಾಸ್ ಏಜೆನ್ಸಿ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿಯೇ ಗ್ರಾಹಕರ ಕಣ್ಣಿನ ಚಹರೆ ಫೋಟೊ ತೆಗೆದು ಅಪ್‌ಲೋಡ್ ಮಾಡಿದ ನಂತರ ಗ್ರಾಹಕರ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ದಾಖಲಿಸಿದ ಬಳಿಕ ಇಕೆವೈಸಿ ಪೂರ್ಣಗೊಳ್ಳುತ್ತದೆ.
ಈ ಹಿಂದೆ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಸಿದ್ದರೂ ಗ್ರಾಹಕರ ಬೆರಳು ಗುರುತು ಮತ್ತು ಮುಖ ಚಹರೆಯನ್ನು ಮಾತ್ರ ಪರಿಗಣಿಸಿ ಇಕೆವೈಸಿ ಅಪ್‌ಡೇಟ್ ಮಾಡಬೇಕೆಂದು ಕೇಂದ್ರ ಸರಕಾರದ ಪೆಟ್ರೊಲಿಯಂ ಸಚಿವಾಲಯ, ತೈಲ ಕಂಪನಿಗಳಿಗೆ ಆದೇಶ ಮಾಡಿದೆ.
ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಸಂಪರ್ಕ ಪಡೆದಿರುವ ಗ್ರಾಹಕರಿಗೂ ಇಕೆವೈಸಿ ಅನ್ವಯವಾಗಲಿದೆ ಎನ್ನುತ್ತಾರೆ ಗ್ಯಾಸ್ ಏಜೆನ್ಸಿದಾರರು. ಇಕೆವೈಸಿಗಾಗಿ ಗ್ಯಾಸ್ ಏಜೆನ್ಸಿಗಳು ಶಿಬಿರ ಕೂಡ ಆಯೋಜಿಸುತ್ತಿವೆ.
ವಿದ್ಯಾರ್ಥಿಗಳ ಗಮನಕ್ಕೆ! ವರ್ಷಕ್ಕೆ ಬರೋಬ್ಬರಿ 1 ಲಕ್ಷ ವಿದ್ಯಾರ್ಥಿವೇತನ; ಕೂಡಲೇ ಅಪ್ಲೇ ಮಾಡಿ
ದುರ್ಬಳಕೆ ಪತ್ತೆಗೆ ಸಹಕಾರಿ
ವಾಣಿಜ್ಯ ಉದ್ದೇಶದ ಸಿಲಿಂಡರ್ ದರಕ್ಕಿಂತ ಗೃಹ ಬಳಕೆಯ ಸಿಲಿಂಡರ್ ದರ ಕಡಿಮೆ. ಗೃಹ ಬಳಕೆ ಉದ್ದೇಶಕ್ಕೆ ಕೊಡುವ ಹಲವು ಸಿಲಿಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಮಾಮೂಲಿಯಾಗಿದೆ. ಇಕೆವೈಸಿ ಮೂಲಕ ಇದಕ್ಕೆ ಕಡಿವಾಣ ಹಾಕಲು ಉದ್ದೇಶಿಸಲಾಗಿದೆ.
ವರ್ಗಾವಣೆಗೆ ಅವಕಾಶ
ಅನಿಲ ಸಂಪರ್ಕ ಪಡೆದವರು ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದರೂ, ಅವರ ಹೆಸರಿನಲ್ಲಿಅಡುಗೆ ಅನಿಲ ಸಿಲಿಂಡರ್ ವಿತರಣೆಯಾಗುತ್ತಿರುತ್ತದೆ. ಇಂತಹವರನ್ನು ಇಕೆವೈಸಿ ಮೂಲಕ ಪತ್ತೆ ಹಚ್ಚಲಾಗುವುದು. ವಾರಸುದಾರರು ಸಂಪರ್ಕವನ್ನು ತಮ್ಮ ಹೆಸರಿಗೆ ಬದಲಿಸಿಕೊಂಡು ಇಕೆವೈಸಿ ಮಾಡಿಸಿಕೊಳ್ಳಬೇಕಿರುತ್ತದೆ.
ಇಕೆವೈಸಿ ಮಾಡಲು ಸೂಚನೆ ಬಂದಿದೆ. ಈ ಸಂಬಂಧ ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಲಾಗಿದೆ. ಗ್ಯಾಸ್ ಏಜೆನ್ಸಿ ಕಚೇರಿಗಳಿಗೂ ಬಂದು ಇಕೆವೈಸಿ ಮಾಡಿಸಬಹುದು. ಆದರೆ ಹೆಚ್ಚಿನ ಮಂದಿ ಬಾರದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಯೇ ಮನೆಗಳಿಗೆ ತೆರಳಿ ಮಾಡಿಸುತ್ತಿದ್ದಾರೆ. ಅಲ್ಲಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ಏಜೆನ್ಸಿಯಲ್ಲಿ ಈಗಾಗಲೇ ಶೇ.31ರಷ್ಟು ಗ್ರಾಹಕರು ಇಕೆವೈಸಿ ಪೂರ್ಣಗೊಳಿಸಿದ್ದಾರೆ.
ಇತರೆ ವಿಷಯಗಳು:
ಮನೆಯಲ್ಲೇ ಕುಳಿತು ಹಣ ಸಂಪಾದಿಸಬೇಕಾ?? ಹಾಗಾದ್ರೆ ಒಂದು ಕ್ಲಿಕ್ ನಿಂದ ನಿಮ್ಮದಾಗಲಿದೆ 500 ರಿಂದ 1000 ರೂ.
ಹೆಂಗಸರಿಗೆ ಸರ್ಕಾರದ ಬಿಗ್ ಅಪ್ಡೇಟ್.!! ಇನ್ಮುಂದೆ ನಿಮಗೆ ಈ ಕ್ಷೇತ್ರದಲ್ಲಿ 50% ಮಿಸಲಾತಿ ಪಕ್ಕಾ