ಮಹಿಳೆಯರಿಗೆ ಕೇಂದ್ರದ ಆಫರ್.!!‌ ಪೋಸ್ಟ್‌ ಆಫೀಸ್‌ ಮುಂದೆ ಕ್ಯೂ ನಿಂತ ನಾರಿ ಮಣಿಯರು

ಹಲೋ ಸ್ನೇಹಿತರೇ, ಉಚಿತ ಭರವಸೆಗಳು, ಚುನಾವಣೆ ಸಮಯದಲ್ಲಿ ಪಕ್ಷಗಳು ನೀಡುವ ಆಶ್ವಾಸನೆಗಳು ಜನರನ್ನು ಗೊಂದಲಕ್ಕೆ ಸಿಲುಕಿಸಿವೆ. ಜನರ ಖಾತೆಗೆ ಸರ್ಕಾರ ಹಣ ಹಾಕಲಿದೆ ಎಂಬ ಮಾತು ನಂಬಿ ಈ ಹಿಂದೆ ಬ್ಯಾಂಕ್​ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿದ್ದ ಹಲವು ಘಟನೆಗಳು ನಡೆದಿವೆ.

Post Office

ಈಗ ರಾಜ್ಯದಲ್ಲೂ ಇಂತದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರದಲ್ಲಿ ಮಹಿಳೆಯರು ತಮ್ಮ ಕೆಲಸಗಳನ್ನು ಬಿಟ್ಟು ಅಂಚೆ ಕಚೇರಿ ಮುಂದೆ ನಿಂತು ಖಾತೆ ತೆರೆಯಲು ಮುಂದಾಗಿದ್ದಾರೆ.

ಕೇಂದ್ರದಿಂದ ಹಣ ಬರುತ್ತೆ ಎನ್ನುತ್ತಿರುವ ಮಹಿಳೆಯರು

ಮೋದಿ ಸರ್ಕಾರವು ಖಾತೆಗೆ 3 ಸಾವಿರ ರೂಪಾಯಿ ಹಣವನ್ನು ಹಾಕಲಿದೆ ಎಂಬ ಮಾತು ಎಲ್ಲಿಂದ ಸೃಷ್ಟಿಯಾಯ್ತೊ ಗೊತ್ತಿಲ್ಲ. ಆದ್ರೆ ಇದೇ ಮಾತು ನಂಬಿ ನೂರಾರು ಜನ ಅಂಚೆ ಕಚೇರಿ ಮುಂಭಾಗ ಸರತಿ ಸಾಲಿನಲ್ಲಿ ನಿಂತಿದ್ದಾರೆ. ದೊಡ್ಡಬಳ್ಳಾಪುರ ನಗರದ ಅಂಚೆ ಕಚೇರಿ ತೆರೆಯುವ ಮುನ್ನವೆ ಬೆಳ್ಳಂ ಬೆಳಗ್ಗೆ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕಳೆದ ಎರಡು ದಿನಗಳಿಂದ ನೂರಾರು ಜನ ಮಹಿಳೆಯರು ಅಂಚೆ ಕಚೇರಿಗೆ ಬರುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗುವ ಈ ಕ್ಯೂ ಸಂಜೆಯಾದರೂ ಕೂಡ ಹಾಗೆ ಇರುತ್ತಿದೆ.

ಸುಳ್ಳು ಮಾಹಿತಿ ಎಂದರೂ ಕೇಳದ ಜನ:

ಮಹಿಳೆಯರ ಮಾತು ಕೇಳಿದ ಕೆಲವರು ಇದು ಸುಳ್ಳು ಮಾಹಿತಿ ಅಂತ ಬುದ್ದಿ ಹೇಳಿದ್ದಾರೆ. ಆದ್ರೆ ಅವರ ಮಾತಿಗೆ ಕೇರ್ ಮಾಡದೆ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಲು ಮುಂದಾಗಿದ್ದಾರೆ. ಇನ್ನು ನೂರಾರು ಜನರು ಖಾತೆ ತೆರೆಯಲು ಮುಂದಾಗಿದ್ದು ಅಂಚೆ ಕಚೇರಿ ಸಿಬ್ಬಂದಿ ಪರದಾಡುವಂತಾಗಿದೆ. ಕಚೇರಿಯ ಇತರೆ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿ ಹೇಳಿಕೊಂಡಿದ್ದಾರೆ.

ಅಂಗನವಾಡಿಗಳಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಹೊಸ ಮೆನು! ಏನೆಲ್ಲಾ ಇರಲಿದೆ?

ಅಂಚೆ ಇಲಾಖೆ ಸಿಬ್ಬಂದಿ ಪರದಾಟ:

ಗ್ರಾಹಕರು ಅಗತ್ಯವಾದ ದಾಖಲೆ ನೀಡಿ ಖಾತೆ ತೆರೆಯಬೇಕು ಎಂದು ಹೇಳಿದ್ರೆ ನಮಗೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ರೆ ಸರ್ಕಾರದಿಂದ ಗ್ರಾಹಕರ ಖಾತೆಗೆ ಹಣ ಬರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಾವು ಜನರಿಗೆ ಎಷ್ಟೇ ಹೇಳಿದರು ಅವರು ಕೇಳುತ್ತಿಲ್ಲ, ಎರಡು ದಿನಗಳಿಂದ ಖಾತೆ ತೆರೆಯಲು ಜನರ ನೂಕು ನುಗ್ಗಲು ಏರ್ಪಟ್ಟಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಈ ಹಿಂದೆ ಟಕಾಟಕ್ ಸದ್ದು:

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರದ ದಿನವೇ ಮಹಿಳೆಯರ ಖಾತೆಗೆ ಟಕಾಟಕ್ ಹಣ ಜಮಾವಣೆ ಮಾಡಲಾಗುವುದು ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಣೆ ಮಾಡಿದ್ದರು. ಅದರ ಪರಿಣಾಮವಾಗಿ ಪೋಸ್ಟ್‌ ಆಫೀಸ್‌ಗಳಲ್ಲಿ ಖಾತೆಯನ್ನು ತೆರೆಯಲು ಮಹಿಳೆಯರು ಮುಗಿಬಿದ್ದಿದ್ದರು. ಅವರಲ್ಲಿ ಹೆಚ್ಚಿನವರು ಮುಸ್ಲಿಂ ಮಹಿಳೆಯರೇ ಇದ್ದು, ಪ್ರತಿ ತಿಂಗಳು ಕೂಡ 8500 ರೂಪಾಯಿ ಹಣ ಬರಲಿದೆ ಎಂಬ ನಿರೀಕ್ಷೆಯಲ್ಲಿ ಪೋಸ್ಟ್ ಆಫೀಸ್ ನ ಮುಂದೆ ಮಹಿಳೆಯರು ಕ್ಯೂ ನಿಂತಿದ್ದರು.

ರಾಹುಲ್‌ ಗಾಂಧಿ ತಮ್ಮ ಖಾತೆಗಳಿಗೆ ಹಣ ಹಾಕುತ್ತಾರೆ ಎಂದು ಅನೇಕ ಮಹಿಳೆಯರು ಅಕೌಂಟ್‌ ಗಳನ್ನು ತೆರೆಯಲು ಮುಗಿಬಿದ್ದಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ಬಗ್ಗೆ ಮಹಿಳೆಯರಿಗೆ ಆಶ್ವಾಸನೆ ನೀಡಲಾಗಿತ್ತು. ಜೊತೆಗೆ ರಾಹುಲ್‌ ಗಾಂಧಿ ಸಹ ತಮ್ಮ ಭಾಷಣದಲ್ಲಿ ಟಕಾಟಕ್‌ ಹಣ ಹಾಕುವ ಬಗ್ಗೆ ಭರವಸೆ ನೀಡಿದ್ದರು. ಅದನ್ನ ನಂಬಿ ಸಾವಿರಾರು ಮಹಿಳೆಯರು ಖಾತೆ ತೆರೆದಿದ್ದರು. ಆದರೆ ಇದೀಗ ಟಕಾಟಕ್‌ ಕೈಕೊಟ್ಟಿದ್ದರೂ, ಮೋದಿ ಹಣ ಹಾಕಬಹುದು ಎಂಬ ಆಸೆಯಲ್ಲಿ ಮಹಿಳೆಯರು ಖಾತೆ ತೆರೆಯಲು ಮುಗಿಬಿದ್ದಿದ್ದಾರೆ.

ಇತರೆ ವಿಷಯಗಳು:

ಬಜೆಟ್‌ ಘೋಷಣೆ ಜೊತೆ ಆಗಸ್ಟ್ 1 ರಿಂದ ಈ ನಿಯಮಗಳಲ್ಲಿ ಬದಲಾವಣೆ ಜಾರಿ!

ಮನೆ ಖರೀದಿದಾರರಿಗೆ ಬಜೆಟ್ ವರದಾನ.!!! ಬಡ ಮತ್ತು ಮಧ್ಯಮ ವರ್ಗದವರಿಗೆ ಮತ್ತೊಮ್ಮೆ ಬಂಪರ್ ಆಫರ್

Leave a Reply

Your email address will not be published. Required fields are marked *