ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ: ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆ!

ಬೆಂಗಳೂರು: ಬಿಸಿಲು, ಬರ, ತಾಪಮಾನ ಏರಿಕೆ, ನೀರಿನ ಕೊರತೆ ಇಂತಹ ಹಲವು ಕಾರಣಗಳಿಂದ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಬಡವರು, ಮಧ್ಯಮ ವರ್ಗದವರು ತತ್ತರಿಸಿ ಹೋಗಿದ್ದಾರೆ.

Price Hike in Karnataka

ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದೆ. ಕಳೆದ 15 ದಿನದಲ್ಲಿ ಆಹಾರ ಪದಾರ್ಥಗಳ ಬೆಲೆ ಭಾರೀ ಏರಿಕೆಯನ್ನು ಕಂಡಿದೆ. ಇಳುವರಿಯು ಕಡಿಮೆಯಾಗಿ ಬೇಳೆ ಕಾಳುಗಳ ಕೊರತೆಯು ಕಂಡು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಕಿ ಮತ್ತು ತೊಗರಿಬೇಳೆ ಬೆಲೆ ಶೇ. 15ರಷ್ಟು ಏರಿಕೆಯನ್ನು ಕಂಡಿದ್ದು, ಗೋಧಿ ಹಿಟ್ಟು, ಉದ್ದಿನ ಬೇಳೆಯ ದರ ಶೇ. 10ರಷ್ಟು ಏರಿಕೆಯನ್ನು ಕಂಡಿದೆ.

ನಾಟಿ ಬೀನ್ಸ್ ನ ಬೆಲೆ 1 ಕೆಜಿಗೆ 200 ರೂ. ತಲುಪಿದ್ದು, ಸೇಬು ಹಣ್ಣಿನ ಬೆಲೆ 200 ದಾಟಿದೆ. ಸೇಬು ಕೆಜಿಗೆ 280 ರೂಪಾಯಿಗಳ ವರೆಗೆ ಮಾರಾಟವಾಗುತ್ತಿದೆ. ದಾಳಿಂಬೆಯ ಬೆಲೆಯು ಕೆಜಿಗೆ 220 ರೂ.ನಿಂದ 260 ರೂ.ವರೆಗೆ ಇದ್ದು, ತೊಗರಿ ಬೇಳೆಯು 180 ರಿಂದ 200 ರೂಪಾಯಿವರೆಗೂ ಇದೆ.

  • ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 10 ರಿಂದ 15 ರೂ.,
  • ಸಬ್ಬಸಿಗೆ 30 ರಿಂದ 40 ರೂ.,
  • ಮೆಂತೆ 20 ರಿಂದ 25 ರೂ.,

ಪೋಸ್ಟ್‌ ಆಫೀಸ್‌ ಭರ್ಜರಿ ಕೊಡುಗೆ.!! ಒಮ್ಮೆ ಹಣ ಇಟ್ರೆ ಲೈಫ್‌ ಸೆಟಲ್

  • ಪಾಲಕ್ ಸೊಪ್ಪು 30 ರೂ.,
  • ಕರಿಬೇವು 10 ರಿಂದ 15 ರೂ.,
  • ಸೌತೆಕಾಯಿ ಕೆಜಿಗೆ 60 ರಿಂದ 70 ರೂ.,
  • ಒಂದು ನಿಂಬೆಹಣ್ಣು 10 ರೂ., 3 ನಿಂಬೆಹಣ್ಣಿಗೆ 20 ರೂಪಾಯಿ ದರ ಇದೆ.

ಕಳೆದ ವರ್ಷವು ಕೆಜಿಗೆ 160 ರೂಪಾಯಿ ಇದ್ದ ಕೋಳಿಯ ಮಾಂಸದ ಬೆಲೆಯು ಈಗ 260 ರೂಪಾಯಿಯನ್ನು ದಾಟಿದೆ. ವಿತೌಟ್ ಸ್ಕಿನ್ 320 ರೂ. ಏರಿಕೆಯಾಗಿದೆ. ಬೋನ್ ಲೆಸ್ ಚಿಕನ್ ನ ಬೆಲೆ ಕೂಡ ಏರಿಕೆಯಾಗಿದ್ದು, ನಾಟಿ ಕೋಳಿ ಬೆಲೆ ಕೆಜಿಗೆ 600 ರಿಂದ 700 ರೂ. ವರೆಗೆ ಇದೆ. ಕುರಿ ಮಾಂಸದ ಬೆಲೆಯು ಕೆಜಿಗೆ 700 ರೂಪಾಯಿಗೆ ತಲುಪಿದ್ದು, ಸ್ಪೆಷಲ್ ಕುರಿ ಮಟನ್ ಕೆಜಿಗೆ 800 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಕಾಳು ಮೆಣಸಿನ ಬೆಲೆ ಕೂಡ ಏರಿಕೆಯಾಗಿದ್ದು ಕೆಜಿಗೆ 750 ರಿಂದ 850 ರೂಪಾಯಿ ಇದೆ. ಇದರ ಜೊತೆಗೆ ಬ್ಯಾಡಗಿ ಮೆಣಸಿನಕಾಯಿ ಕೆಜಿಗೆ 280 ರೂಪಾಯಿಯವರೆಗೆ ಮಾರಾಟವಾಗಿದೆ.

ಇತರೆ ವಿಷಯಗಳು:

ರಾಜ್ಯದಲ್ಲಿ ಮತ್ತೆ 1 ವಾರಗಳ ಕಾಲ ಭಾರಿ ಮಳೆ, ಕರ್ನಾಟಕದ ಈ 5 ಜಿಲ್ಲೆಗಳಿಗೆ ಬಾರಿ ಮಳೆಯಾಗಲಿದೆ.

ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.!! ಇಂದಿನ ಬೆಲೆ ಏಷ್ಟು ಗೊತ್ತಾ??

Leave a Reply

Your email address will not be published. Required fields are marked *