ಹಲೋ ಸ್ನೇಹಿತರೆ, ಲೋಕಸಭೆ ಚುನಾವಣೆ ಮುಗಿಯುತ್ತಿದ್ದ ಹಾಗೇ ಅಂಚೆ ಕಛೇರಿಯಲ್ಲಿ ಖಾತೆ ತೆರೆಯಲು ಮಹಿಳೆಯರು ಸಾಲುಗಟ್ಟಿ ನಿಂತಿದ್ದಾರೆ. ನೂರಾರು ಜನರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾತೆಯನ್ನು ತೆರೆಯುತ್ತಿದ್ದಾರೆ. ಮಹಿಳೆಯರು ಈ ರೀತಿ ಖಾತೆ ತೆರೆಯಲು ಕಾರಣವೇನು? ಈ ಬಗ್ಗೆ ಸಂಫೂರ್ಣವಾಗಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಕ್ಷಣಾ ಸೇವೆಗಳ ನೇಮಕಾತಿಯಾದ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸಿ, ಪ್ರತಿ ತಿಂಗಳು ಪ್ರತಿ ಮಹಿಳೆಯ ಖಾತೆಗೆ 8,500 ರೂ.ಗಳನ್ನು ಜಮಾ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಬಿಹಾರದಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳ ಪರವಾಗಿ ಬ್ಯಾಕ್ ಟು ಬ್ಯಾಕ್ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶಾದ್ಯಂತ ಬಿಜೆಪಿ ಬಣದ ಪರವಾಗಿ ಸ್ಪಷ್ಟ ನಿಲುವು ಇಲ್ಲದಿರುವುದರಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾವುದಿಲ್ಲ ಎಂದು ಪ್ರತಿಪಾದಿಸಿದರು.
ಇದನ್ನು ಓದಿ: ಚಿನ್ನದ ಬೆಲೆ ಪ್ರತಿ 10ಗ್ರಾಂ ಗೆ 50,000 ಕ್ಕೆ ಇಳಿಕೆ..!
ಈ ಲೋಕಸಭಾ ಚುನಾವಣೆ ನಡುವೆ ಪ್ರತಿ ತಿಂಗಳು ಪ್ರತಿ ಮಹಿಳೆಯ ಖಾತೆಗೆ 8,500 ರೂ.ಗಳನ್ನು ಜಮಾ ಮಾಡಲಾಗುವುದು ಎಂದು ಕಾಂಗ್ರೆಸ್ ಹೇಳಿದ ಬೆನ್ನಲೇ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಪೋಸ್ಟ್ ಆಫೀಸ್ ಮುಂದೆ ಮಹಿಳೆಯರು ಕ್ಯೂ ನಿಂತಿರುವುದು ಕಂಡು ಬಂದಿದೆ. ಬೆಂಗಳೂರಿನ ಕೆಲವು ಪೋಸ್ಟ್ ಆಫೀಸ್ ಮುಂದೆ ನೂರಾರು ಮಹಿಳೆಯರು ಸಾಲಾಗಿ ನಿಂತಿರುವುದು ಕಂಡು ಬಂದಿದೆ.
ಈ ನಡುವೆ ಪೋಸ್ಟ್ ಆಫೀಸ್ ಅಧಿಕಾರಿಗಳು ಮಹಿಳೆಯರು ಕ್ಯೂ ನಿಂತುಕೊಂಡಿರುವುದನ್ನು ಗಮನಿಸಿ, ಯಾರು ಕೂಡ ಗಾಳಿ ಸುದ್ದಿಗೆ ಕಿವಿ ಕೊಡದೇ ಸಾವಾಧಾನವಾಗಿ ಬಂದು ಖಾತೆ ತೆರೆಯಿರಿ ಎನ್ನುತ್ತಿದ್ದಾರೆ. ಕಳೆದ ಹದಿನಾಲ್ಕು ದಿನದಿಂದ ಈ ರೀತಿಯ ಸನ್ನಿವೇಶಗಳು ನಿರ್ಮಾಣವಾಗುತ್ತಿದ್ದು, ಬೆಳ್ಳಂ ಬೆಳಗ್ಗೆ ಬಂದು ಟೋಕನ್ ಪಡೆದುಕೊಳ್ಳುತ್ತಿರುವುದು ಅಧಿಕಾರಿಗಳಿಗೆ ಕಂಡು ಬಂದಿದೆ.
ಇತರೆ ವಿಷಯಗಳು:
ಮುಂದಿನ ತಿಂಗಳು 12 ದಿನಗಳವರೆಗೆ ಬ್ಯಾಂಕ್ ಬಂದ್!
ಅನ್ನದಾತರಿಗೆ ಶಾಕಿಂಗ್ ಬ್ರೇಕಿಂಗ್ ನ್ಯೂಸ್.!! ಬಿತ್ತನೆ ಬೀಜ ದರ ರಾಜ್ಯದಲ್ಲಿ ಏರಿಕೆ